ಅಂಕಣಗಳು

ನರ್ಸಿಂಗ್ ಕಾಲೇಜ್ಗೆ ಪ್ರಿನ್ಸಿಪಾಲ್ರು ಯಾರೋ?

'ವಸಿ ಅಮಿಕ್ಕಂಡು ಕೂತ್ಕತೀಯ. ಮಾನ, ಮರ್ವಾದೆ ಅಂದ್ರೆ ಕೆಜಿಗೆಷ್ಟು ಅಂತ ಕೇಳೋ ಜನ ಕಮ್ಲ ಪಕ್ಸುದಾಗೆ ಅವ್ರೆ.

'ವಸಿ ಅಮಿಕ್ಕಂಡು ಕೂತ್ಕತೀಯ. ಮಾನ, ಮರ್ವಾದೆ ಅಂದ್ರೆ ಕೆಜಿಗೆಷ್ಟು ಅಂತ ಕೇಳೋ ಜನ ಕಮ್ಲ ಪಕ್ಸುದಾಗೆ ಅವ್ರೆ. ವೋಗಿ ವೋಗಿ ನೀನು ಅವ್ರುಗೆ ಯೋಳ್ತಾಯಿದ್ದೀಯ. ಬುದ್ಧಿ ಐತಾ ನಿಂಗೆ ? ' ಅಂತ ಅಮಾಸೆ ಬೈದ.

ವತ್ತಾರೆ ವತ್ತಾರೆ ಮನೆ ಮುಂದ್ಲಾಗಡೆ ಬಾಯಿ ಮ್ಯಾಲೆ ಕೈ ಮಡಿಕ್ಕಂಡು ಮೈಲಾರಿ ಕೂತಿದ್ದ. ಅಮಾಸೆ ನೋಡ್ಬುಟ್ಟು ಮಾತಾಡ್ಸಕ್ಕೆ ಅಂತ ಬಂದ.
' ಇದ್ಯಾಕಣ್ಣ ಬಾಯಿ ಬಂದ್ ಮಾಡ್ಕಂಡು ಕೂತ್ಕಂಡಿದ್ದೀಯ. ನೀನು ಬಾಯಿ ಬಂದ್ ಮಾಡ್ಕಂಡ್ರೆ ಬಿಬಿಸಿಯೋರು ರೇಡಿಯೋ ಬಂದ್ ಮಾಡ್ಕಂಡಂಗೆ ಕಣಣ್ಣೋ ' ಅಂದ ಅಮಾಸೆ.  ' ವೋಗಲೇ ವೋಗು, ನನ್ ಬಾಧೆ ನಂಗೆ, ನಿಂಗೆ ತಮಾಸಿ. ವೋಗಿ ಕೇಮೆ ನೋಡೋಗು ' ಅಂದ ಮೈಲಾರಿ.
' ಶಿಟ್ಟು ಮಾಡ್ಕಬ್ಯಾಡ, ಅದೇನು ಅಂತ ಯೋಳಣ್ಣೋ ' ಅಂದ ಅಮಾಸೆ. 'ಏನಿಲ್ಲಲೇ ಬಡ್ಡೆತ್ತದೆ, ವತ್ತಾರೆ ಎದ್ದು ಹಲ್ಲುಜ್ಜವ ಅಂತ ಬಚ್ಲು ಮನೆಗೆ ವೋದೆ ಕಣ್ಲಾ, ನನ್ನೆಂಡ್ರು ಯಾವ್ದೋ ಟೂಬು ತಂದು ಮಡ್ಗಿದ್ಲು. ಹಲ್ಲುಜ್ಜೋ ಪೇಸ್ಟು ಅಂತ ತಿಳ್ಕಂಡು ತಿಕ್ಬುಟ್ಟೆ. ಬಾಯಿಗೆ ಬೆಂಕಿ ಹಾಕ್ದಂಗೆ ಆಬುಟ್ಟದೆ. ಏನಲಾ ಮಾಡಾದು' ಅಂದ ಮೈಲಾರಿ.  ' ನೀನು ಕಲ್ಲಿದ್ಲು ತಕ್ಕಂಡು ಯಾವಾಗ್ಲೂ ಹಲ್ಲು ತಿಕ್ತಾಯಿದ್ದೆ. ಪೇಸ್ಟು ಯಾಕೆ ಬೇಕಾಯಿತ್ತು ಅಂತೀನಿ. ಅಲ್ಲ ಅದೆಂಥಾ ಪೇಸ್ಟು ಕಣಣ್ಣ ಬಾಯಿ ಸುಟ್ಟೋಗಂಥದ್ದು. ಎಲ್ಲೋ ನಿನ್ನೆಂಡ್ರು ಅಪ್ ರೇಟ್ನಾಗೆ ತಂದಿರ್ಬೇಕು ಬುಡಣ್ಣ ' ಅಂದ ಅಮಾಸೆ.
' ಸುಮ್ಕೆ ಇರಲೇ, ಕೇಳುಸ್ಕಂಬುಟ್ಟಾಳು, ಅವ್ಳು ತಂದಿರಾದು ಸರ್ಯಾಗೇ ಅದೆ. ಅದು ಬಚ್ಲು ತಿಕ್ಕೋ ಪೇಸ್ಟು ಅಂತೆ. ನಂಗೆ ತಿಳೀದೆ ಹಲ್ಲು ತಿಕ್ಕಕ್ಕೆ ಬಾಯಿಗೆ ಹಾಕ್ಕಂಬುಟ್ಟೆ, ಅದೇ ಆಗಿದ್ದು ಎಡ್ವಟ್ಟು ' ಅಂತಂದ ಮೈಲಾರಿ. ಅಮಾಸೆ ವುಳ್ಳಾಡಿ ವುಳ್ಳಾಡಿ ನಗಾಡ್ಬುಟ್ಟ.
' ಅದುಕ್ಕೆ ಕಣ್ಲಾ ನಾನು ಬಾಯಿ ಮುಚ್ಕಂಡು ಇದ್ದಿದ್ದು. ಸುಮ್ಕೆ ಇದ್ದೋನ್ನ ಕೇಳ್ಬುಟ್ಟು ಈವಾಗ ನಗಾಡ್ತಾಯಿದ್ದೀಯ ಬಡ್ಡೀ ಹೈದನ್ನ ತಂದು' ಅಂದ ಮೈಲಾರಿ. ' ಅಲ್ಲ ಕಣಣ್ಣ ರಾಜ್ಕೀಯದಾಗೆ ಇರೋರೂವೆ ನಿನ್ನಂಗೆ ಬಾಯಿ ಮುಚ್ಕಂಡು ಇದ್ರೆ ಏಟು ಸಂದಾಕಿರ್ತದೆ ಅಲ್ವಾ ? ಆ ರೇಣ್ಕಪ್ಪುನ್ನ ನೋಡು, ಮಾತಾಡಿ ಮಾತಾಡಿ ಚಿತ್ರಾನ್ನ ಆಬುಟ್ರಪ್ಪ. ಮಂತ್ರಿ ಪೋಸ್ಟೂ ಕಿತ್ಕಂಡು ವೋಯ್ತು ' ಅಂತೇಳ್ದ ಅಮಾಸೆ. ' ಪಾಪ ಕಣಲೇ, ಯಡೂರಪ್ನೋರು ಪಕ್ಸ ಬುಟ್ಟು ವೋದ್ರೂವೆ ರೇಣ್ಕಪ್ಪ ಕಮ್ಲ ಪಕ್ಸದಾಗೆ ಬಾಯ್ಗೆ ಅಕ್ಕಿ ಕಾಳು ಹಾಕ್ಕಂಡು ಇದ್ದೋಗಿದ್ರು. ಯಾಕಂತೆ ಮಂತ್ರಿ ಪೋಸ್ಟಿಂದ ಕಿತ್ತಾಕಿದು ್ದ' ಅಂತ ಮೈಲಾರಿ ಕೇಳ್ದ.
'ಸದಾನಂದಗೌಡ್ರು ಸಿಎಂ ಆಗಿದ್ದಾಗ ಅವ್ರು ವುಂಡಿಗೆ ನಾನು ಕಾಸಾಕಿದ್ದೆ ಅಂತ ಟೀವಿನೋರು ಮುಂದ್ಲಾಗಡೆ ಯೋಳುದ್ರು. ಅವ್ರು ಹಂಗೆ ಯೋಳಿದ್ದೇ ತಡ ಕಣಣ್ಣ, ಸಿಎಂ ಸೆಟ್ರು ಮಂತ್ರಿ ಪೋಸ್ಟು ಕಿತ್ಕಂಬುಟ್ರು ಅಂತೀನಿ ' ಅಂದ ಅಮಾಸೆ. ' ವೋಯ್ತು ಕಣ್ಲಾ, ಮಾನ, ಮರ್ವಾದೆ ಎಲ್ಲಾನೂವೆ ವೊಂಟೋಯ್ತು ' ಅಂದ ಮೈಲಾರಿ. ' ನಿಂಗೆ ಇದ್ರೆ ತಾನೆ ವೋಗಾದು ಬುಡು ' ಅಂದ ಅಮಾಸೆ.
' ನಿನ್ ಬಾಯ್ಗೆ ಹಳೇ ಎಕ್ಕಡ ಸಿಕ್ಕಾಕ, ಅಲ್ಲಿ ಸುತ್ತಿ ಇಲ್ಲಿ ಸುತ್ತಿ ನನ್ ಬುಡುಕ್ಕೆ ಬತ್ತೀಯಲ್ಲೋ. ನಾನು ಯೋಳಿದ್ದು ಕಮ್ಲ ಪಕ್ಸದ ಮಾನ, ಮರ್ವಾದೆ ವೋಯ್ತು ಅಂತ. ತಿಳೀತೇನಲೇ ಬೇವಾರ್ಸಿ ' ಅಂದ ಮೈಲಾರಿ.
' ವಸಿ ಅಮಿಕ್ಕಂಡು ಕೂತ್ಕತೀಯ. ಮಾನ, ಮರ್ವಾದೆ ಅಂದ್ರೆ ಕೆಜಿಗೆಷ್ಟು ಅಂತ ಕೇಳೋ ಜನ ಕಮ್ಲ ಪಕ್ಸುದಾಗೆ ಅವ್ರೆ. ವೋಗಿ ವೋಗಿ ನೀನು ಅವ್ರುಗೆ ಯೋಳ್ತಾಯಿದ್ದೀಯ. ಬುದ್ಧಿ ಐತಾ ನಿಂಗೆ ? ' ಅಂತ ಅಮಾಸೆ ಬೈದ. ' ವೋಗ್ಲಿ ಬುಟ್ಟಾಕಲೇ, ವತ್ತಾರೆ ವತ್ತಾರೆ ನನ್ ಹೆಗ್ಲು ಯಾಕಲೇ ಏರ್ಕಂಡಿದ್ದೀಯ. ಮಂತ್ರಿ ಪೋಸ್ಟು ವೋಯ್ತು. ಪಾರ್ಟಿಯಿಂದ ಆಚ್ಗೂ ಹಾಕ್ಬುಟ್ರು. ರೇಣ್ಕಪ್ಪ ಈವಾಗ ಏನು ಮಾಡ್ತರೋ ಏನೋ ? ' ಅಂತ ಮೈಲಾರಿ ಯೋಳ್ದ.
' ನರ್ಸಿಂಗ್ ಕಾಲೇಜು ವೋಪನ್ ಮಾಡಿ, ಅಲ್ಲಿಗೆ ಬರೋ ನರ್ಸುಗಳ್ಗೆ ರಾಜ್ಕೀಯದ ಬಗ್ಗೆ ಟ್ರೇನಿಂಗು ಕೊಡ್ತರಂತೆ. ಅಲ್ಲ, ನರ್ಸುಗ್ಳು ಬತ್ತರ ಅವ್ರು ಕಾಲೇಜ್ಗೆ ? ' ಅಂದ ಅಮಾಸೆ.
' ವಸಿ ಮೆತ್ಗೆ ಮಾತಾಡಲೇ ಬೇಕೂಪ, ನರ್ಸು ನರ್ಸು ಅಂತ ಯಾಕಲೇ ಬಡ್ಕತೀಯ. ಹೆಣ್ಣಕ್ಳು ಏನರ ಕೇಳುಸ್ಕಂಡ್ರೆ ಕೆರ ತಕ್ಕತರೆ ಕೈಗೆ'  ಅಂದ ಮೈಲಾರಿ. ' ವೋಗೋಗಣ್ಣ, ಆ ನರ್ಸಮ್ಮನೇ ಬಿಗ್‌ಬಾಸ್ ಮನ್ಯಾಗೆ ಕೂತ್ಕಂಡು ನಂಗೆ ರೇಣ್ಕಪ್ನೋರು ಜತೆನಾಗೆ ಕುಚು ಕುಚು ವೋಗಯಾ ಅಂತ ಹಾಡು ಯೋಳ್ತಾಯಿತ್ತು. ಅದುನ್ನು ಇಡೀ ರಾಜ್ಯದ ಜನ ಕೇಳುಸ್ಕಂಡವ್ರೆ, ನೋಡವ್ರೆ ' ಅಂದ ಅಮಾಸೆ. 'ವೋಗ್ಲಿ ರೇಣ್ಕಪ್ಪ ನರ್ಸಿಂಗ್ ಕಾಲೇಜು ಮಾಡುದ್ರೆ ಪ್ರಿನ್ಸಿಪಾಲು ಯಾರು ಆಯ್ತರಂತೆ? ಅಂದ ಮೈಲಾರಿ. 'ಇನ್ಯಾರು..? ಅಂತ ಮಾತು ಕಟ್ ಮಾಡಿ ಅಮಾಸೆ ಜಾಗ ಬುಟ್ಟ.

-ಕೆ.ವಿ.ಪ್ರಭಾಕರ್
prabhukolar@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಬೆಂಗಳೂರಿನಲ್ಲಿ 5 ಪ್ರತ್ಯೇಕ ಕಮಿಷನರೇಟ್‌ ಸ್ಥಾಪನೆ; 1,022 ಹೊಸ ಹುದ್ದೆ ಸೃಷ್ಟಿಗೆ ಸಚಿವ ಸಂಪುಟ ಅಸ್ತು

ಹಬ್ಬಗಳ ಹೊತ್ತಲ್ಲೆ ಕಾಂಗ್ರೆಸ್‌ನಿಂದ ಜನತೆಗೆ ಮತ್ತೊಂದು ಶಾಕ್: Nandini ಹಾಲಿನ ದರ ಲೀಟರ್‌ಗೆ 8 ರೂ. ಏರಿಕೆಗೆ ಸಂಪುಟ ಸಮ್ಮತಿ!

ನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್‌ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ