ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಅನ್ನ ಭಾಗ್ಯ ದುಬಾರಿ

Mainashree
Updated On : 28 Feb 2014, 11:22 am

ದೇಶದ ಬಡವರಿಗೆ, ಕಡು ಬಡವರಿಗೆ, ಅಕ್ಕಿಯನ್ನು ರುಪಾಯಿಗೊಂದು ಕೇಜಿಯ ಅತಿ ಅಗ್ಗದ ಬೆಲೆಯಲ್ಲಿ ಪೂರೈಸುವ ಕಲ್ಯಾಣ ಕಾರ್ಯಕ್ರಮವನ್ನು ವಿರೋಧಿಸುವುದು ಕಷ್ಟ. ಈಗಿನ ದೇಶ ಕಾಲ ಪರಿಸ್ಥಿತಿಯಲ್ಲಿ ಅನ್ನ ಭಾಗ್ಯದಂತಹ ಯೋಜನೆಯನ್ನು ವಿರೋಧಿಸುವವರನ್ನು ದ್ವೇಷಿಸುವ ಜನವರ್ಗಗಳೂ ಇವೆ. ಆದರೆ ಬಡವರಿಗೆ ಈ ಅನ್ನಭಾಗ್ಯವನ್ನು ಒದಗಿಸಿಕೊಡಲು ಸರ್ಕಾರ ಒಂದು ಕೇಜಿಗೆ 365 ಪೈಸೆ ಖರ್ಚು ಮಾಡಬೇಕಾಗಿ ಬಂದಿದೆ. ಅಷ್ಟು ವೆಚ್ಚ ಮಾಡಿ ಈ ಯೋಜನೆಯನ್ನು ಕಾರ್ಯಗತಗೊಳಿಸಿದರೂ, ಈ ಭಾಗ್ಯ ಅರ್ಹ ಗುರಿಯ ಸಮುದಾಯಗಳಲ್ಲಿ ಶೇಕಡಾ 57 ರಷ್ಟು ಜನರನ್ನು ಇನ್ನೂ ಮುಟ್ಟಿಲ್ಲ. ಹಾಗೆಂದರೇನರ್ಥ?
ಸರ್ಕಾರದ ಬೊಕ್ಕಸದಿಂದ ಒಂದು ಪಾಲು ಅನರ್ಹ, ಅಪಾತ್ರರ ಪಾಲಾಗುತ್ತಿದೆ ಎಂದೇ ಅಲ್ಲವೇ. ಇದೊಂದೇ ಯೋಜನೆ ಅಲ್ಲ, ಸರ್ಕಾರ ಬಡವರಿಗೆ ರೂಪಿಸಿರುವ ಹಲವಾರು ಯೋಜನೆಗಳಿಗೆ ಈಗ ಒದಗಿಸುತ್ತಿರುವ ಸಬ್ಸಿಡಿಯ ಪ್ರಮಾಣ ಸುಮಾರು 2.57 ಲಕ್ಷ ಕೋಟಿ ರುಪಾಯಿಗಳು ಅದಕ್ಕೆ ಇನ್ನೂ ಕೆಲವು ಬಗೆಯ ವೆಚ್ಚವನ್ನು ಸೇರಿಸಿದರೆ ಬಡವರ ಪಾಲಿಗೆ ಭಾಗ್ಯದ ಬಾಗಿಲನ್ನು ತೆರೆಯಲು ಸುಮಾರು 3.57 ಲಕ್ಷ ಕೋಟಿ ರುಪಾಯಿಗಳು ವೆಚ್ಚವಾಗುತ್ತಿವೆ. ಇಷ್ಟಾದರೂ ಆ ವರ್ಗಗಳ ಕುಟುಂಬಗಳ ಜೀವನದ ಮಟ್ಟ ಸುಧಾರಿಸಿದೆಯೇ? ಈ ಅಂಶ ಕುರಿತ ಅಧ್ಯಯನ ನಡೆಸಿರುವ ಸಂಸ್ಥೆಯ ವರದಿಯಂತೆ ಬಡವರ ಪರಿಸ್ಥಿತಿ ಎಲ್ಲ ಕಡೆ ಸುಧಾರಿಸಿಲ್ಲ. ಆದರೆ ಚುನಾವಣೆ ಪ್ರಣಾಳಿಕೆಯಲ್ಲಿ ಎಲ್ಲ ಬಡವರಿಗೂ ಇಂತಹ ಭಾಗ್ಯದ ಯೋಜನೆಗಳನ್ನು ಫಲವನ್ನು ಒದಗಿಸುವ ಭರವಸೆ ನೀಡಿದ್ದು ಏನಾಯಿತು? ಇದುವರೆಗೆ ಇಂತಹ ಕಾರ್ಯಕ್ರಮಗಳ ಜಾರಿಯ ಮೌಲ್ಯಮಾಪನದ ವ್ಯವಸ್ಥೆಯೇ ಇರಲಿಲ್ಲ. ಈಗ ಒಂದು ವ್ಯವಸ್ಥೆ ರೂಪಗೊಂಡಿದೆ. ಆ ವ್ಯವಸ್ಥೆಯ ಅಂಗ ಸಂಸ್ಥೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments