ಅಂಕಣಗಳು

ಮಣ್ಣಿನ ಬಗ್ಗೆ ಮಾಹಿತಿ ಎಷ್ಟು?

ಮಣ್ಣಿನ ಮೇಲ್ಮೈಗಿಂತ ಮಣ್ಣಿನ ಕೆಳಗೇ ಹೆಚ್ಚು ಜೈವಿಕ ವೈವಿಧ್ಯತೆ ಇದೆ. ಮತ್ತು ಹೇಗೆ ಅದು ಪೃಥ್ವಿಯ ಜೀವನವನ್ನು ಸಮತೋಲನದಲ್ಲಿಡುತ್ತದೆ ಎನ್ನುವುದರ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಬೆಳಕು ಚೆಲ್ಲಿದೆ. ಆ ಲೇಖನದ ಆಯ್ದ ಭಾಗ ಇಲ್ಲಿದೆ.
ಜಗತ್ತಿನ ಜೈವಿಕ ವೈವಿಧ್ಯ ಅವಸಾನದ ಹಾದಿ ಹಿಡಿದಿರುವುದು ಎಲ್ಲರಿಗೂ ಗೊತ್ತೇ ಇದೆ. 2100ರ ವೇಳೆಗೆ ಜಗತ್ತಿನ ಅರ್ಧದಷ್ಟು ಜಗತ್ತಿನ ಸಸ್ಯ ಮತ್ತು ಪ್ರಾಣಿ ಸಂಕುಲಗಳು ಕಾಣೆಯಾಗಬಹುದು ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.
ಆದರೆ ನಮ್ಮ ಕಾಲ್ಕೆಗಳಗೇ ವಾಸಿಸುವ ಜೀವಿಗಳಿಗೆ ಎದುರಾಗಿರುವ ಕಂಟಕದ ಬಗ್ಗೆ ನಾವು ಗಮನ ಕೊಡುತ್ತಲೇ ಇಲ್ಲ. ವಿಜ್ಞಾನಿಗಳು ದಶಕಗಳ ಸಂಶೋಧನೆಗಳ ನಂತರ ಮಣ್ಣಿನಲ್ಲಿ ಅತಿ ಹೆಚ್ಚು ಜೈವಿಕ ವೈವಿಧ್ಯತೆಯಿದೆ ಎಂಬುದನ್ನು ಪತ್ತೆಹಚ್ಚಿದ್ದಾರೆ. ಪ್ರಪಂಚದ ಮೂರನೆಯ ಒಂದು ಭಾಗದಷ್ಟು ವೈವಿಧ್ಯಮಯ ಜೀವಿಗಳು ಅದರಲ್ಲಿ ಅಡಗಿವೆ. ಅವುಗಳ ಮತ್ತು ಅಸಂಖ್ಯ ಜೀವಿಗಳ ನಡುವಿನ ಸಂಬಂಧಗಳ ಬಗ್ಗೆಯೂ ನಮಗೆ ಅರಿವಿಲ್ಲ. ಭೂಮಿಯ ಜೈವಿಕ ವೈವಿಧ್ಯತೆ ಮಣ್ಣಿನಿಂದಲೇ ಉಳಿದುಕೊಂಡಿದೆ. ಮಣ್ಣಿನ ಪರಿಸರ ಹದಗೆಟ್ಟರೆ, ನಿಸ್ಸಂಶಯವಾಗಿಯೂ ಪ್ರಪಂಚದ ಆಹಾರ ವ್ಯವಸ್ಥೆಗೆ ಹಾನಿಯಾಗುತ್ತದೆ.  ಈ ಕುರಿತು ವಿಜ್ಞಾನಿಗಳು ವಿಜ್ಞಾನಿಗಳ ತಂಡವೊಂದು ನ್ಯೂಯಾರ್ಕ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ಸಂಶೋಧನೆ ನಡೆಸಿದೆ. ಅವರ ಮುಖ್ಯ ಗಮನ ಮಣ್ಣಿನಲ್ಲಿ ವಾಸಿಸುವ ಸೂಕ್ಷ್ಮಜೀವಾಣುಗಳು, ಫಂಗೈಗಳು ಮತ್ತು ಅವುಗಳ ನಡುವಿನ ಸಂಬಂಧತ್ತ ಹರಿದಿದೆ.
ಒಂದು ಸ್ಪೂನ್ ಮಣ್ಣಿನಲ್ಲಿ ಬಿಲಿಯನ್‌ಗಟ್ಟಲೇ ಸೂಕ್ಷ್ಮಜೀವಾಣುಗಳಿರುತ್ತವೆ. ಸಾವಿರಾರು ಫಂಗೈಗಳು ಮತ್ತು ಪ್ರೋಟೋಜೋವಾಗಳಿರುತ್ತವೆ, ಮಣ್ಣು ಹುಳುಗಳಿರುತ್ತವೆ. ಇವೆಲ್ಲ ಅದ್ಹೇಗೆ ಒಂದಕ್ಕೊಂದು ಹೊಂದಿಕೊಂಡು ಹೋಗುತ್ತವೆ ಎನ್ನುವುದೇ ಇಂದಿಗೂ ಬಗೆಹರಿಯದ ಕುತೂಹಲವಾಗಿದೆ.
'ಮಣ್ಣಿನ ಅಡಿಯಲ್ಲಿ ಫ್ಯಾಕ್ಟರಿಯೊಂದು ನಡೆಯುತ್ತಿದೆ. ಅದರಲ್ಲಿ ಮಣ್ಣು ಹುಳುಗಳು ಮತ್ತು ಸೂಕ್ಷ್ಮಜೀವಾಣುಗಳು ದುಡಿಯುತ್ತಿವೆ. ಪ್ರತಿಯೊಂದಕ್ಕೂ ತನ್ನದೇ ಆದ ಕೆಲಸವಿದೆ. ಒಂದು ಎಲೆ ಉದುರಿದಾಕ್ಷಣ ಅದನ್ನು ಎರೆಹುಳುಗಳು ಮತ್ತು ಗೆದ್ದಲುಗಳು ಚಿಕ್ಕ ತುಂಡುಗಳನ್ನಾಗಿ ಮಾಡುತ್ತವೆ. ನಂತರ ಸೂಕ್ಷ್ಮ ಜೀವಾಣುಗಳು ಅದರಲ್ಲಿನ ಪೌಷ್ಠಿಕಾಂಶಗಳನ್ನು ಬೇರ್ಪಡಿಸಿ ಸಸ್ಯಗಳಿಗೆ ಸಾಗಿಸುತ್ತವೆ' ಎನ್ನುತ್ತಾರೆ ಕೊಲೊರ್ಯಾಡೋ ವಿ.ವಿ.ಯ ಪ್ರೊಫೆಸರ್ ಡಯಾನಾ. ಹೆಚ್. ವಾಲ್.  ಈ ವ್ಯವಸ್ಥೆ ಅತ್ಯಂತ ಜಟಿಲವಾಗಿದೆ. ಮಣ್ಣಿಗೆ ನೀರನ್ನು ಶುದ್ಧೀಕರಿಸುವ ಶಕ್ತಿ ಇದೆ, ಅದು ಧೂಳು ಮತ್ತು ಸೂಕ್ಷ್ಮಜೀವಾಣುಗಳನ್ನು ಹಿಡಿದಿಟ್ಟು ನಮಗೆ ಉಸಿರಾಡಲು ಸ್ವಚ್ಛ ಗಾಳಿ ಒದಗಿಸುತ್ತದೆ, ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣವನ್ನು ಸಮತೋಲನದಲ್ಲಿಡುತ್ತದೆ. ಉಳುಮೆ, ಸವೆತ ಹೆಚ್ಚಾದಂತೆಲ್ಲ ನೆಲದಲ್ಲಿನ ಇಂಗಾಲ, ಇಂಗಾಲದ ಡೈ ಆಕ್ಸೈಡ್ ಆಗಿ ಪರಿವರ್ತನೆ ಹೊಂದಿ ವಾತಾವರಣ ಕಲುಷಿತಗೊಳ್ಳುತ್ತಿದೆ. ನೂತನ ಬೇಸಾಯ ಕ್ರಮಗಳು, ಕೀಟನಾಶಕಗಳು ಮತ್ತು ಕಾಂಕ್ರೀಟು ಕಾಡುಗಳ ನಿರ್ಮಾಣದಂತಹ ನಮ್ಮ ಆಧುನಿಕ ಜೀವನ ಶೈಲಿ ನೆಲದ ವೈವಿಧ್ಯವನ್ನು ಕೊನೆಗಾಣಿಸುತ್ತಿದೆ ಎನ್ನುತ್ತಾರವರು.
ಈ ಸಮಸ್ಯೆ ಪ್ರಪಂಚದಾದ್ಯಂತ ತೀವ್ರ ಸ್ವರೂಪ ಪಡೆದಿದೆ. ಆಫ್ರಿಕಾದಂತಹ ವೈವಿಧ್ಯಮಯ ರಾಷ್ಟ್ರದಲ್ಲೂ ಇಂದು ಬೇಸಾಯ, ಕಾಡು ನಾಶ ಹೆಚ್ಚಾಗಿದೆ. ಆರೋಗ್ಯಯುತ ಮಣ್ಣಿನಿಂದಾಗಿ ಮನುಷ್ಯ ಆರೋಗ್ಯವಂತನಾಗಿರುತ್ತಾನೆ ಎನ್ನುತ್ತಾರೆ ವಿಜ್ಞಾನಿಗಳು. ನೈಋತ್ಯ ಅಮೆರಿಕದಲ್ಲೀಗ ವ್ಯಾಲಿ ರೋಗ ಹರಡುತ್ತಿದೆ. ಅದಕ್ಕೆ ಮುಖ್ಯ ಕಾರಣ ಭೂಮಿಯ ಒಣಗುವಿಕೆ. ಭೂಮಿ ಒಣಗಿದಾಗ ಫಂಗಸ್ ಕಣಗಳು ಗಾಳಿಯೊಂದಿಗೆ ಬೆರೆತು ರೋಗ ಹರಡುತ್ತವೆ. 'ಮಣ್ಣಿನಲ್ಲಿನ ಜೈವಿಕ ವೈವಿಧ್ಯ ಹೆಚ್ಚಾದಂತೆಲ್ಲ, ಪ್ರಾಣಿ ಮತ್ತು ಸಸ್ಯಗಳಲ್ಲಿ ರೋಗಗಳ ಸಂಖ್ಯೆ ಕಡಿಮೆಯಾಗುತ್ತದೆ' ಎನ್ನುತ್ತಾರೆ ಕಾರ್ನೆಲ್ ವಿ.ವಿ.ಯ ಸಂಶೋಧಕ ಬಿ.ನೆಲ್ಸನ್.  ಈ ಸಮಸ್ಯೆಗೆ ಪರಿಹಾರವೇನು ಎನ್ನುವುದಕ್ಕೆ ನೆಲ್ಸನ್ ಕೆಲವು ಸಲಹೆಗಳನ್ನು ಕೊಡುತ್ತಾರೆ-'ರೈತರು ವಾರ್ಷಿಕ ಉಳುಮೆಯನ್ನು ಬಿಡಬೇಕು. ಹಾಗಾದಾಗ ಸತ್ತ ಸಸ್ಯಗಳಿಗೆ ಕೊಳೆಯಲು ಸಾಧ್ಯವಾಗುತ್ತದೆ. ಆ ಮೂಲಕ ಸೂಕ್ಷ್ಮ ಜೀವಾಣುಗಳಿಗೆ ಪೂರಕ ಆಹಾರ ಸಿಕ್ಕಂತಾಗಿ ಅವುಗಳ ಸಂಖ್ಯೆಯೂ ವೃದ್ಧಿಯಾಗುತ್ತದೆ. ಇದಕ್ಕೆ ಪ್ರತಿಯಾಗಿ ಅವು ಸಸ್ಯಗಳಿಗೆ ಬೇಕಿರುವ ಪೌಷ್ಠಿಕಾಂಶಗಳನ್ನು ಒದಗಿಸುತ್ತವೆ. ಇನ್ನು ಕೀಟನಾಶಕಗಳ ಬಳಕೆಯನ್ನು ನಿಲ್ಲಿಸುವುದರಿಂದಲೂ ಈ ಸಮಸ್ಯೆಯನ್ನು ಬಗೆಹರಿಸಬಹುದು.'

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!