ಅಂಕಣಗಳು

ಮಹೇಂದ್ರಸಿಂಗ್ ಧೋನಿ

Hmmm... ಪಾಂಚ್
*    ಏನು, ಹೊಸ ಹೇರ್‌ಸ್ಟೈಲ್ ಮಾಡ್ಕೊಂಡ್‌ಬಿಟ್ಟಿದೀರಾ, ಏನ್ ಸಮಾಚಾರ?
ಏನಿಲ್ಲ ಕ್ರಿಕೆಟ್‌ನಲ್ಲಿ ನಾನು ಮುಟ್ಟಿದ್ದೆಲ್ಲಾ ಬಂಗಾರ ಆಗ್ತಾ ಇದೆ. ಹಂಗಾಗಿ ಕಟಿಂಗ್ ಶಾಪ್‌ನವನನ್ನ ಬಿಟ್ಟು ಬೇರೆ ಯಾರ್ಗೂ ನನ್ ಕೂದ್ಲೂ ಕಿತ್ಕೊಳ್ಳಕಾಗಲ್ಲ, ಅಂತ ತೋರ್ಸೋಕೆ.

*    ನಿಮ್ಮನ್ ನೋಡಿ ವಿರಾಟ್ ಕೊಹ್ಲಿ ಕೂಡ ಸ್ಪೆಷಲ್ ಹೇರ್‌ಸ್ಟೈಲ್ ಮಾಡ್ಕೊಂಡಿದಾರಂತೆ?
ಇರಬಹುದು. ಆದ್ರೂ ನಂದು ಹೆಲಿಕಾಪ್ಟರ್ 'ಕಟ್‌', ಹಂಗೆಲ್ಲಾ ಬೇರೆಯವರು ಅನುಕರಣೆ ಮಾಡೋಕಾಗಲ್ಲ.

*    ಅದ್ಸರಿ, ಈ ಥರಾ ಹೇರ್‌ಸ್ಟೈಲ್ ಮಾಡ್ಕೊಂಡ್ರೆ ಮನೇಲಿ ನಿಮ್ ಹೆಂಡ್ತಿ ಏನೂ ಅನ್ನಲ್ವಾ?
ಹೆಂಡ್ತಿಯರನ್ನ, ಕೂದಲು ಕೊಂಕದಂತೆ ನೊಡ್ಕೊಂಡ್ರೆ ಸಾಕು, ಅವ್ರು ಇಂಥದರ ಬಗ್ಗೆ ಎಲ್ಲಾ ಮಾತಾಡಲ್ಲ ಕಣ್ರೀ.

*    ಆದ್ರೂ, ಜೆಂಟಲ್‌ಮನ್ ಥರಾ ಇದ್ರಿ, ನಿಮ್ಮ ಅಭಿಮಾನಿಗಳಿಗೆ ಈ ಥರಾ ಹೇರ್‌ಸ್ಟೈಲ್ ಇಷ್ಟ ಆಗುತ್ತ?
ಹೆಂಗೂ ಈಗಾಗ್ಲೇ ಫೀಲ್ಡ್‌ನಲ್ಲಿ ಹೆಸರು ಮಾಡಿದೀನಿ. ಈಗ ಕ್ರಿಕೆಟ್ 'ಫೀಲ್ಡ್‌'ನಲ್ಲಿ ಬೇರೆ ಥರಾ ಹೆಸರು ಮಾಡೋಣ ಅಂತ.

*   ಸೂಪರ್ ಸಿನಿಮಾದ ಉಪೇಂದ್ರ ಅವರ ಸ್ಟೈಲ್ ಕಾಪಿ ಮಾಡಿದೀರಾ ಅನ್ನಿಸ್ತಾ ಇದೆ?
ನಾನು ಯಾರ್ನೂ ಕಾಪಿ ಮಾಡಲ್ಲ. ಅದು ಉಪೇಂದ್ರನ್ ಸ್ಟೈಲ್, ಇದು ಮಹೇಂದ್ರನ್ ಸ್ಟೈಲ್.
(ಕಾಲ್ಪನಿಕ ಸಂದರ್ಶನ)

ಒಮ್ಮೆ ಭೇಟಿ ಕೊಡಿ
ಧೋನಿ ಕೂದಲು ಕಳೆದುಕೊಂಡಿರುವುದಕ್ಕೆ ಕೂದಲು ಉದುರುವಿಕೆಯೇನೂ ಕಾರಣವಲ್ಲ. ಆದರೆ ಒಮ್ಮೆ ಕಳಕೊಂಡ್ರೆ  ಮತ್ತೆ ಬರಲ್ಲ ಎನ್ನುವುದು ಕೇವಲ ಟೈಮ್ ಅಷ್ಟೇ ಅಲ್ಲ ಕೂದಲೂ ಕೂಡ ಎನ್ನುವಷ್ಟು ಆತಂಕ ಕೂದಲು ಕಳಕೊಂಡವರದ್ದು. ಹಾಗಾಗಿ 'ಕಳಕೊಂಡೇ, ಕಳಕೊಂಡೇ' ಎಂದು ಕೊರಗುವ ಬದಲು ಹೇರ್ ಫಾಲ್ ಕಂಟ್ರೋಲ್ ಮಾಡುವುದೇ ಬೆಟರ್ ಎನ್ನುತ್ತವೆ ಇಲ್ಲಿರುವ ಕೆಲವು ಟಿಪ್ಸ್‌ಗಳು.
n bit.ly/19InMDK n bit.ly/1b8DHLh n bit.ly/1bifjfY n bit.ly/kLO6DG n bit.ly/1bifjMY


ಹರಿ-ಕಥೆ
ಖೇಮುಗೆ ಲೈಫಲ್ಲಿ ಸಿಕ್ಕಾಪಟ್ಟೆ ಬೇಜಾರಾಗಿತ್ತು. ಎಲ್ಲಾ ಬಿಟ್ಟು ನಾನು ಟೆರರಿಸ್ಟ್ ಆಗಬೇಕು ಅಂತ ನಿರ್ಧಾರ ಮಾಡಿದ.  ಟೆರರಿಸ್ಟ್ ಗುಂಪೊಂದಕ್ಕೆ ಸೇರಿಕೊಳ್ಳಲು ಅಪ್ಲಿಕೇಷನ್ ಹಾಕಿದ. ತಕ್ಷಣ ನಿನ್ನ ಹೆಂಡತಿಯನ್ನು ಕರೆದುಕೊಂಡು ಸಂದರ್ಶನಕ್ಕೆ ಬನ್ನಿ ಅಂತ ಫೋನ್ ಬಂತು. ಅಲ್ಲಿಗೆ ಹೋದರೆ ಅಲ್ಲಿ ಸಂದರ್ಶನಕ್ಕೆ ಇವನಂತೆ ಇನ್ನೂ ಇಬ್ಬರು ಹೆಂಡತಿ ಸಮೇತ ಕೂತಿದ್ದರು. ಮೊದಲನೆಯವನ ಸರದಿ ಬಂತು. ಅವನ ಹೆಂಡತಿಯನ್ನು ಪಕ್ಕದ ರೂಮಿನಲ್ಲಿ ಕೂಡಿಸಿದ ಸಂದರ್ಶಕರು 'ನೋಡು ಟೆರರಿಸ್ಟ್ ಆಗಬೇಕು ಅಂದ್ರೆ ಸೆಂಟಿಮೆಂಟ್ ಇರಬಾರದು. ಭಂಡ ಧೈರ್ಯ ಬೇಕು. ತಗೋ ಈ ಗನ್, ನಿನ್ನ ಹೆಂಡತಿ ಆ ರೂಮಿನಲ್ಲಿದ್ದಾಳೆ. ಅವಳನ್ನು ಶೂಟ್ ಮಾಡಿ  ಬಾ. ನಿನ್ನನ್ನು ನಮ್ಮ ಗುಂಪಿಗೆ ಸೇರಿಸಿಕೊಳ್ಳುತ್ತೇವೆ' ಎಂದರು. ಒಂದು ಕ್ಷಣ ಗನ್ ಎತ್ತಿಕೊಂಡ ಅವನು 'ಇಲ್ಲ ನನ್ ಕೈಲಿ ಆಗಲ್ಲ' ಎಂದು ಹೆಂಡತಿಯನ್ನು ಕರೆದುಕೊಂಡು ಹೊರಟು ಹೋದ. ಎರಡನೇಯವನ ಸರದಿ ಬಂತು. ಅವನು ಗನ್ ಎತ್ತಿಕೊಂಡು ತನ್ನ ಹೆಂಡತಿ ಇದ್ದ ರೂಮ್ ಪ್ರವೇಶಿಸಿದ. ಗನ್ ಎತ್ತಿ ಗುರಿ ಇಟ್ಟು ಟ್ರಿಗರ್ ಒತ್ತಲು ಹೋದವನಿಗೆ ಶೂಟ್ ಮಾಡಲು ಮನಸ್ಸು ಬರಲಿಲ್ಲ. ಅವನೂ ಕೂಡ 'ನನ್ ಕೈಲಾಗಲ್ಲ'
ಎಂದು ಹೆಂಡತಿಯೊಂದಿಗೆ ಹೊರಟು ಹೋದ. ಖೇಮು ಸರದಿ ಬಂತು. ಅವನ ಕೈಗೂ ಗನ್ ಕೊಟ್ಟು  ಹೆಂಡತಿಯನ್ನು ಶೂಟ್ ಮಾಡಲು ಹೇಳಲಾಯಿತು. ಗನ್ ತೆಗೆದುಕೊಂಡು ರೂಮ್‌ಗೆ ಹೋದ ಖೇಮು. ಒಂದೆರಡು ಕ್ಷಣದಲ್ಲಿ ಆರು ಬಾರಿ ಬುಲೆಟ್ ಫೈರ್ ಆದ ಸದ್ದು ಕೇಳಿಸಿತು. ಆದರೆ ಖೇಮು ಹೆಂಡತಿಯ ಸದ್ದೇ ಕೇಳಿಸಲಿಲ್ಲ. ಅದಾದ ಒಂದೆರಡು ಕ್ಷಣಗಳ ನಂತರ ಖೇಮು ಹೆಂಡತಿ ಕಿರುಚಾಡುವ ಸದ್ದು ಕೇಳಿಸಿತು. ಸಂದರ್ಶಕರೆಲ್ಲ ಗಾಬರಿಯಾಗುವ ಹೊತ್ತಿಗೆ ರೂಮಿನಿಂದ ಹೊರಬಂದ ಖೇಮು ಹೇಳಿದ 'ಗನ್‌ಗೆ ಯಾವನೋ ನನ್ ಮಗ ಡಮ್ಮಿ ಬುಲೆಟ್ಸ್ ಹಾಕಿದ್ದಾನೆ. ನಾನ್ ಬಿಡ್ತೀನಾ. ಇವ್ಳ್ ಕಾಟ ಸಾಕಾಗಿತ್ತು. ಮತ್ತೆ ಮತ್ತೆ ಇಂಥ ಛಾನ್ಸ್ ಸಿಗಲ್ಲ ಅಂತ ಅಲ್ಲೇ ಇದ್ದ ಕರ್ಟನ್ ರಾಡ್ ತೆಗೆದುಕೊಂಡು ಅವಳನ್ನ ಹೊಡೆದು ಹಾಕಿಬಿಟ್ಟೆ'.

ಸ್ಕ್ಯಾಂಡಲ್‌ವುಡ್
ಚೆನ್ನೈ ಸಿನಿಮಾ ಸಮಾರಂಭದ ಅವಾಂತರಗಳ ಬಗೆಗಿನ ಮಾತುಗಳು ಮುಕ್ತಾಯ ಹಂತಕ್ಕೆ ಬಂದಿವೆ. ಸನ್ಮಾನಿತರ ಪಟ್ಟಿಯಲ್ಲಿ 'ಅವರ ಹೆಸರಿಲ್ಲ, ಇವರ ಹೆಸರಿಲ್ಲ' ಎಂಬ ತಗಾದೆಗಳಿಗೆ 'ಅಯ್ಯೋ ಸನ್ಮಾನ ಮಾಡಬೇಕು ಅಂದ್ರೆ ಎಷ್ಟೋ ಜನಕ್ಕೆ ಮಾಡಬೇಕಾಗುತ್ತದೆ. ಅಷ್ಟು ಜನಕ್ಕೆ ಸನ್ಮಾನ ಮಾಡುವ ಅವಕಾಶ ಇರಲಿಲ್ಲ' ಎಂಬ ಸಮಾಧಾನಕರ ಉತ್ತರಗಳೂ ಉದ್ಯಮದ ಕಡೆಯಿಂದ ಬರುತ್ತಿವೆ. ಆದರೆ ಇಂಥದೊಂದು ಐತಿಹಾಸಿಕ ಕಾರ್ಯಕ್ರಮದಲ್ಲಿ ತಮ್ಮನ್ನು ಸನ್ಮಾನಿಸಿದರು ಎಂಬ ಸನ್ಮಾನಿತರ ಖುಷಿ ಮತ್ತು ತಮ್ಮನ್ನು ಕಡೆಗಣಿಸಿದರು ಎನ್ನುವವರ ಅಸಮಾಧಾನ ಕೊನೆಯವರೆಗೂ ಇರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಕುತೂಹಲದ ವಿಷಯ ಎಂದರೆ ನಿನ್ನೆ ಇಂಡಿಯನ್ ಎಕ್ಸ್‌ಪ್ರೆಸ್ ಆಫೀಸಿನ ಕ್ಯಾಂಪಸ್ಸಿನಲ್ಲಿ ಕುಳಿತ ಇಬ್ಬರು ತಮಿಳು ಚಿತ್ರಪ್ರೇಮಿಗಳು ಮಾತನಾಡುತ್ತಿದ್ದರು 'ಏನ್ ಫಂಕ್ಷನ್ನೋ ಏನೋ, ನಿಂಗೊತ್ತಾ? ಸನ್ಮಾನ ಮಾಡಿದವರ ಲಿಸ್ಟ್‌ನಲ್ಲಿ ಎಂ.ಆರ್.ರಾಧಾ ಅವರ ಹೆಸರೇ ಇರಲಿಲ್ಲ. ಇಂಥ ಸಮಾರಂಭ ಯಾಕೆ ಮಾಡ್‌ಬೇಕಿತ್ತು?' ಅಲ್ಲಿಗೆ ಇದು ಕೇವಲ ನಮ್ಮ ಕನ್ನಡ ಚಿತ್ರರಂಗವೊಂದರ ಸಮಸ್ಯೆ ಅಲ್ಲ ಎಂದುಕೊಂಡು ಸಮಾಧಾನದ ನಿಟ್ಟುಸಿರು ಬಿಡುವುದೊಂದೇ ಕನ್ನಡ ಚಿತ್ರಪ್ರೇಮಿಗಳಿಗೆ ಉಳಿದಿರುವ ದಾರಿ.

5. ಡಬ್ಕುಡಬಲ್ ತುದಾಂಡಲ್...
* ಆಂಧ್ರಪ್ರದೇಶ ಈಗ ಎರಡು ಭಾಗ ಆಗಿದೆ.
ಅದನ್ನು ಒಂದು ಮಾಡುವುದು ಎರಡು ಕುಟುಂಬಗಳನ್ನು ಸೇರಿಸುವ ಕೆಲಸದಲ್ಲಿ ನಿಪುಣರಾದ ತೆಲುಗು ಸಿನಿಮಾ  ಹೀರೋಗಳ ಕೈಯಲ್ಲಿ ಮಾತ್ರ ಸಾಧ್ಯ.

*  ಫೇಸ್‌ಬುಕ್‌ನಲ್ಲಿ ಎಲ್ಲರ ಜೊತೆ ಜಗಳ ಆಡ್ಕೊಂಡು ಸಿಕ್ಕ ಸಿಕ್ಕವರನ್ನು ಬ್ಲಾಕ್ ಮಾಡುವವರು
ಬ್ಲಾಕ್‌ಬಸ್ಟರ್

*  ಉಮೇಶ್ ರೆಡ್ಡಿ ಬದಲಾಗಿದ್ದಾನಂತೆ.
ಹೌದಾ, ಅಂಥ ವಿಕೃತ ಕಾಮಿ ಬದಲಾಗೋದುಂಟಾ?
ಇಲ್ಲರೀ, ಬರೀ 'ಉಮೇಶ್‌ರೆಡ್ಡಿ' ಅನ್ನೋ ಶೀರ್ಷಿಕೆ ಬದಲಾಗಿದೆ 'ಖತರ್ನಾಕ್‌' ಅಂತ.

*  ತಪ್ಪು ತಪ್ಪಾಗಿ ಮಾತನಾಡುತ್ತ, ಬರೆಯುತ್ತ ಅಕ್ಷರ, ಪದಗಳನ್ನೇ ನುಂಗುವವರ ಬಗ್ಗೆ ಒಂದು ಕಾಮೆಂಟ್
ಅವನಿಗೆ ಸಾಹಿತ್ಯದ 'ಹಸಿವು' ಜಾಸ್ತಿ ಅದಕ್ಕೆ ಅಕ್ಷರ ಪದಗಳನ್ನೇ ನುಂಗಿಬಿಡ್ತಾನೆ.

*  ಕಚ್ಚಾ ಮ್ಯಾಂಗೋ ಜಾಹೀರಾತಿಗೆ ಸುದೀಪ್, ಪುನೀತ್‌ರ ಸ್ಲೋಗನ್
ಕಚ್ಚಾ ಮ್ಯಾಂಗೋ, 'ಕಿಚ್ಚಾ' ಮ್ಯಾಂಗೋ
ಕಚ್ಚಾ ಮ್ಯಾಂಗೋ, 'ಅಪ್ಪು'ನ್ ಕ ಚಾಯ್ಸ್

*  ರುಪಾಯಿ ಬೆಲೆ ಎಷ್ಟೇ ಕೆಳಗೆ ಬಂದ್ರೂ ಹೆಣ್‌ಮಕ್ಳು ಅದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಯಾಕೆ?
ಯಾಕಂದ್ರೆ ಅವರ ಕೊರಳಲ್ಲಿರುವ ಸರದಲ್ಲಿ ಯಾವಾಗ್ಲೂ ಡಾಲರ್ ಇರುತ್ತಲ್ಲ ಅದಕ್ಕೆ.
  

-ಹರಿ
harikannadaprabha@gmail.com



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ