ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಲೈಂಗಿಕತೆ ಶಿಕ್ಷಣವಾಗುವುದಾದರೆ ಎದುರಾಗುವ ಗೋಜಲುಗಳು

Srinivasa Murthy VN
Updated On : 30 Jul 2014, 11:29 am

ಕಲಿಕೆಗೆ ಎಲ್ಲ ವಿದ್ಯೆಗಳು ಅವಶ್ಯ. ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಲು ಅವೆಲ್ಲವೂ ಬೇಕು. ಆದರೆ ಎಲ್ಲ ಕಲಿಕೆಗಳು ಸಾಧ್ಯವೇ? ಸಾಧುವೇ?
ಅನೇಕ ರೀತಿಯಲ್ಲಿ ಈಗಾಗಲೇ ವಿವಿಧ ರೀತಿಯ ವಿಷಯಗಳಿಂದ ವಿಪರೀತವಾಗಿ ಭಾರಗೊಂಡ ವಿದ್ಯಾರ್ಥಿಗಳಿಗೆ 'ಲೈಂಗಿಕ ಶಿಕ್ಷಣ' ಎಂಬ ಹೆಚ್ಚುವರಿ ತರಗತಿಗಳ ಆವಶ್ಯಕತೆ ಇದೆಯಾ? 'ಲೈಂಗಿಕ ಶಿಕ್ಷಣ' ಇದೊಂದು ಎರಡು ಅಂಚಿನ ಕತ್ತಿ. ಅಭಾಸವಾಗದೆ, ಅಶ್ಲೀಲವಾಗದೇ ಸತ್ಯವನ್ನು ತಿಳಿಸುವ ಕಲೆ ಶಿಕ್ಷಕನಿಗೆ ಲಭ್ಯವಾಗುವುದೇ ದುಸ್ತರದ ಕೆಲಸ. ಲೈಂಗಿಕ ಶಿಕ್ಷಣ ಕೊಟ್ಟ ಮಾತ್ರಕ್ಕೆ ಅಪರಾಧಗಳನ್ನು ತಡೆಯುವುದು ಸಾಧ್ಯವೆ? ಲೈಂಗಿಕ ಶಿಕ್ಷಣ ನಮ್ಮನ್ನು ಆ ವಿಷಯದಲ್ಲಿ ಜ್ಞಾನಿಗಳನ್ನಾಗಿ ಮಾಡಬಹುದು. ಆದರೆ ಅಪರಾಧವೆಸಗುವುದು ವ್ಯಕ್ತಿಯ ಮನೋಸ್ಥಿತಿಗೆ ಸಂಬಂಧಪಟ್ಟ ವಿಚಾರ.
ಲೈಂಗಿಕ ಶಿಕ್ಷಣದ ಆಳ, ಹರಿವುಗಳೇನು? ಅವೆಲ್ಲ ವಿಷಯಗಳನ್ನು ಕರಗತಗೊಳಿಸಿಕೊಳ್ಳುವುದು ಅಷ್ಟು ಸುಲಭದ ಮಾತೇ? ಮಿಗಿಲಾಗಿ ಇದು ಅತೀ ಅವಶ್ಯದ ವಿಷಯವೇ?
ಕನ್ಯಾಪೊರೆ ಅಂದರೆ ಏನು? ಖಿಢ್ಟಿ ಋ್ಝಟ್ಜಿಜ್ಠ ಖಿಜಡಡಿ ಅಂದರೆ ಏನು ಎಂಬುದರ ಬಗ್ಗೆ ಅದನ್ನು ನೋಡದವರು, ಮಾಡದವರು ತಮಗೆ ತಿಳಿದ ರೀತಿಯಲ್ಲಿ ಕಲ್ಪಿಸಿಗೊಂಡು ಹೆಚ್ಚಿಗೆ ಮಾತನಾಡಲು ಶುರು ಮಾಡಿದಾಗ, ತಿಳಿದವರ ಧ್ವನಿ ಕ್ಷೀಣವಾಗುವುದರಲ್ಲಿ ಸಂದೇಹವಿಲ್ಲ. ಕೇವಲ  ನೋಟದಿಂದ ಮಾತ್ರವೇ ದೃಢೀಕರಿಸಬಹುದಾದ ವಿಚಾರ ಇದು. ಆದರೆ ಖಿಢ್ಟಿ ಋ್ಝಟ್ಜಿಜ್ಠ ಖಿಜಡಡಿ ತಿಳಿಸುವ ವಿಚಾರಗಳೇ ಬೇರೆ. ಸದ್ಯಕ್ಕೆ ಅದು ಇಲ್ಲಿ ಅಪ್ರಸ್ತುತ. ಆದರೆ ಲೈಂಗಿಕ ಶಿಕ್ಷಣ ಕ್ಠಿಛ್ಛಡ್ಝ್ಛಿಛಟ ಛಿಛಡಜಜ ಆಗದಿದ್ದಾಗ ಆಗಬಹುದಾದ ಅಭಾಸಗಳ ಒಂದು ಉದಾಹರಣೆ ಆಗಿ ಇದನ್ನು ಪ್ರಸ್ತಾಪಿಸುತ್ತಿರುವೆ ಅಷ್ಟೆ.
ನಾವು ಬಾಲ್ಯದಲ್ಲಿ ಓದಿದ ಪಾಠ- 'ಮನೆಯ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರುವು...' ಎಲ್ಲ ಶಿಕ್ಷಣಗಳ ಆರಂಭವಾಗುವುದು ಮನೆಯಿಂದ. ಅದೇ ರೀತಿಯಾಗಿ ಈ ಶಿಕ್ಷಣವು ಮನೆಯಿಂದಲೇ ಆರಂಭಗೊಳ್ಳಬೇಕು. ಪೋಷಕರೆ,ಮಕ್ಕಳ ಕಡೆ ಗಮನ ಕೊಡಿ. ಅವರ ಹಾವಭಾವ, ನೋಟ, ಅಭಿರುಚಿಗಳೇನು ನಿಮಗೆ ಗೊತ್ತಿರಲಿ. ಶುಚಿತ್ವದ ಬಗ್ಗೆ ತಿಳಿವಳಿಕೆ ನೀಡಿ. ನಿಯಮಿತವಾಗಿ ಪಾಲನೆ ಆಗುತ್ತಿದೆಯಾ? ಖಚಿತಪಡಿಸಿಕೊಳ್ಳಿ. ಮಕ್ಕಳ ಸ್ನೇಹಿತರಾರು? ಅವರ ದಿನಚರಿಗಳೇನು? ಅವರ ಬಗ್ಗೆ ಶಾಲೆಯಲ್ಲಿ ಶಿಕ್ಷಕರ ಅಭಿಪ್ರಾಯಗಳೇನಿವೆ? ನಿಮಗೆ ಗೊತ್ತಿರುವುದು ಅತೀ ಅವಶ್ಯ.
ಯಾವುದೇ ರೀತಿಯಲ್ಲಿ ನಮ್ಮ ಮಕ್ಕಳನ್ನು ತಿದ್ದುವುದರಲ್ಲಿ (ಲೈಂಗಿಕ ಶಿಕ್ಷಣ ಸೇರಿದಂತೆ) ನಿಮಗೆ ಮುಜುಗರವಿದ್ದಲ್ಲಿ ನಿಮ್ಮ ಮನೆಯ ಸೂಕ್ತ ಹಿರಿಯರ, ನೆರೆಯವರ, ಗೆಳೆಯರ, ಕುಟುಂಬ ವೈದ್ಯರ ಸಲಹೆ ಸಹಾಯ ಪಡೆಯಿರಿ. ರಕ್ಷಣೆ, ತಿಳಿವಳಿಕೆ, ಬೆಳವಣಿಗೆ ಸೇರಿದಂತೆ ಬಹಳಷ್ಟು ಸಮಸ್ಯೆಗಳ ಪರಿಹಾರ ಇಷ್ಟರಿಂದಲೇ ಸಾಧ್ಯ.
ಲೈಂಗಿಕ ಶಿಕ್ಷಣವೆಂಬುದು ಬೇಕು ಬೇಡಗಳ ಆವಶ್ಯಕತೆಗೆ ಅನುಗುಣವಾಗಿ ಪರಿಣಿತರಿಂದ ವೈಯಕ್ತಿಕವಾಗಿ ನಡೆಯಬೇಕಾದ ಕ್ರಿಯೆಯೇ ಹೊರತು ಅಭೋದ ಶಾಲಾ ಮಕ್ಕಳಿಗೆ ಸಾರ್ವಜನಿಕವಾಗಿ ತಿಳಿಪಡಿಸುವ ವಿಚಾರ ಅಲ್ಲ.
ಉಗುರಿನಿಂದ ಹೋಗುವುದಕ್ಕೆ ಕೊಡಲಿ ತೆಗೆದುಕೊಳ್ಳುವುದೇ ಫ್ಯಾಷನ್ ಆಗಿರುವ ಈ ದಿನಗಳನ್ನು ಸರಳ ವಿಚಾರಗಳಿಗೆ ಸಮ್ಮತಿ ದೊರೆಯಬಹುದೆ?

-ಡಾ. ಎಸ್.ಆರ್. ಕುಲಕರ್ಣಿ, ಶಿಕಾರಿಪುರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement