ಎಲ್ಲರನ್ನೂ ಅಡ್ಡಡ್ಡ ಮಲಗಿಸುವ ಮಾಯೆ
ಬೇಕಾದಾಗ ಬರುವುದಿಲ್ಲ ಮತ್ತು ಬಂದಾಗ ಬೇಡ ಎನ್ನಲು ಆಗುವುದಿಲ್ಲ
ಮಾತ್ರವೂ ನಿದ್ರೆ ಬರದಿದ್ದರೆ ಮಾತ್ರೆಯೇ ಗತಿ
ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ರೆ, ಚಿಂತೆಯುಳ್ಳವಗೆ ನಿದ್ರೆಯಲ್ಲೂ ಸಂತೆ
ಕುಂಭಕರ್ಣನ ಆಜನ್ಮ ಸಿದ್ಧ ಹಕ್ಕು
(ಹಸೆ ಮೇಲೆ) ಬಿದ್ರೆ ಸಾಕು ಅನ್ನುವಂತೆ ಮಾಡುವುದೇ ನಿದ್ರೆ
ಕೆಲಸ ಹೆಚ್ಚಾದರೂ ಬರುತ್ತೆ, ಕೆಲಸವೇ ಇಲ್ಲದೇ ಕುಳಿತರೂ ಬರುತ್ತೆ. ನಿದ್ರೆಗೆ ಮಾತ್ರ ಬೇರೆ ಕೆಲಸವಿಲ್ಲ
ಯೋಗಿಗಳಿಗೆ ಸಮಾಧಿಯೇ ನಿದ್ರೆ. ಯೋಗವಂತರಿಗೆ ನಿದ್ರೆಯಲ್ಲೇ ಸಮಾಧಿ
ನಿಶಾ ದೇವತೆಯ ನಿಶಾನೆ
ದುರ್ಜನರ ಸಂಗ ರಾತ್ರಿ ನಿದ್ರಾ ಭಂಗ
ಪಾಠ ಕೇಳುತ್ತಾ ನಿದ್ರೆ ಹೋಗುವವನನ್ನು ನಿದ್ರಾರ್ಥಿ ಎನ್ನಬಹುದು
ಉದ್ರಿ ಇಟ್ಟುಕೊಳ್ಳಲಾಗದ ವಿಚಾರ
ದೇಹೇಂದ್ರಿಯಗಳ ವಿಶ್ರಾಂತಿ ಸ್ಥಾನ
ಮದ ಇಳಿಸುವ ಮದಿರೆ ಈ ನಿದಿರೆ
ವಿಶ್ವನಾಥ ಸುಂಕಸಾಳ