ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಇದು ಯಾರ ಭದ್ರತೆ ಎಂಥ ರಮಣೀಯತೆ!

Srinivasa Murthy VN
Updated On : 2 Sept 2013, 12:11 pm

ಆಹಾರ ಭದ್ರತಾ ಕಾಯ್ದೆಯ ಬಗ್ಗೆ ಪರ-ವಿರೋಧಗಳ ಚರ್ಚೆಯಾಗುತ್ತಿದೆ. ಮತಬ್ಯಾಂಕ್ ಅನ್ನೇ ದೃಷ್ಟಿಯಲ್ಲಿಟ್ಟುಕೊಂಡು ರೂಪಿತಗೊಂಡಿರುವ ಯೋಜನೆಯನ್ನು ಅಮೂಲಾಗ್ರವಾಗಿ ವಿರೋಧಿಸುವ ಹಂತದಲ್ಲಿ ಯಾವ ರಾಜಕೀಯ ಪಕ್ಷಗಳೂ ಇಲ್ಲ ಎಂಬುದು ವಾಸ್ತವ. ಈ ತಾಕಲಾಟವನ್ನು ಬಿಂಬಿಸುವಂತೆ 'ಅನ್‌ರಿಯಲ್‌ಟೈಮ್ಸ್‌' ಜಾಲತಾಣ ಫೇಸ್‌ಬುಕ್ ಸ್ಟೇಟಸ್ ಮಾದರಿಯ ಕಾಲ್ಪನಿಕ ಸಂಭಾಷಣೆಯನ್ನು ಕೆತ್ತಿಟ್ಟಿದೆ. ನಿಮ್ಮ ಕಿರುನಗೆಗಾಗಿ...
ಸೋನಿಯಾ ಗಾಂಧಿ- ತನ್ನ ದೇಶದ ಬಡವರಿಗೆ ಹೊಟ್ಟೆ ತುಂಬಿಸುವ ಭರವಸೆಯನ್ನು ಭಾರತ ಈಡೇರಿಸಲಿದೆ ಎನ್ನುವುದು ಜಗತ್ತಿಗೆ ತಿಳಿಯಲಿದೆ. ಇನ್ನು ಮುಂದೆ ಯಾವೊಬ್ಬ ಭಾರತೀಯನೂ ಹಸಿವಿನಿಂದ ಬಳಲುವುದಿಲ್ಲ. ಆಹಾರ ಭದ್ರತಾ ಮಸೂದೆಯ ಮೂಲಕ, ಇಂದು ನಾವು ಭಾರತವನ್ನು ಇತಿಹಾಸ ಮಾಡುತ್ತಿದ್ದೇವೆ!
***
ಮಣಿ ಶಂಕರ್ ಅಯ್ಯರ್: ಭೇಷ್! ಭೇಷ್! ಸೋನಿಯಾ ಕೀ ಜೈ!!!
ಅಹ್ಮದ್ ಪಟೇಲ್: ಸೋನಿಯಾಜಿ...ಒಂದೇ ಒಂದು ಕರೆಕ್ಷನ್. 'ನಾವು ಭಾರತದಲ್ಲಿ ಇತಿಹಾಸ ಸೃಷ್ಟಿಸಿದ್ದೇವೆ ಅನ್ನಬೇಕು, ಭಾರತವನ್ನು ಇತಿಹಾಸ ಮಾಡುತ್ತಿದ್ದೇವೆ' ಎಂದಲ್ಲ. ಒಂದು ವೇಳೆ 'ಭಾರತದ ಆರ್ಥಿಕತೆ ಈಗ ಇತಿಹಾಸವಾಗಿದೆ' ಎಂದು ನೀವು ಹೇಳಲು ಹೊರಟಿದ್ದರೆಅಡ್ಡಿಯಿಲ್ಲ.
ಸೋನಿಯಾ ಗಾಂಧಿ: ಅದೇನಾದರೂ ಇರಲಿ. ನೀನು ಜಾಸ್ತಿ ತಲೆಯೋಡಿಸಬೇಡ ಅಹ್ಮದ್. ನಿನ್ನ ಕೆಲಸ ಏನಿದೆಯೋ ಅಷ್ಟನ್ನೇ ಮಾಡು ಸಾಕು.
ಮುರಳಿ ಮನೋಹರ್ ಜೋಶಿ: ಇದು ಆಹಾರ ಭದ್ರತಾ ಮಸೂದೆಯಲ್ಲ. ಮತಗಳ ಭದ್ರತಾ ಮಸೂದೆ!
ಸೋನಿಯಾ ಗಾಂಧಿ: (ಆಕಳಿಸುತ್ತಾ) ಏನಯ್ಯಾ ನಿನ್ನ ಸಮಸ್ಯೆ?
ಮುರಳಿ ಮನೋಹರ್ ಜೋಶಿ: ಮೊದಲನೆಯದಾಗಿ, 35 ಕೆಜಿಯಷ್ಟು ಸಿಗಲಿದ್ದ ಅಕ್ಕಿಯ ಪ್ರಮಾಣ ಈಗ 25 ಕೆ.ಜಿ.ಗೆ ಇಳಿಯಲಿದೆ. ಎರಡನೆಯದಾಗಿ, ಕೆಲವು ಕುಟುಂಬಗಳು ಈಗ ಹೆಚ್ಚು ಹಣ ತೆರಬೇಕಾಗಿದೆ. ಮೂರನೆಯದಾಗಿ, ಬಡತನದ ಪ್ರಮಾಣ ಕಡಿಮೆಯಾಗಿದೆ ಅಂದ ಮೇಲೆ, ಜನಸಂಖ್ಯೆಯ 67 ಪ್ರತಿಶತ ಭಾಗವನ್ನು ಈ ಮಸೂದೆಯಲ್ಲಿ ಕವರ್ ಮಾಡುತ್ತಿರುವುದು ಏಕೆ?
ಸೋನಿಯಾ ಗಾಂಧಿ: ನನಗೆ ಗೊಂದಲವಾಗ್ತಾ ಇದೆ. ಈ ಮಸೂದೆ ಜನಪ್ರಿಯವಲ್ಲ ಎಂದು ಹೇಳುತ್ತಿದ್ದೀರೋ ಅಥವಾ ನಮ್ಮ ಆರ್ಥಿಕತೆಯನ್ನೇ ಧ್ವಂಸ ಮಾಡುವಷ್ಟು ಜನಪ್ರಿಯವೆನ್ನುತ್ತಿದ್ದೀರೋ?
ಮುರಳಿ ಮನೋಹರ್ ಜೋಶಿ: ಹೂಂ, ಇಲ್ಲ...ಅದೇನಂದ್ರೆ....ಹೋಗ್ಲಿ ಬಿಡಿ, ಈ ಮಸೂದೆ ಗಬ್ಬುನಾರುತ್ತಿದೆ ಎನ್ನುವುದು ಗೊತ್ತಿದ್ದರೂ ನಾವು ಅದರ ಪರವಾಗಿ ಓಟ್ ಮಾಡ್ತೀವಂತೆ. ಓಕೆ ನಾ? ಅಂದಹಾಗೆ, ಈ ಮಸೂದೆ ಜಾರಿಯಾದ ನಂತರ, ನಮ್ಮ 'ಜಾತ್ಯತೀತ ಮತ್ತು ಕೋಮುವಾದಿ' ಚರ್ಚೆಯನ್ನು ಮುಂದುವರಿಸೋಣವಾ?
ಸೋನಿಯಾ ಗಾಂಧಿ: ಖಂಡಿತ! ಹಾಗಿದ್ರೆ ನಾನು ಸ್ವಲ್ಪ ಬ್ರೇಕ್ ತೊಗೊಳ್ತೀನಿ. ಇಷ್ಟು ಹೊತ್ತು ಸಂಸತ್ತಿನಲ್ಲಿ ಕುಳಿತು ನನಗೆ ಸುಸ್ತಾಗುತ್ತಿದೆ!
ಎನ್‌ಡಿಟಿವಿ: ಬ್ರೇಕಿಂಗ್ ನ್ಯೂಸ್: ಸೋನಿಯಾ ಗಾಂಧಿ ಎಐಐಎಮ್‌ಎಸ್ ಆಸ್ಪತ್ರೆಗೆ ದಾಖಲು!
ರಾಬರ್ಟ್ ವಾದ್ರಾ: ಅತ್ತೇಡಡಡಡ! ನಿಮ್ಮನ್ನು ನೋಡೋದಕ್ಕೆ ಈ ಕ್ಷಣವೇ ನಾನು ಬರ್ತಾ ಇದೀನಿ!
ಎಐಐಎಮ್‌ಎಸ್ ನಿರ್ದೇಶಕ:  ಇಡೀ ಕ್ಯಾಂಪಸ್ ಅನ್ನು ಸುತ್ತುವರಿಯಿರಿ, ಹೂಂ ಬೇಗ! ಖಾಲಿ ಜಾಗಗಳಲ್ಲೆಲ್ಲ ಹೂಕುಂಡಗಳನ್ನಿಡಿ ಅಥವಾ ನಿಮ್ಮ ವಾಹನಗಳನ್ನು ನಿಲ್ಲಿಸಿ. ರಾಬರ್ಟ್ ವಾದ್ರಾ ನಮ್ಮ ಆಸ್ಪತ್ರೆಗೆ ಬರಲಿದ್ದಾರೆ. ಒಂದಿಷ್ಟೂ ಖಾಲಿ ಜಾಗ ಅವರ ಕಣ್ಣಿಗೆ ಬೀಳಕೂಡದು!
ರಾಬರ್ಟ್ ವಾದ್ರಾ: ಥೊತ್ತೆರಿಕಿ. ಒಂದೆರಡು ಹೂ ಕುಂಡಗಳನ್ನಿಟ್ಟು ನನ್ನನ್ನು ಫೂಲ್ ಮಾಡಬಹುದು ಅಂದ್ಕೊಂಡಿದೀಯಾ? ರಾಬರ್ಟ್‌ನ ಕಪಿಮುಷ್ಠಿಯಿಂದ ನಿನ್ನನ್ನು ರಾಬರ್ಟ್ ವಾದ್ರಾ ಮಾತ್ರ ಕಾಪಾಡಬಲ್ಲ!! ಹೋಗ್ಲಿಬಿಡು, ಚಿಂತೆ ಮಾಡಬೇಡ. ಅದೇನಂದ್ರೆ, ನನಗೆ ಇವತ್ತು ಮೂಡ್ ಸರಿ ಇಲ್ಲ.  
ಎಐಐಎಮ್‌ಎಸ್ ನಿರ್ದೇಶಕ(ನಿಟ್ಟುಸಿರುಬಿಟ್ಟು): ಥ್ಯಾಂಕ್ಯೂ ಸರ್!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement