ಎಟಿಎಂ ದರೋಡೆಕೋರ
- ಪೊಲೀಸ್‌ನೋರು ನಿನ್ನ ಹುಡುಕೋಕೆ ಶುರುಮಾಡಿ ಅಮೋಘ 50ನೇ ದಿನನೂ ಆಯ್ತು. 'ಶತದಿನೋತ್ಸವದತ್ತ ಮುನ್ನುಗ್ಗುತ್ತಿದ್ದೇನೆ' ಅಂತ ನೀನು ಜಾಹೀರಾತು ಹಾಕ್ಕೊಬಹುದು ಅನ್ಸತ್ತೆ...
ನನ್ ಹಿಡಿಯೋದು ಅಂದ್ರೆ ಅದೇನು ಎಟಿಎಮ್ ಕಾರ್ಡ್ ಹಾಕಿದ್ ತಕ್ಷಣ ದುಡ್ಡು ಬರೋವಷ್ಟು ಸುಲಭನಾ? ಅವರು ರಂಗೋಲಿ ಕೆಳಗೆ ತೂರಿದ್ರೆ, ನಾನು ಎಟಿಎಂ ಶಟರ್ ಕೆಳಗೆ ತೂರ್ದೋನು...
- ಪೊಲೀಸ್‌ನೋರಿಗೆ ನಿನ್ ಅಡ್ರೆಸ್ಸೇ ಸಿಗ್ತಾ ಇಲ್ಲವಲ್ಲ, ಅದ್ ಹೆಂಗೆ?
ನಾನು ಎಟಿಎಂ ಕಳ್ಳ, ನಂದು ಅಡ್ರೆಸ್, ಗಿಡ್ರೆಸ್ ಎಲ್ಲ ಇಲ್ಲ, ಓನ್ಲೀ 'ಪಿನ್‌ಕೋಡ್'.
- ಅಡ್ರಸ್ ವಿಷ್ಯ ಹೋಗ್ಲಿ, ಒಂದೇ ಡ್ರೆಸ್ ಹಾಕ್ಕೊಂಡ್ ಎರಡು ಎಟಿಎಂಗಳಲ್ಲಿ ಅಟ್ಯಾಕ್ ಮಾಡಿದೀಯಲ್ಲ, ಸಿಕ್ಕಾಕ್ಕೊತೀನಿ ಅಂತ ಭಯ ಇರ್‌ಲಿಲ್ವಾ ನಿಂಗೆ?
ಆವಾಗಿರ್‌ಲಿಲ್ಲ, ಆದ್ರೆ ಈವಾಗ ನಿಮ್ ಮಾತು ಕೇಳಿದ ಮೇಲೆ ಯಾಕೋ, ನನ್ ಅಕೌಂಟ್‌ನಿಂದ ದುಡ್ಡು ತೆಗೆಯೋಕೆ ಎಟಿಎಂಗೆ ಹೋಗೋಕೂ ಭಯ ಆಗ್ತಿದೆ. ಆದ್ರೂ ನಾನ್ ಹೆದರೋನಲ್ಲ ಬಿಡಿ.
- ಹುಷಾರಾಗಿರು, 'ಎನಿಟೈಮ್ ಮನಿ'ಯಲ್ಲಿ ಕ್ಯಾಶ್ ಕದ್ದು ಕ್ರೈಮ್ ಮಾಡಿದೀಯ. ಪೊಲೀಸ್‌ನೋರು 'ಎನಿಟೈಮ್ ಮನಿ'ಗ್ ಬರಬಹುದು..ಆದ್ರೂ, ವೀರಪ್ಪನ್, ಉಮೇಶ್ ರೆಡ್ಡಿಗಿಂತ ಸ್ಮಾರ್ಟ್ ಆಗ್‌ಬಿಟ್ಯಲ್ಲಾ ನೀನು, ಯಾರ್ಗೂ ಸಿಕ್ತಾನೇ ಇಲ್ಲ..ವಿಚಿತ್ರ
ನಾನು ಕ್ಯಾಚಿ ಕ್ರಿಮಿನಲ್ ಅಲ್ಲ. ಜೊತೆಗೆ ಜೇಬಲ್ಲಿ 'ಕ್ಯಾಶ್' ಇದೆ. ಎಲ್ಲರ್ತೀನಿ ಅಂತ ಯಾರಿಗೂ ಗೊತ್ತಾಗಲ್ಲ, ಇವತ್ತು ಕರ್ನಾಟಕ, ನಾಳೆ 'ಕ್ಯಾಶ್'ಮೀರ್.
- ಆದ್ರೂ, ಎಷ್ಟ್ ದಿನ ಅಂತ ಕದ್ದು ಮುಚ್ಚಿ ಓಡಾಡ್ತೀಯಾ? ಒಂದಲ್ಲ ಒಂದ್ ದಿನ ಸಿಗ್ಲೇಬೇಕಲ್ಲ..
ಎಷ್ಟ್ ದಿನ ಆಗುತ್ತೋ ಅಷ್ಟ್ ದಿನ. ಯಾವ ಪೊಲಿಟಿಶಿಯನ್, ಕ್ರಿಕೆಟರ್, ಸಿನಿಮಾ ಸ್ಟಾರ್‌ಗೂ ಸಿಗದೇ ಇರೋ ಅದೃಷ್ಟ ನಂಗೆ ಸಿಕ್ಕಿದೆ. ಅಷ್ಟ್ ದಿನ ಕಂಟಿನ್ಯುಯಸ್ ಆಗಿ ಕನ್ನಡಪ್ರಭ ಪೇಪರ್‌ಲಿ ಫ್ರಂಟ್ ಪೇಜಲ್ಲಿ ಬರೋ
ಛಾನ್ಸ್ ಮಿಸ್ ಮಾಡ್ಕೊಳ್ಳೋಕಾಗುತ್ತ.
(ಕಾಲ್ಪನಿಕ ಸಂದರ್ಶನ)
ಒಮ್ಮೆ ಭೇಟಿ ಕೊಡಿ
ಧೂಮಪಾನ, ಮದ್ಯಪಾನಗಳ ಜೊತೆಗೆ ಈಗೀಗ ಟಿವಿ ನೋಡುವುದು ಕೂಡ ಕೆಟ್ಟ ಚಟ ಎನಿಸಿಕೊಳ್ಳುತ್ತಿದೆ. ಅದರಲ್ಲೂ ಹುಡುಗಿಗೆ ಟಿವಿ ಧಾರಾವಾಹಿಗಳನ್ನು ನೋಡುವ ಚಟ ಇರಬಾರದು ಎಂದು ಮದುವೆಯಾಗುವ ಹುಡುಗರು ಬಯಸುವಷ್ಟರ ಮಟ್ಟಿಗೆ. ಹೆಂಗಸರಷ್ಟೇ ಅಲ್ಲ ಗಂಡಸರಲ್ಲೂ ಕೂಡ ಕೈಯಲ್ಲಿ ಮೊಬೈಲು ಅಥವಾ ಟಿವಿ ರಿಮೋಟ್ ಇರಲೇಬೇಕು ಎನ್ನುವಷ್ಟರ ಮಟ್ಟಿಗೆ ಟಿವಿ ಅಡಿಕ್ಷನ್ ಇದೆ. ಇಂಥ ಅತಿಯಾದ ಟಿವಿ ವೀಕ್ಷಣೆಯಿಂದ ಏನು ನಷ್ಟ, ಅದನ್ನು ಕಂಟ್ರೋಲ್ ಮಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಇಲ್ಲಿನ ವೆಬ್‌ಸೈಟ್‌ಗಳಲ್ಲಿ ಮಾಹಿತಿ ಇದೆ.
bit.ly/JPtzAu bit.ly/1gsDwyt
bit.ly/1cNPxxR bit.ly/1flLSvB
bit.ly/19YErIx
ಹರಿ-ಕಥೆ
ಖೇಮು ತನ್ನ ಡೈರಿಯಲ್ಲಿ ಬರೆದುಕೊಂಡ ಕಥೆ ಇದು. 'ನನಗೆ ಡೈವೋರ್ಸ್ ಸಿಕ್ಕಿದ್ದು ಹೇಗೆ?'. 'ಅವತ್ತು ನನ್ನ ಬರ್ತ್ ಡೇ ಇತ್ತು. ಬೆಳಗ್ಗೆ ಎದ್ದ ಕೂಡಲೆ ಹೆಂಡತಿ ಖೇಮುಶ್ರೀ ವಿಶ್ ಮಾಡ್ತಾಳೆ ಅಂದ್ಕೊಂಡೆ. ಊಹೂ ಅವಳಿಗೆ ಮರೆತೇ ಹೋಗಿತ್ತು. ಅಟ್‌ಲೀಸ್ಟ್ ಮಗ ಛೋಟಾ ಖೇಮು ವಿಷ್ ಮಾಡ್ತಾನೆ ಅಂದ್ಕೊಂಡೆ, ಇಲ್ಲ ಅವನೂ ವಿಶ್ ಮಾಡಲಿಲ್ಲ. ಮದುವೆ ಸಂಸಾರ ಅಂದ್ರೆ ಇಷ್ಟೆ, ಎಲ್ಲ ಮೂರು ದಿನದ ಬಾಳು. ಆದರೆ ನನ್ನ ಗೆಳೆಯರು ಯಾವತ್ತಿದ್ದರೂ ನನ್ನನ್ನು ಮರೆಯೊಲ್ಲ ಎಂದುಕೊಂಡು ಅವರ ಬಳಿ ಹೋದೆ. ಆದರೆ ದುರದೃಷ್ಟ ಅಂದ್ರೆ ಸ್ನೇಹಿತರ ಗುಂಪಿನಲ್ಲೂ ಯಾರೂ ವಿಶ್ ಮಾಡಲಿಲ್ಲ. ತುಂಬ ಬೇಸರ ಮಾಡಿಕೊಂಡು ಆಫೀಸಿಗೆ ಹೋದೆ. ಮನೆಯವರು, ಗೆಳೆಯರು ವಿಶ್ ಮಾಡದ ಮೇಲೆ ಇನ್ನು ಸಹೋದ್ಯೋಗಿಗಳು ವಿಶ್ ಮಾಡ್ತಾರೆಯೇ ಎಂದುಕೊಂಡೆ. ಹಾಗೇ ಆಯಿತು. ಹೊರಡುವ ಸಮಯಕ್ಕೆ ಎಲ್ಲರೂ ಅವರವರ ಜಾಗ ಖಾಲಿ ಮಾಡಿದರು. ಕೊನೆಗೆ ಉಳಿದುಕೊಂಡಿದ್ದು ನಾನು ಮತ್ತು ನನ್ನ ಸೆಕ್ರೆಟರಿ ನೀನಾ. ಅವಳನ್ನು ನೋಡುತ್ತಾ 'ನೀನಾದ್ರೂ ವಿಶ್ ಮಾಡ್ತೀಯಾ ನೀನಾ?' ಎಂದುಕೊಂಡು ಅವಳ ಮುಖ ನೋಡಿದೆ. ಅವಳು ಹತ್ತಿರ ಬಂದಳು. ಆದರೆ ವಿಶ್ ಮಾಡಲಿಲ್ಲ, ಬದಲಾಗಿ 'ಖೇಮು, ಇವತ್ತು ನಾನು ಗಾಡಿ ತಂದಿಲ್ಲ. ಸ್ವಲ್ಪ ನಮ್ ಮನೆಗೆ ಡ್ರಾಪ್ ಮಾಡ್ತೀಯಾ?' ಅಂದಳು. ಬೆಳಗ್ಗೆಯಿಂದ ಬೇಜಾರಾಗಿತ್ತು. ಅಟ್‌ಲೀಸ್ಟ್ ಅವಳನ್ನ ನನ್ನ ಗಾಡಿ ಮೇಲೆ ಕೂಡಿಸ್ಕೊಂಡು ಹೋಗುವ ಖುಷಿಯನ್ನಾದರೂ ಎಂಜಾಯ್ ಮಾಡೋಣ ಅಂತ ಎಸ್ ಅಂದೆ. ಇಬ್ಬರೂ ಗಾಡಿಯಲ್ಲಿ ಅವಳ ಮನೆಗೆ ಹೊರಟೆವು. ಅವಳ ಮನೆ ಬಂದಾಗ ಒಂದ್ ಕಪ್ ಕಾಫಿ ಕುಡಿದು ಹೋಗು ಅಂತ ಕೈ ಹಿಡಿದು ಪ್ರೀತಿಯಿಂದ ಒಳಗೆ ಕರ್‌ಕೊಂಡ್ ಹೋದಳು ನೀನಾ. ನಾನು ಒಳಗೊಳಗೇ ಮಂಡಿಗೆ ತಿನ್ತಾ ಇದ್ದೆ. ಒಳಗೆ ಪೂರ್ತಿ ಕತ್ತಲಿತ್ತು. ನೀನಾ ಲೈಟ್ ಹಾಕದೆ, ನನ್ನನ್ನು ಹಾಲ್‌ನಲ್ಲಿರುವ ಸೋಫಾದ ಮೇಲೆ ಕೂರಿಸಿ, ನನ್ನ ಕಿವಿಯಲ್ಲಿ ಮೋಹಕ ಧ್ವನಿಯಲ್ಲಿ ಹೇಳಿದಳು 'ನಾನು ಎರಡೇ ನಿಮಿಷದಲ್ಲಿ ಡ್ರೆಸ್ ಬದಲಾಯಿಸಿಕೊಂಡು ಬರ್ತೀನಿ, ನೀನು ಇಲ್ಲೇ ಇರು. ನಿಂಗೊಂದು ಬ್ಯೂಟಿಫುಲ್ ಸರ್‌ಪ್ರೈಸ್ ಕೊಡ್ತೀನಿ' ಎಂದು ತನ್ನ ಬೆಡ್‌ರೂಮಿನೊಳಗೆ ಹೋದಳು. ಹತ್ತು ನಿಮಿಷದ ನಂತರ ಹಾಲ್‌ನಲ್ಲಿದ್ದ ಎಲ್ಲ ಲೈಟ್‌ಗಳೂ ಒಮ್ಮೆಗೇ ಆನ್ ಆದವು. ನನ್ನ ಹೆಂಡ್ತಿ, ಮಗ, ಅತ್ತೆ, ಮಾವ, ಅಪ್ಪ, ಅಮ್ಮ, ಸ್ನೇಹಿತರು, ಸಹೋದ್ಯೋಗಿಗಳು ಎಲ್ಲೂ ಒಟ್ಟಿಗೇ 'ಸರ್‌ಪ್ರೈಸ್' ಎಂದು ಜೋರಾಗಿ ಕೂಗುತ್ತ್ತಾ ನನ್ನ ಬರ್ತ್‌ಡೇ ಕೇಕ್ ಹಿಡಿದುಕೊಂಡು ಆ ರೂಮ್‌ನಿಂದ ಹೊರಬಂದರು....ಮತ್ತು ನಾನು, ಹಾಲ್‌ನಲ್ಲಿರುವ ಸೋಫಾ ಮೇಲೆ ಬರೀ ಅಂಡರ್‌ವೇರ್ ಮೇಲೆ ಕಾಯ್ತಾ ಕೂತಿದ್ದೆ.
ಸ್ಕ್ಯಾಂಡಲ್‌ವುಡ್
ಮೊನ್ನೆ ನ್ಯೂ ಇಯರ್ ಪಾರ್ಟಿಯಲ್ಲಿ ಕುಣಿಯಲು ಬಂದಿದ್ದ ಪೂನಂಪಾಂಡೆಗೆ ಈಗ ಅರೆಸ್ಟ್ ವಾರಂಟ್ ಜಾರಿಯಾಗಿದೆಯಂತೆ. ಲವ್ ಈಸ್ ಪಾಯ್ಸನ್ ಚಿತ್ರದ ಮೂಲಕ ಅರೇಂಜ್ ಆಗಿದ್ದ ಈ ಪಾರ್ಟಿಯಲ್ಲಿ ಕೊಂಚ ಗಡ್‌ಬಡ್ ಆಗಿದ್ದು ಎಲ್ಲರಿಗೂ ಗೊತ್ತು. 2014ರ ನ್ಯೂ ಇಯರ್ ಪಾರ್ಟಿಗಾಗಿ ಪೂನಂ ಪಾಂಡೆ ಬೆಂಗಳೂರಿಗೆ ಬರುವಾಗ, ಹೋಗುವಾಗ ಸಂಪೂರ್ಣ ಬಟ್ಟೆ ಹಾಕಿಕೊಂಡಿದ್ದರೂ, ಬಂದುಹೋಗುವ ನಡುವೆ ಅರೆಬೆತ್ತಲೆಯಾಗಿ ಡ್ಯಾನ್ಸ್ ಮಾಡಿದ್ದರು. ಅಲ್ಲಿ ಅವರ ಕಿಡಿಗೇಡಿ ಅಭಿಮಾನಿಗಳು ಆಕೆಯನ್ನು ನೋಡಿ 'ಮುತ್ತಲೇ, ಎತ್ತಲೇ' ಎಂದೆಲ್ಲ ಮೈ ಮೇಲೆ ಬಿದ್ದಿದ್ದಕ್ಕೆ ಗಾಬರಿಯಾಗಿ ಓಡಿಹೋಗಿದ್ದ ಪೂನಂ ಪಾಂಡೆ ಈಗ ಮತ್ತೊಮ್ಮೆ ಬೆಂಗಳೂರಿಗೆ ಬರಬೇಕಿದೆ. ಇದಕ್ಕೆ ಕಾರಣ ಹಳೆಯದೊಂದು ಕೇಸು. 2011ರಲ್ಲಿ ದೇವರ ಫೋಟೋ ಹಿಡಿದು, ಬೆತ್ತಲೆಯಾಗುವ ಭರದಲ್ಲಿ ಬೇಲಿ ಹಾರಿದ್ದಕ್ಕೆ ಅವರ ಹೆಸರಲ್ಲಿ ಈಗ ನಾನ್ ಬೇಲಬಲ್ ವಾರಂಟ್ ಹೊರಡಿಸಲಾಗಿದೆಯಂತೆ. ಆಕ್ಚುಯಲೀ, ಬೆಂಗಳೂರಿನ ಕೋರ್ಟು ಈ ವಿಷಯದಲ್ಲಿ ಕೋರ್ಟಿಗೆ ಹಾಜರಾಗುವಂತೆ ಪೂನಂಗೆ ನೊಟೀಸ್ ನೀಡಿತ್ತು. ಹೇಗಿದ್ದರೂ ಪೂನಂ ನ್ಯೂಇಯರ್ ಪಾರ್ಟಿಗೆ ಬೆಂಗಳೂರಿಗೆ ಬರುವವರಿದ್ದಳು. ಹಾಗಾಗಿ 'ಪಾರ್ಟಿಗೆ ಬಂದವಳು, ಕೋರ್ಟಿಗೆ ಬಾರದಿರುವಳೇ' ಎಂಬ ನಂಬಿಕೆಯಲ್ಲಿ ಕೋರ್ಟು ಕಾಯುತ್ತಿತ್ತು. ಆದರೆ ಕಿರಿಕ್ ಮಾಡಿಕೊಂಡ ಪೂನಂ ಎಸ್ಕೇಪ್ ಆಗಿದ್ದಕ್ಕೆ ಗರಂ ಆಗಿರುವ ಕೋರ್ಟ್ ಈಗ ಆಕೆಗೆ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ. ಆಕೆಯ ಅಭಿಮಾನಿಗಳು ಮಾತ್ರ ಈ ನೆಪದಲ್ಲಾದರೂ ಪೂನಂಳನ್ನು ಇನ್ನೊಮ್ಮೆ ನೋಡಬಹುದು ಎಂದು ಥ್ರಿಲ್ ಆಗಿದ್ದಾರಂತೆ.
ಡಬ್ಕುಡಬಲ್ ತುದಾಂಡಲ್...
- ಮುಂಬೈ ಸ್ಟೇಡಿಯಂನಲ್ಲಿ ಗವಾಸ್ಕರ್, ತೆಂಡೂಲ್ಕರ್ ಸ್ಯ್ಟಾಂಡ್ ಇರೋ ಥರಾ, ಬೆಂಗಳೂರಲ್ಲಿ ರೋಜರ್ ಬಿನ್ನಿಗೆ ಒಂದು ಸ್ಟ್ಯಾಂಡ್ ಮಾಡಿದರೆ ಅದಕ್ಕೆ ಹೆಸರು
ಬಿನ್ನಿ 'ಮಂಟಪ'
- ಸಾಹಿತ್ಯ ಸಮ್ಮೇಳನದಲ್ಲಿ 'ಶಾರ್ಟ್' ಸರ್ಕ್ಯೂಟ್ ಆಯ್ತಂತೆ
ಬಹುಶಃ ಯಾರೋ 'ಚುಟುಕು' ಸಾಹಿತಿಗಳ ಕೈವಾಡ ಇರಬಹುದು.
- ಕಾಂಗ್ರೆಸ್ 'ಅಧಿನಾಯಕಿ' ಸೋನಿಯಾ ಗಾಂಧಿಗೆ ದೇವಸ್ಥಾನ ಕಟ್ಟಿಸಿ ಅವರನ್ನು ದೇವರನ್ನಾಗಿ ಮಾಡಲಾಗಿದೆ
ಹಾಗಿದ್ರೆ ಇನ್ಮೇಲೆ ಕಾಂಗ್ರೆಸ್ ಪಕ್ಷವನ್ನು 'ದೈವಾಧೀನ' ಎನ್ನಬಹುದು.
- ಅಮೆರಿಕಾದಲ್ಲಿ ಚಳಿ
ಭಾರತದ ಸ್ಪಷ್ಟನೆ: ಇದಕ್ಕೆ ದೇವಯಾನಿ ವಿಷಯದಲ್ಲಿ ನಾವು ನಡೆಸುತ್ತಿರುವ 'ಕೋಲ್ಡ್‌ವಾರ್' ಕಾರಣ ಅಲ್ಲ.
- ಒಂದು ಆಸ್ಪತ್ರೆ ಎದುರಿಗೇ ಇನ್ನೊಂದು ಆಸ್ಪತ್ರೆ ಓಪನ್ ಮಾಡಿದರೆ, ಅದು..
'ಹೆಲ್ದೀ' ಕಾಂಪಿಟೇಶನ್
- ಹರಿ
harikannadaprabha@gmail.com