ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಅಂಕಣಗಳು

ಚುಟುಕು-ಕುಟುಕು

Vishwanath S
Updated On : 29 Jun 2014, 12:20 pm

ಚುಟುಕು-ಕುಟುಕು
ಹೀಗೊಬ್ಬ ಜ್ಯೋತಿಷಿ
ಆ ತಾರೆಗಳ ಎಣಿಸಿ, ಚಂದ್ರನಿಂದಾ ಗುಣಿಸಿ
ಗ್ರಹಗತಿಯ ತಿದ್ದಲವ ಎದ್ದ...
ಮೇಲೆ ನೋಡುತ ಹೊರಟ, ಈ ಜಗದ ಅರಿವಿಲ್ಲ,
ತೊಟ್ಟಿಯಲಿ ಕಾಲ್ಜಾರಿ ಬಿದ್ದ!

'ಪ್ರೇತ'ಸಿ
ಕೆನೆ ಆ್ಯಪಲ್ಲು, ಕಣ್ಣಂತೂ ನಿಂಬೆ...
ಕೈ ಬೆರಳುಗಳೆಲ್ಲ ಎಳೆ ಮರದ ರೆಂಬೆ
ಅಯ್ಯೋ ತುಟಿ ತೊಂಡೆ, ಹಲ್ಲು ದಾಳಿಂಬೆ
ನೀ ಮನುಜಳಲ್ಲ....ಪಕ್ಕಾ ಹಿಡಿಂಬೆ!!

ಸುದ್ದಿಕತೆ
ಕರ್ನಾಟಕವೆಂಬೋ ರಾಜ್ಯದೊಳಗಣ ಉತ್ತರ ಕರ್ನಾಟಕವೆಂಬೋ ಸುಡುಬಿಸಿಲು ಪ್ರದೇಶದಲ್ಲೊಮ್ಮೆ ಅಬ್ಬರಿಸಿ ಬೊಬ್ಬಿಟ್ಟಂತೆ ಮೇಘಸ್ಫೋಟವೊಂದು ಜರುಗಿತು. ಬಾಯ್ಬಿಟ್ಟ ನೆಲಕ್ಕೆ ಬಾಯಿ ಬಾಯಿ ಬಡಿದುಕೊಳ್ಳುವಂತಾಯಿತು. ವಾರಗಟ್ಟಲೇ ಆರ್ಭಟಿಸಿದ ವರುಣ, ಆ ಹಿಂದುಳಿದ ಪ್ರದೇಶವನು ಇನಷ್ಟು ಹಿಂದಕ್ಕೆ ಒಯ್ದು ಒಕ್ಕಟ್ಟಿದ. ಎಲ್ಲೆಲ್ಲೂ ನೀರು- ಊರಲ್ಲೂ, ಬಡಪಾಯಿಗಳ ಕಣ್ಣಲ್ಲೂ! ಇಂತಿಪ್ಪ ಸಮಯದಲ್ಲಿ ಆಕಾಶ ಮಾರ್ಗವಾಗಿ(ಹೆಲಿಕಾಪ್ಟರ್‌ನಲ್ಲಿ) ಆರ್ಭಟಿಸುತ್ತಾ ಹಾರಿಬಂದ ಒಬ್ಬ ಮಹಾನಾಯಕ "ಸರ್ಕಾರದ ಕೆಲಸ ದೇವರ ಕೆಲಸ, ನಾವಿರಲು ನಿಮಗ್ಯಾಕೆ ಚಿಂತೆ, ಸ್ವಲ್ಪ ದಿನದಲ್ಲೇ ನಿಮಗೆ ಮನೆ ಕಟ್ಟಿಕೊಡಲು ಬರುತ್ತೇವಂತೆ..." ಎನುತ್ತಾ ಬಿಸ್ಕೀಟು, ಬ್ರೆಡ್ಡಿನ ಪೊಟ್ಟಣಗಳನು ಕೆಳಗೆ ನಿಂತ ಹಸಿದ ದೇಹಗಳ ಮೇಲೆ ಬಿಸುಟಿ ದಿಗ್ದಿಗಂತದಲ್ಲಿ ಹಾರಿಹೋದ....  
ಕಾಲ ಬದಲಾಯಿತು. ಆದರೆ ಆ ಬಡ ಜೀವಗಳ ಬದುಕು ಬದಲಾಗಲಿಲ್ಲ. ಕನಸು ಕಟ್ಟಿಕೊಟ್ಟವರು ಇತ್ತ ತಲೆಹಾಕಲಿಲ್ಲ. ತಮಗೆ ಮನೆ ಕಟ್ಟಿಕೊಡಬೇಕೆಂದು ಆ ಮಹಾನಾಯಕನಿಗೆ ನೆನಪು ಮಾಡಿಕೊಡಲು ಬಡಪಾಯಿಗಳ ದಂಡು ಬೆಂಗಳೂರಿಗೆ ಬಂದಿತು. ವಿಧಾನಸೌಧ ಅಗಾಧ ಮೆಟ್ಟಿಲುಗಳ ಮೇಲೆ ಹೆದರುತ್ತಲೇ ಹೆಜ್ಜೆಯಿಟ್ಟಾಗ ಆ ಮಹಾನಾಯಕ ಸಿಗಲಿಲ್ಲ, ಆದರೆ ಆತನ ಕಾರ್ಯದರ್ಶಿಯ ದರ್ಶನವಾಯಿತು. "ಒಂದ್ ಕೆಲ್ಸ ಮಾಡಿ, ನಮ್ ಸಾರು ಮನೇಲಿದಾರೆ, ಅಲ್ಲೇ ಹೋಗಿ ಭೇಟಿ ಮಾಡಿ" ಎಂದು ಅವರಿಗೆಲ್ಲ ಹೇಳಿದ ಕಾರ್ಯದರ್ಶಿ, ಮಹಾನಾಯಕನ 10 ಮನೆಗಳ ಅಡ್ರೆಸ್ ಕೊಟ್ಟ!  
ಜಗಜಾಲಾಟ
ಇಸ್ಲಾಮಿಕ್ ಅಧಿಪತ್ಯವನು ಸ್ಥಾಪಿಸಬೇಕೆಂದು ನೈಜೀರಿಯಾವನು ನೆತ್ತರಲ್ಲಿ ಮುಳುಗಿಸಿದ್ದಾರೆ ಬೋಕೋ ಹರಾಮ್ ಉಗ್ರರು. ಆಧುನಿಕ ಸಂಸ್ಕೃತಿ, ಶಿಕ್ಷಣ, ಮುಸ್ಲೀಮೇತರರು ತಮ್ಮನು ಆಳುವುದು ಹರಾಮ್(ನಿಷಿದ್ಧ) ಎನುತ್ತಲೇ ಕೆಲ ದಿನಗಳ ಹಿಂದೆ 223 ಶಾಲಾ ಬಾಲಕಿಯರನು ಅಪಹರಿಸಿ ಜಗತ್ತಿನಾದ್ಯಂತ ಸುದ್ದಿಯಾದ ಇವರು, ಅನ್ಯ ಧರ್ಮೀಯರನು ಸಾಯಿಸುವುದರಿಂದ ಜನತ್‌ನಲ್ಲಿ ತಮಗೆ ಜಾಗ ಫಿಕ್ಸ್ ಆಗುತ್ತದೆ ಎಂದು ನಂಬಿದವರು. ಈ ನಂಬಿಕೆಯಿಂದಾಗಿಯೇ ಸಾವಿರಾರು ಜನರನು ಕೊಂದು ತಮಗೆ ಸ್ವರ್ಗದಲ್ಲಿ ಸೈಟು ಸಿಕ್ಕಿತೆಂದು ಕುಣಿದಾಡಿದವರು. ಆದರೆ ಆ ಸೈಟಿನ ಮೇಲೆ ಬಿಲ್ಡಿಂಗ್ ಕಟ್ಟಿಸಬೇಕು ಎನುವ ಕಾರಣಕ್ಕೋ ಏನೋ ತಮ್ಮ ಹುಚ್ಚಾಟವನು ಮಾತ್ರ ಮುಂದುವರಿಸಿದ್ದಾರೆ.ಅವರನು ಹೇಗೆ ತಡೆಯಬೇಕೆಂದು ತಿಳಿಯದೇ ಒದ್ದಾಡುತ್ತಿರುವ ನೈಜೀರಿಯನ್ ಸರ್ಕಾರಕ್ಕೆ ಕೆಲದಿನಗಳ ಹಿಂದೆ ಆಶ್ಚರ್ಯವೊಂದು ಕಾದಿತ್ತು. ಸಾಂಬೀಸಾ ಕಾಡಿನಿಂದ ನಾಡಿಗೆ ಓಡಿಬಂದ ಬೋಕೋ ಹರಾಮ್ ಉಗ್ರರ ದೊಡ್ಡ ಗುಂಪೊಂದು ಪೊಲೀಸರ ಕೈಗೆ ಸಿಕ್ಕಿಬಿದ್ದಿತು. ಕೆಲವರು ತಾವೇ ಬಂದು ಸರಂಡರ್ ಆದರು!  
"ನಾವು ಕೊಂದ ಮುಸ್ಲೀಮೇತರರ ಆತ್ಮಗಳು ಕಾಡಿನಲ್ಲಿ ಹಾವು ಮತ್ತು ಹೆಜ್ಜೇನುಗಳಾಗಿ ಬಂದು ಕಾಟ ಕೊಡುತ್ತಿವೆ. ಆಗಲೇ ಎಷ್ಟೋ ಜನರನು ಆ ದುಷ್ಟ ಆತ್ಮಗಳು ಬಲಿತೆಗೆದುಕೊಂಡಿವೆ" ಎಂದು ಪೊಲೀಸರ ವಶದಲ್ಲಿರುವ ಉಗ್ರರು ಭಯದಿಂದ ಹೇಳುತ್ತಿದ್ದಾರೆ.
ಮೌಢ್ಯದ ಮುಖಗಳು ಹೇಗಿವೆಯೋ ನೋಡಿ? ಅನ್ಯಧರ್ಮೀಯರನು ಕೊಲ್ಲಲು ಮೌಢ್ಯವೇ ಇವರಿಗೆ ಪ್ರೇರಣೆಯಾದರೆ, ಈಗ ಅವರನು ಕೊಲ್ಲದಿರಲು ಅದೇ ಮೌಢ್ಯವೇ ಅಡ್ಡಿ ಬರುತ್ತಿದೆ.
ದೇವರು ಆ ಜೇನೊಣ ಮತ್ತು ಹಾವುಗಳನು ಸುಖವಾಗಿಟ್ಟಿರಲಿ!
ಕೊಳವೆಗೆ ಕಣ್ಣು
ಪ್ರಪಂಚದ ಅತ್ಯುತೃಷ್ಟ ಆರ್ಥಿಕ ತಜ್ಞರು, ಸಿನೆಮಾ ನಿರ್ದೇಶಕರು, ವಿಜ್ಞಾನಿಗಳು, ಬರಹಗಾರರು, ಕಲಾವಿದರು, ಕ್ರೀಡಾಪಟುಗಳು, ಸಂಗೀತಗಾರರು, ಗಗನಯಾತ್ರಿಗಳು, ಗಣಿತಶಾಸ್ತ್ರಜ್ಞರು, ಮನೋವಿಜ್ಞಾನಿಗಳು ಮತ್ತು ಉದ್ಯಮಿಗಳೆಲ್ಲ ತಾವು "ತಾರೆ" ಎನಿಸಿಕೊಳ್ಳುವ ಮಟ್ಟಕ್ಕೆ ಬೆಳೆದದ್ದು ಹೇಗೆ, ತಮ್ಮ ರಂಗದಲ್ಲಿ ಎದುರಾಗುವ ಸಮಸ್ಯೆಗಳು ಹೇಗಿರುತ್ತವೆ, ಭವಿಷ್ಯದಲ್ಲಿ ತಮ್ಮ ಕ್ಷೇತ್ರದಲ್ಲಿ ಎಂತೆಂಥ ಬದಲಾವಣೆಗಳಾಗಬಹುದು ಎನುವ ರಹಸ್ಯವನೆಲ್ಲ "ಖಊಿಉ: ಐಜಜಛಡ ಢ್ಟ್ಠಿಝಿ ಡಠ್ಠಜಛಜ್ಝಟ್ಜಿ" ಎಂಬ ವೇದಿಕೆಯಲ್ಲಿ ವರ್ಷಗಳಿಂದ ಹಂಚಿಕೊಳ್ಳುತ್ತಿದ್ದಾರೆ. ಸ್ಟೀಫನ್ ಹಾಕಿಂಗ್‌ರಿಂದ ಹಿಡಿದು, ಕ್ರಿಸ್ಟೋಫರ್ ನೋಲನ್‌ರಂಥ ಮೇಧಾವಿಗಳ ಸ್ಫೂರ್ತಿದಾಯಕ ಮಾತುಗಳನು ಕೇಳಬೇಕೆಂದರೆ ಯೂಟ್ಯೂಬ್‌ನಲ್ಲಿ ಖಊಿಉ ಖಿಆಔಓ ಎಂದು ಟೈಪ್ ಮಾಡಿ.
ವಿರಾಮ-ಲೋಕಾಭಿರಾಮ
ಚಿತ್ರರಂಗದಲ್ಲಿ ಯುಗಪಲ್ಲಟ ಮಾಡಿಯೇ ತೀರುತ್ತೇನೆಂಬ ಅತ್ಯುತ್ಸಾಹದಿಂದ ಬೆಂಗಳೂರಿಗೆ ಕುಣಿಯುತ್ತಾ ಬಂದ ಹುಡುಗ. ಎಷ್ಟು ಒದ್ದಾಡಿದರೂ ಎಲ್ಲೂ ಚಾನ್ಸು ಸಿಗಲಿಲ್ಲ. ಬರ್ಗರ್ ಇಲ್ಲದಿದ್ದರೆ ಬನೇ ಗತಿಯೆಂದು ಕೊನೆಗೆ ಧಾರಾವಾಹಿಯೊಂದರ ಆರ್ಟ್ ಡಿಪಾರ್ಟ್‌ಮೆಂಟ್‌ನಲ್ಲಿ ಸೇರಿಕೊಂಡ.
ಕರ್ಚೀಫು ಹಿಡಿದುಕೊಂಡೇ ನೋಡಲು ಕೂಡಬೇಕಾದಂಥ ಘೋರ ಹೃದಯವಿದ್ರಾವಕ ಧಾರಾವಾಹಿಯದು. ಅದರಲ್ಲಿನ ಮುಖ್ಯಪಾತ್ರಧಾರಿ ಕನಡದ ಹೆಸರಾಂತ ನಟಿ. ತನ ಅಭಿನಯದಿಂದ ಸಾವಿರಾರು ಜನರನು ವರ್ಷಗಳಿಂದ ಕಣ್ಣೀರಲ್ಲಿ ಮುಳುಗಿಸುವಲ್ಲಿ ಪಳಗಿದಾಕೆ. ವಯಸ್ಸಿಗೆ ತಕ್ಕಂತೆ ಆ ಧಾರಾವಾಹಿಯಲ್ಲಿ ಆಕೆಗೆ ಮುದ್ದಿನ ಅಜ್ಜಿಯ ಪಾತ್ರ. ಆಕೆಯ ಹಿನೆಲೆ ಆ ಹುಡುಗನಿಗೆ ತಿಳಿಯದು.
ನಮ್ಮ ಉತ್ಸಾಹಿ ಹುಡುಗನಿಗೆ ಆಗೀಗ ನಟರಿಗೆಲ್ಲ ಚಹಾ ತಂದುಕೊಡುವ ಜವಾಬ್ದಾರಿಯೂ ಇತ್ತು. ಒಂದು ದಿನ ಚಹಾ ಕಪ್ಪು ಹಿಡಿದು ಆಕೆಯತ್ತ ಹೋದವನೇ "ಅಜ್ಜೀ ಟೀ ತೊಗೊಳ್ಳಿ" ಎಂದಿದ್ದಾನೆ. ನಟಿಯ ಕಿವಿಗಳಿಗೆ ಕಾದ ಸೀಸ ಸುರಿದಂತಾಗಿದೆ. ಮೊದಲೇ ಕೆಂಪಗಿರುವ ಮುಖವನು ಇನಷ್ಟು ಕೆಂಪಗೆ ಮಾಡಿಕೊಂಡು, "ಯಾರೋ ನಿನಗೆ ಅಜ್ಜಿ? ಬ್ಲಡಿ ಫೂಲ್...ನಾನು ಅಜ್ಜೀನಾ...ಏ ನಿನ!! ಯಾವನ್ರೀ ಇವ ಕರ್ಕೊಂಡು ಬಂದಿದ್ದು" ಎಂದು ಹಿಗ್ಗಾ ಮುಗ್ಗಾ ಜಾಡಿಸಿ, ಕಂಡ ಕಂಡಲ್ಲೆಲ್ಲ ಬೈಯ್ದಿದ್ದಾಳೆ. ಸೆಟ್‌ನಲ್ಲಿದ್ದವರಿಗೆಲ್ಲ ಗಾಬರಿ. ಪಾಪ ಡೈರೆಕ್ಟರ್‌ಗೂ ಏನು ಮಾಡಬೇಕೋ ತಿಳಿಯದು. ಕೊನೆಗೆ ಅವನೂ ನಟಿಯ ಜೊತೆ ಸೇರಿಕೊಂಡು ಹುಡುಗನ ಮೇಲೆ ಸವಾರಿ ಮಾಡಿದ್ದಾನೆ. ತತ್ತರಿಸಿ ಹೋದ ಹುಡುಗ, ನಡುಗುವ ಧ್ವನಿಯಲ್ಲೇ "ಅಜ್ಜಿಗೆ ಅಜ್ಜಿ ಅನದೇ ಅಕ್ಕ ಅನ್ಬೇಕಾ?" ಎಂದು ನಾಲಿಗೆ ಕಚ್ಚಿಕೊಂಡಿದ್ದಾನೆ! ಇದನು ಕೇಳುತ್ತಿದ್ದಂತೆಯೇ ಇನೊಂದು ರೌಂಡು ಬೈಗುಳಗಳ ಮಳೆ ಶುರುವಾಗಿದೆ. "ಮೇಡಂ" ಅಂತ ಕರಿ ಎಂದು ಡೈರೆಕ್ಟರ್ ದಬಾಯಿಸಿದ್ದಾನೆ. ಗಾಬರಿಯಾದ ಹುಡುಗ ಯಾರಿಗೋ ಫೋನು ಮಾಡುವವನಂತೆ ಮೊಬೈಲ್ ಕಿವಿಗೆ ಇಟ್ಟುಕೊಂಡು ಹೊರಗೆ ಹೋದವನೇ ಸೆಟ್‌ಗೆ ಕೈ ಮುಗಿದು ಎಸ್ಕೇಪ್ ಆಗಿದ್ದಾನೆ!
ಪಾಪ ಆ ಹುಡುಗ ಈಗ ತನ ಅಜ್ಜಿಗೂ ಅಜ್ಜಿ ಅನುತ್ತಾನೋ ಇಲ್ಲವೋ?
"ರೀಲ್ ಲೈಫ್‌ಗೂ ರಿಯಲ್ ಲೈಫ್‌ಗೂ ವ್ಯತ್ಯಾಸ ಇದೆ" ಎಂಬ ಮಾತು ಇಂಥ ಅಜ್ಜಿಯನು...ಅಲ್ಲಲ್ಲ, "ಮೇಡಂ"ರನು ನೋಡೇ ಹುಟ್ಟಿಕೊಂಡಿರಬೇಕು!


-   ರಾಘವೇಂದ್ರ ಆಚಾರ್ಯ
raghu.bioastra@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments