ಕಚಗುಳಿ ಟ್ವೀಟ್ಸ್
ಸತ್ಯ ನಾಡೆಲ್ಲ ಮೈಕ್ರೊಸಾಫ್ಟ್ನ ಸಿಇಒ ಆಗಿರುವುದಕ್ಕೆ ರಾಜಕೀಯ ಪಕ್ಷಗಳ ಪ್ರತಿಕ್ರಿಯೆ: 'ಅವರು ಸಿಇಒ ಆಗಿದ್ದು ಯುಪಿಎ ಆಡಳಿತದ ಅವಧಿಯಲ್ಲೇ ಎಂಬುದನ್ನು ಮರೆಯಬಾರದು'- ಕಾಂಗ್ರೆಸ್. ನಾಡೆಲ್ಲ ಅಮುಲ್ ಅಂದರೆ ಗುಜರಾತ್ನ ಹಾಲು ಕುಡಿದವರು- ಬಿಜೆಪಿ. ಇದು ಜನಸಾಮಾನ್ಯನ ವಿಜಯ- ಆಮ್ ಆದ್ಮಿ.
- ಮಸಾಲಾ ಟ್ವೀಕ್ಸ್
ಗುಜರಾತ್ ಮತ್ತು ಉ.ಪ್ರದೇಶಗಳಲ್ಲಿ ಆಗಿರುವ ಅಭಿವೃದ್ಧಿ ಬಗ್ಗೆ ಚರ್ಚೆಗೆ ಬರಬೇಕು ಎಂದು ಮೋದಿಯವರಿಗೆ ಮುಲಾಯಂ ಸವಾಲೆಸೆದಿದ್ದಾರೆ. ಈ ಮೂಲಕ ಪರೋಕ್ಷವಾಗಿ ಹಾಸ್ಯ ಪ್ರದರ್ಶನದಲ್ಲಿ ರಾಹುಲ್ಗೆ ನೇರ ಸವಾಲು ಎಸೆದಿದ್ದಾರೆ.
- ಟ್ರಿಕಿ ಡೋನರ್
ಧರಣಿ ನಿರತ ದೃಶ್ಯವೊಂದನ್ನು ಚಿತ್ರಿಸಿಕೊಳ್ಳಬೇಕಾಗಿತ್ತು. ಕೇಜ್ರಿವಾಲರು ಗೆಸ್ಟ್ ಅಪಿಯರೆನ್ಸ್ ಕೊಡುತ್ತಾರೋ ವಿಚಾರಿಸಬೇಕಿದೆ.
- ನಕಲಿ ಪರೇಶ್ ರಾವಲ್