ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಭಾರತದಲ್ಲಿ ಬದಲಾಗದ ಸಂಗತಿಗಳು

Srinivasa Murthy VN
Updated On : 18 May 2013, 10:31 am

ಭಾರತದಲ್ಲಿ ಬದಲಾಗದ ಸಂಗತಿಗಳು: ಅರ್ನಬ್ ಗೋಸ್ವಾಮಿ ಆಕ್ರೋಶ, ಶಿಂಧೆ ಕೂಲ್, ಸುಷ್ಮಾ ಶಾಣ್ಯಾತನ, ನರೇಂದ್ರ ಮೋದಿ ಪ್ರಭಾವ, ರಾಹುಲ್ ಗಾಂಧಿ ಯೌವನ..
-ಮಿಸ್ಟರ್ ಫನ್

ಭಾರತದ ಹೆಚ್ಚಿನ ನೀತಿಗಳೆಲ್ಲ 'ಫಿಕ್ಸ್‌' ಆದವುಗಳೇ. ಆದರೆ ಇಲ್ಲಿ ಸೆಲಿಬ್ರಿಟಿಗಳು ಇಲ್ಲವಾದ್ದರಿಂದ ಆ ಬಗ್ಗೆ ಗಮನ ಹರಿಯುತ್ತಿಲ್ಲ.
-ದೇವೀಂದ್ರ ಶರ್ಮಾ

ಸಾವಿರ ಸುಳ್ಳುಗಳ ಪ್ರಯಾಣ ಒಂದು ಹಗರಣದಿಂದ ಶುರುವಾಗುತ್ತದೆ. ಒಂದು ಕುಟುಂಬದಿಂದ ಎಂದೂ ಓದಿಕೊಳ್ಳಬಹುದು.
-ಆರ್. ಎಸ್. ಬೇನ್ಸ್

ಈ ಚಂದ್ರ ಒಂದು ವಿಚಿತ್ರವೇ ಸರಿ. ಬಾಲ್ಯದಲ್ಲಿ ಮಾಮನಾಗಿ ಕಂಡರೆ ಯೌವನದಲ್ಲಿ ಸಖಿಯ ಮುಖ ಬಿಂಬಿಸುತ್ತಾನೆ.
-ಬಾಬು ಭಯ್ಯಾ

ಹುಡುಗಿಯರು ಮತ್ತು ಮಹಿಳೆಯರಿಗೆ ಭಯರಹಿತ ಮತ್ತು ದೌರ್ಜನ್ಯಮುಕ್ತ ಪರಿಸರವನ್ನು ನಿರ್ಮಿಸುವುದಕ್ಕೆ ನಾವು ವಿಫಲರಾಗಿದ್ದೇವೆಂಬುದು ಸಮಾಜದ ಭಾಗವಾಗಿ ನನಗೆ ತುಂಬ ನೋವಿನ ಸಂಗತಿ.
-ಸೋನಿಯಾ ಗಾಂಧಿ, ಯುಪಿಎ ಅಧ್ಯಕ್ಷೆ

ನಟನೆಯಂಥ ಕ್ಷೇತ್ರದಲ್ಲಿ ಮಾಜಿ ಪ್ರೇಯಸಿ ಜತೆ ಕೆಲಸ ಮಾಡುವುದು ವಿಶೇಷವೇ ಆಗಿರುತ್ತದೆ. ಪರಸ್ಪರ ತಿಳಿದುಕೊಂಡಿರುತ್ತೇವಾದ್ದರಿಂದ ಮುಖವಾಡ ಧರಿಸಬೇಕಿಲ್ಲ. ಆದರೆ ಸಲ್ಲಾಪದ ಬಾಂಧವ್ಯ ಮುಕ್ತಾಯವಾಗಿದೆ ಎಂಬ ವಾಸ್ತವ ಒಪ್ಪಿಕೊಂಡಿರಬೇಕು.
-ರಣಬೀರ್ ಕಪೂರ್, ಬಾಲಿವುಡ್ ನಟ

ಆಹಾರ ಭದ್ರತೆ ಮಸೂದೆ ಪಾಸ್ ಆಗದಿರುವುದಕ್ಕೆ ಪ್ರತಿಪಕ್ಷಗಳು ಕಾರಣ ಎಂದು ದೂರುವುದನ್ನು ಬಿಟ್ಟು, ಛತ್ತೀಸ್‌ಗಢ ಮಾದರಿಯಲ್ಲಿ ಎಲ್ಲ ಬಡವರನ್ನೂ ಒಳಗೊಳ್ಳುವಂಥ ಆಹಾರ ಭದ್ರತೆ ರೂಪಿಸುವುದಕ್ಕೆ ರಾಹುಲ್ ಗಮನ ನೀಡಬೇಕು.
-ಪ್ರಕಾಶ್ ಜಾವ್ಡೇಕರ್, ಬಿಜೆಪಿ ವಕ್ತಾರ

ಆಡ್ವಾಣಿಯವರನ್ನು ಟೀಕಿಸಿದ್ದಕ್ಕೆ ಅಮಾನತು ಕ್ರಮ ಕೈಗೊಂಡಿರುವುದು ಪಕ್ಷವು ಆತ್ಮಾವಲೋಕನಕ್ಕೆ ಸಿದ್ಧವಿಲ್ಲ ಎಂಬುದನ್ನು ಸೂಚಿಸುತ್ತದೆ. ನಮ್ಮ ಪ್ರತಿಬಿಂಬ ಚೆನ್ನಾಗಿಲ್ಲ ಎಂದು ಕನ್ನಡಿಯನ್ನೇ ಒಡೆದಂತಿದೆ.
-ಲೆಹರ್ ಸಿಂಗ್, ಎಂಎಲ್‌ಸಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement