ಒಮ್ಮೆ ಹಾಗೆ ಗಮನಿಸಿ ನೋಡಿ ಬದುಕಿನಲ್ಲಿ ಸಂಖ್ಯೆಗಳದ್ದೇ ಸಾಮ್ರಾಜ್ಯ. ವ್ಯಕ್ತಿ ಎಷ್ಟೇ ಶ್ರೀಮಂತನಿರಲಿ ಅಥವಾ ಬಡವನಿರಲಿ ಎಲ್ಲರ ಬದುಕಿನಲ್ಲೂ ಸಂಖ್ಯೆ ಮಾತ್ರ ಇದ್ದೇ ಇರುತ್ತದೆ. ಸಂಖ್ಯೆಗಳಿಲ್ಲದ ಬದುಕನ್ನ ಇಂದಿಗೆ ಊಹಿಸಿಕೊಳ್ಳಲು ಸಾಧ್ಯವಿಲ್ಲ. ವ್ಯಕ್ತಿ ಹುಟ್ಟಿದ ದಿನಾಂಕದಿಂದ ಶುರುವಾಗುವ ಈ ಸಂಖ್ಯೆಗಳ ಆಟ ನಿಲ್ಲುವುದು ಕೂಡ ಸಂಖ್ಯೆಯೊಂದಿಗೆ. ಸಂಖ್ಯೆ ಅಥವಾ ನಂಬರ್ಸ್ ಬದುಕಿನ ಅತಿ ಮುಖ್ಯ ಭಾಗ. ಕೆಲವೊಮ್ಮೆ ನಾವು ಅದರ ಬಗ್ಗೆ ಮಾತನಾಡದೆ ಇದ್ದರೂ ಅದು ನಮ್ಮ ಜೀವನದಲ್ಲಿ ಮಾತ್ರ ಇದ್ದೇ ಇರುತ್ತದೆ. ಮಕ್ಕಳಿದ್ದಾಗ ಶಾಲೆಯಲ್ಲಿ ತೆಗೆಯುವ ಅಂಕ ಮುಖ್ಯವಾದರೆ, ಯೌವ್ವನದಲ್ಲಿ ಗಳಿಸುವ ಆದಾಯ, ಮಧ್ಯ ವಯಸ್ಸಿನಲ್ಲಿ ಬಿಪಿ, ಶುಗರ್ ಸಂಖ್ಯೆ, ಮುಪ್ಪು ಆವರಿಸುತ್ತಾ ತಿನ್ನುವ ಗುಳಿಗೆಗಳ ಲೆಕ್ಕ ಒಟ್ಟಿನಲ್ಲಿ ಬದುಕೆಂದರೆ ಅದೊಂದು ಗಣಿತ, ಎಲ್ಲವೂ ಸಂಖ್ಯಾಶಾಸ್ತ್ರ! ಈಗ ಚುನಾವಣೆ ಸಮಯ ಬೇರೆ! ಸಂಖ್ಯೆಗಳು ಇನ್ನಷ್ಟು ಮಹತ್ವದ ಪಾತ್ರ ವಹಿಸುತ್ತವೆ. ಈ ಸಂಖ್ಯೆಗಳನ್ನ ಸರಿಯಾಗಿ ಬಳಸಿಕೊಳ್ಳುವ ಸಾಮರ್ಥ್ಯವುಳ್ಳವರು ಜಯಗಳಿಸುತ್ತಾರೆ. ಇದನ್ನ ಡೇಟಾ ಕಲೆಕ್ಷನ್ ಅಂತಲೂ ಕರೆಯುತ್ತೇವೆ. ಕೊನೆಗೂ ಹೀಗೆ ಸಂಗ್ರಹಿಸಿದ ಮಾಹಿತಿಯಿಂದ ಫಲಿತಾಂಶ ಏನಾಯಿತು ಎನ್ನುವುದು ಕೂಡ ಸಂಖ್ಯೆಯಲ್ಲಿ ನಮೂದಿಸಿಸಲ್ಪಡುತ್ತವೆ.
ಚುನಾವಣೆಗೆ ಬೇಕಾಗುವ ಅತಿ ಮುಖ್ಯ ಅಂಕಿ-ಅಂಶಗಳೇನು? ಎನ್ನುವುದನ್ನ ಅವಲೋಕಿಸೋಣ.
ಚುನಾವಣೆಗೆ ಅಪರೋಕ್ಷವಾಗಿ ಕಾಣಿಕೆ ನೀಡುವ ಕೆಲವು ಅಂಕಿ ಅಂಶಗಳು ಹೀಗಿವೆ :
ಮೇಲೆ ಹೇಳಿದ ಅಂಶಗಳು ಅತ್ಯಂತ ಮೂಲಭೂತ ಅಂಶಗಳು. ಇದರೊಂದಿಗೆ ಪ್ರತಿ ಹಂತದಲ್ಲೂ ಅವುಗಳನ್ನ ಮತ್ತಷ್ಟು ಆಳವಾಗಿ ವಿಭಾಗಿಸಲಾಗುತ್ತದೆ. ಉದಾಹರಣೆಗೆ ಒಂದೂವರೆ ಕೋಟಿ 18/19 ವರ್ಷದ ಹೊಸ ಮತದಾರರಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯೆಷ್ಟು? ಗಂಡು ಮಕ್ಕಳ ಸಂಖ್ಯೆಯೆಷ್ಟು? ಇವರಲ್ಲಿ ಎಷ್ಟು ಜನ ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ? ಎಷ್ಟು ಜನ ಹಳ್ಳಿಗಳಲ್ಲಿ? ಅವರ ಎಕನಾಮಿಕ್ ಬ್ಯಾಕ್ ಗ್ರೌಂಡ್, ಅವರ ಕಲ್ಚರಲ್ ಬ್ಯಾಕ್ಗ್ರೌಂಡ್.., ಹೀಗೆ ಪ್ರತಿಯೊಂದನ್ನು ಅತ್ಯಂತ ಸೂಕ್ಷ್ಮವಾಗಿ ವಿಭಜಿಸಿ ವಿಶ್ಲೇಷಣೆ ಮಾಡಲಾಗುತ್ತದೆ. ಹೊಸ ತಲೆಮಾರು ಟ್ವಿಟ್ಟರ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಸದಾ ಕ್ರಿಯಾಶೀಲರಾಗಿರುತ್ತಾರೆ. 62 ಕೋಟಿ ಜನ ಇಂಟರ್ನೆಟ್ ಬಳಕೆದಾರರಿದ್ದಾರೆ. ಇವರೆಲ್ಲಾ ನಿತ್ಯವೂ ತಮಗೆ ಅರಿವಿಲ್ಲದೆ ತಮ್ಮ ಬದುಕುವ ರೀತಿಯನ್ನ, ತಮ್ಮ ಇಷ್ಟ, ಅನಿಷ್ಟಗಳನ್ನ, ಬೇಕು ಬೇಡಗಳನ್ನ ಎಲ್ಲವನ್ನೂ ಬಿಟ್ಟು ಹೋಗುತ್ತಿದ್ದಾರೆ. ಇದನ್ನ ಡಿಜಿಟಲ್ ಫುಟ್ ಪ್ರಿಂಟ್ ಎನ್ನಲಾಗುತ್ತದೆ. ನಮ್ಮ ಮಾಹಿತಿಗಳನ್ನ ಕಲೆ ಹಾಕಿ ಅವುಗಳನ್ನ ನಮ್ಮ ಪ್ರಚೋದನೆಗೆ ಬಳಸಲಾಗುತ್ತದೆ. ಭಾರತದಲ್ಲಿ ಇಂದು 96 ಕೋಟಿ ಮೊಬೈಲ್ ಫೋನ್ ಗಳಿವೆ ಆದರೆ ಅವುಗಳಲ್ಲಿ ಸ್ಮಾರ್ಟ್ ಫೋನ್ ಗಳ ಸಂಖ್ಯೆ 34 ಕೋಟಿ. 2022 ರ ವೇಳೆಗೆ ಇದು 80 ಕೋಟಿ ತಲುಪಲಿದೆ ಎನ್ನುತ್ತದೆ ಅಂಕಿ-ಅಂಶ. ಅಂದರೆ ಗಮನಿಸಿ ಇಂಟರ್ನೆಟ್ ಮತ್ತು ಸೋಶಿಯಲ್ ಮೀಡಿಯಾಗಳು ಅತ್ಯಂತ ಪ್ರಬಲ ಅಸ್ತ್ರಗಳಾಗುತ್ತವೆ. ಅದು ಚುನಾವಣೆ ಇರಬಹದು ಅಥವಾ ಮತ್ಯಾವುದೇ ಪ್ರಮುಖ ಘಟನೆಯಾಗಿರಬಹದು. ಸೋಶಿಯಲ್ ಮೀಡಿಯಾ ಅಲ್ಲಿನ ಫಲಿತಾಂಶದ ಮೇಲೆ ಬೃಹತ್ ಪರಿಣಾಮ ಬೀರುತ್ತದೆ.
ಹಾಗೆ ನೋಡಲು ಹೋದರೆ 2014 ರಲ್ಲಿ ನರೇಂದ್ರ ಮೋದಿಯವರ ಗೆಲುವಿಗೆ, ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆಲುವಿಗೆ, ಬ್ರೆಕ್ಸಿಟ್ ಎನ್ನುವ ಹೊಸ ನಾಟಕ ಶುರುವಿಗೆ ಎಲ್ಲಕ್ಕೂ ಸೋಶಿಯಲ್ ಮೀಡಿಯಾದ ಕಾಣಿಕೆ ಬಳಷ್ಟಿದೆ. 2019೧೯ ರ ಭಾರತದ ಈ ಮಹಾನ್ ಚುನಾವಣೆಯಲ್ಲಿ ಕೂಡ ಸೋಶಿಯಲ್ ಮೀಡಿಯಾಗಳ ಅಬ್ಬರ ಬಹಳಷ್ಟಿದೆ. ಈ ಅಸ್ತ್ರವನ್ನ ಸರಿಯಾಗಿ ಬಳಸಲು ಬರುವರು ಮಾತ್ರ ಜಯಶೀಲರಾಗಿ ಹೊರಹೊಮ್ಮುತ್ತಾರೆ. ಭಾರತದ ಆಡಳಿತ ಪಕ್ಷಕ್ಕೆ ಈ ಅಸ್ತ್ರವನ್ನ ಬಳಸಿಕೊಳ್ಳುವ ಕಲೆ ಸಿದ್ದಿಸಿದೆ. ಪ್ರಧಾನ ವಿರೋಧ ಪಕ್ಷ ಈ ವಿಷಯದಲ್ಲಿ ಸ್ವಲ್ಪ ಹಿಂದೆ ಆದರೆ 2014 ಕ್ಕೆ ಹೋಲಿಸಿ ನೋಡಿದರೆ ಅಂತರ ಕಡಿಮೆಯಾಗಿದೆ ಅನ್ನಬಹದು.
ಕೊನೆಮಾತು: 90 ಕೋಟಿ ಬಹುದೊಡ್ಡ ಸಂಖ್ಯೆ. 130 ಕೋಟಿಗೂ ಹೆಚ್ಚಿರುವ ಜನಸಂಖ್ಯೆಯಲ್ಲಿ 90 ಕೋಟಿ ಜನರು ಈ ಬಾರಿ ಮತದಾನ ಮಾಡಲು ಅರ್ಹರು. ಈ ಸಂಖ್ಯೆ ಭಾರತವನ್ನ ಜಗತ್ತಿನ ಅತಿ ದೊಡ್ಡ ಗಣತಂತ್ರವನ್ನಾಗಿಸಿದೆ. 2019 ರ ಚುನಾವಣೆಯನ್ನ ಜಗತ್ತಿನ ಅತಿ ದೊಡ್ಡ ಚುನಾವಣೆ ಎಂದು ಪರಿಗಣಿಸಲಾಗಿದೆ. ತಂತ್ರಜ್ಞಾನ ಮುಂದುವರೆದಂತೆ ಜನರನ್ನ ಮಾಹಿತಿ ಅತಿ ವೇಗದಲ್ಲಿ ತಲುಪುತ್ತಿದೆ. ಹೀಗೆ ತಲುಪುವ ಮಾಹಿತಿ ಸರಿಯೋ ತಪ್ಪೋ ಎಂದು ನೋಡುವರಾರು? ಒಂದು ವಾಟ್ಸಪ್ ಗ್ರೂಪ್ ನಲ್ಲಿ 256 ಜನರನ್ನ ಸೇರಿಸಬಹದು. ಮಾಹಿತಿಯನ್ನ ಫಾರ್ವಾರ್ಡ್ ಮಾಡುವುದನ್ನ ಐದು ಸಂಖ್ಯೆಗೆ ಸೀಮಿತಗೊಳಿಸಲಾಗಿದೆ. ಹೀಗಿದ್ದೂ 1280 ಜನರನ್ನ ಅರೆಗಳಿಗೆಯಲ್ಲಿ ಸುಮ್ಮನೆ ಒಂದು ಸಣ್ಣ ಬಟನ್ ಒತ್ತುವುದರ ಮೂಲಕ ತಲುಪಿಬಿಡಬಹದು. ಚುನಾವಣೆ ಬರುತ್ತದೆ ಹೋಗುತ್ತದೆ. ಆ ವಿಷಯ ಹಾಗಿರಲಿ, ಜನಸಂಖ್ಯಾ ಸ್ಫೋಟದೊಂದಿಗೆ ಮಾಹಿತಿ ಸ್ಪೋಟವಾಗುತ್ತಿದೆ. ಸರಿಯೋ ತಪ್ಪೋ ತಿಳಿಯದ ವಯಸ್ಸಿನ ಮಕ್ಕಳ ಕೈಯಲ್ಲಿ ಸ್ಮಾರ್ಟ್ ಫೋನ್ ರಾರಾಜಿಸುತ್ತಿದೆ. ಈ ವಿಸ್ಪೋಟವ ತಡೆಯುವರಾರು? ನಮ್ಮಲ್ಲಿ ಚುನಾವಣೆಯನ್ನ ಪ್ರಣಾಳಿಕೆ ಅವಲಂಬಿಸಿ ಮಾಡುವುದೆಂದು? ಯಾವುದೇ ರಾಜಕೀಯ ಪಕ್ಷ ಇಂತಹ ವಿಸ್ಪೋಟವನ್ನ ತಡೆಯುತ್ತವೆ ಎನ್ನುವ ಪ್ರಣಾಳಿಕೆಯನ್ನ ಏಕೆ ಬಿಡುಗಡೆ ಮಾಡಿಲ್ಲ? ಕೈಲಿರುವ ಫೋನ್ ಸ್ಮಾರ್ಟ್ ಆದರೆ ಸಾಕೆ....?