ಪ್ರಾತಿನಿಧಿಕ ಚಿತ್ರ (Photo | Centers for Disease Control and Prevention)
ಅಂಕಣಗಳು

ಮೆದುಳು ತಿನ್ನುವ ಅಮೀಬಾ ಅಥವಾ Amebic Meningo encephalitis (ಕುಶಲವೇ ಕ್ಷೇಮವೇ)

ಅಮೀಬಾ ಒಂದು ಸ್ವತಂತ್ರ ಏಕಕೋಶ ಜೀವಿಯಾಗಿದ್ದು ಇದಕ್ಕೆ ಪರಿಸರ ವ್ಯವಸ್ಥೆಯ ಅಗತ್ಯವಿಲ್ಲ. ಕಲುಷಿತಗೊಂಡ ಕೆರೆ, ಕುಂಟೆ, ನದಿಗಳ ಬೆಚ್ಚನೆಯ ನೀರಿನಲ್ಲಿ ಇದು ಚೆನ್ನಾಗಿ ಅಭಿವೃದ್ಧಿ ಹೊಂದುತ್ತವೆ.

ಇತ್ತೀಚೆಗೆ ನಮ್ಮ ನೆರೆಯ ರಾಜ್ಯವಾದ ಕೇರಳದಲ್ಲಿ ಅಮೀಬಿಕ್ ಮೆನಿಂಜೋ ಎನ್ಸಫಲೈಟಿಸ್ ಎಂದು ಕರೆಯಲಾಗುವ ಮೆದುಳು ಸಂಬಂಧಿ ಕಾಯಿಲೆಗೆ ಮಕ್ಕಳು ಬಲಿಯಾಗುತ್ತಿದ್ದಾರೆ. ಮೂರು ಮಕ್ಕಳ ಸಾವಿನ ನಂತರ ಈ ರೋಗದ ಬಗ್ಗೆ ಸಾರ್ವಜನಿಕ ಕಾಳಜಿ ವಹಿಸುವುದು ಹೆಚ್ಚಾಗುತ್ತಿದೆ.

ಮೆದುಳು ತಿನ್ನುವ ಅಮೀಬಾ ಕಾಯಿಲೆ ಹೇಗೆ ಬರುತ್ತದೆ?

ಪ್ರಾಥಮಿಕ ಅಮೀಬಿಕ್ ಮೆನಿಂಜೋ ಎನ್ಸಫಲೈಟಿಸ್ (ಪಿಎಎಮ್) ನೆಗ್ಲೇರಿಯಾ ಫೌಲೆರಿ ಎಂಬ ಏಕಕೋಶ ಸೂಕ್ಷ್ಮಾಣುಜೀವಿಯಾದ ಅಮೀಬಾದಿಂದ ಉಂಟಾಗುತ್ತದೆ. ಸಿಹಿನೀರಿನ ಸರೋವರಗಳು, ಕೊಳಗಳು ಮತ್ತು ನದಿಗಳಲ್ಲಿ ಈ ಅಮೀಬಾ ಕಂಡುಬರುತ್ತದೆ. ಕೆಲವೊಮ್ಮೆ ಅಪರೂಪಕ್ಕೆ ಇದು ಸೂಕ್ತ ನಿರ್ವಹಣೆ ಇಲ್ಲದಿರುವ ಈಜುಕೊಳಗಳಲ್ಲಿಯೂ ಸಹ ಬದುಕಬಲ್ಲದು. ಇದು ಮೆದುಳಿಗೆ ಸೋಂಕು ತಗುಲಿಸಿ ಅಲ್ಲಿನ ಅಂಗಾಂಶಗಳನ್ನು ನಾಶಪಡಿಸುವುದರಿಂದ ಇದನ್ನು ‘ಮೆದುಳು ತಿನ್ನುವ ಅಮೀಬಾ’ ಎಂದೂ ಕರೆಯುತ್ತಾರೆ.

ಅಮೀಬಾ ಒಂದು ಸ್ವತಂತ್ರ ಏಕಕೋಶ ಜೀವಿಯಾಗಿದ್ದು ಇದಕ್ಕೆ ಪರಿಸರ ವ್ಯವಸ್ಥೆಯ ಅಗತ್ಯವಿಲ್ಲ. ಕಲುಷಿತಗೊಂಡ ಕೆರೆ, ಕುಂಟೆ, ನದಿಗಳ ಬೆಚ್ಚನೆಯ ನೀರಿನಲ್ಲಿ ಇದು ಚೆನ್ನಾಗಿ ಅಭಿವೃದ್ಧಿ ಹೊಂದುತ್ತವೆ.

ಈ ಸೋಂಕು ಅಪರೂಪವಾಗಿದ್ದರೂ ಮಾರಣಾಂತಿಕವಾಗಿರುತ್ತವೆ ಮತ್ತು ಶೇಕಡಾ 97ರಷ್ಟು ಸೋಂಕಿತ ರೋಗಿಗಳು ಬದುಕುಳಿಯುವುದಿಲ್ಲ. ಬೇಸಿಗೆಯಲ್ಲಿ ಜನರು ಸರೋವರಗಳು, ಕೊಳಗಳು ಅಥವಾ ನದಿಗಳಲ್ಲಿ ಈಜಲು ಹೋದಾಗ ಈ ಮಾರಕ ಅಮೀಬಿಕ್ ಸೋಂಕು ಸಂಭವಿಸುತ್ತದೆ. ಈ ಅಮೀಬಾ ಮೂಗಿನ ಮೂಲಕ ಮಾನವರ ದೇಹವನ್ನು ಪ್ರವೇಶಿಸುತ್ತದೆ ಮತ್ತು ಮೆದುಳನ್ನು ತಲುಪುತ್ತದೆ. ಮೆದುಳಿನ ಅಂಗಾAಶಗಳ ಊತವನ್ನು ಉಂಟುಮಾಡುತ್ತದ ಮತ್ತು ನಾಶಪಡಿಸುತ್ತದೆ. ಇತ್ತೀಚಿನ ಪ್ರಕರಣಗಳಲ್ಲಿ ಮಕ್ಕಳು ಈ ಸೋಂಕಿಗೆ ಹೆಚ್ಚಾಗಿ ತುತ್ತಾಗಿ ಬಲಿಯಾಗುತ್ತಿರುವುದು ಕಂಡುಬಂದಿದೆ. ಆದರೆ ಇದು ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ.

ಮೆದುಳು ತಿನ್ನುವ ಅಮೀಬಾ ಕಾಯಿಲೆ ಲಕ್ಷಣಗಳು

ಅಮೆರಿಕದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ ತಲೆನೋವು, ಜ್ವರ, ವಾಕರಿಕೆ ಮತ್ತು ವಾಂತಿ ಈ ಸೋಂಕಿನ ಆರಂಭಿಕ ಲಕ್ಷಣಗಳಾಗಿವೆ. ಈ ರೋಗಾಣುಗಳು ಮೆದುಳಿಗೆ ಪ್ರವೇಶಿಸಿದ 5-7 ದಿನಗಳಲ್ಲಿ ರೋಗಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಒಮ್ಮೆ ಸೋಂಕು ತಗುಲಿದರೆ ಅದು ವೇಗವಾಗಿ ಬೆಳೆಯಬಹುದು. ಕುತ್ತಿಗೆ ಬಿಗಿತ, ಗೊಂದಲ, ಜನರ ಮೇಲೆ ಮತ್ತು ಸುತ್ತಮುತ್ತಲಿನ ಗಮನ ಕೊರತೆ, ಅರೆ ನಿದ್ರಾವಸ್ಥೆ, ನಿತ್ರಾಣ, ಸಮತೋಲನ ನಷ್ಟ ಮತ್ತು ಭ್ರಮೆಗಳು ನಂತರ ಕಾಣಿಸಿಕೊಳ್ಳುವ ಲಕ್ಷಣಗಳಾಗಿವೆ. ಇದು ಸಾಮಾನ್ಯವಾಗಿ ಐದು ದಿನಗಳ ನಂತರ ಕೋಮಾ ಮತ್ತು ಸಾವಿಗೆ ಕಾರಣವಾಗುತ್ತದೆ ಎಂದು ಸಿಡಿಸಿ ಹೇಳುತ್ತದೆ.

ಹೆಚ್ಚಿನ ಜನರು ಈ ಸೋಂಕು ಬಂದ ಒಂದರಿಂದ 18 ದಿನಗಳಲ್ಲಿ ಸಾಯುತ್ತಾರೆ. ಮೆದುಳನ್ನು ಅಮೀಬಾ ತಿನ್ನುವುದರಿಂದ ಮೆದುಳಿನ ಕೋಶಗಳು ನಾಶವಾಗಿ ಜೀವಹಾನಿ ಸಂಭವಿಸುತ್ತಿದೆ. 10,000 ಜನರಲ್ಲಿ ಒಬ್ಬರಿಗೆ ಬರುವ ಈ ಅಪರೂಪದ ಕಾಯಿಲೆಯಲ್ಲಿ ಬದುಕುಳಿಯುವ ಸಾಧ್ಯತೆ ಕೇವಲ 3% ಮಾತ್ರ.

ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗುವುದು, ನಿಂತಿರುವ ಮತ್ತು ಅನೈರ್ಮಲ್ಯದ ನೀರಿನ ಸಂಪನ್ಮೂಲಗಳು ಮತ್ತು ಅಮೀಬಾ ಬೆಚ್ಚಗಿನ ನೀರಿನಲ್ಲಿ ಹೆಚ್ಚು ಸಕ್ರಿಯವಾಗಿರುತ್ತದೆ.

ಮೆದುಳು ತಿನ್ನುವ ಅಮೀಬಾ ಸೋಂಕು ಪತ್ತೆ ಹೇಗೆ?

ಸೆರೆಬ್ರೊಸ್ಪೈನಲ್ ದ್ರವದ ಪಿಸಿಆರ್ ಪರೀಕ್ಷೆಗಳ ಮೂಲಕ ಈ ಸೋಂಕನ್ನು ಕಂಡುಹಿಡಿಯಬಹುದು. ಆದರೂ ಇದೊಂದು ಅಪರೂಪದ ಸ್ಥಿತಿಯಾಗಿರುವುದರಿಂದ ಪತ್ತೆಹಚ್ಚುವಿಕೆ ಕೆಲವೊಮ್ಮೆ ಕಷ್ಟಕರವಾಗಿರುತ್ತದೆ. ಕೇರಳದ ಕೋಝಿಕ್ಕೋಡ್ನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರು ಮಲಪ್ಪುರಂನ ಐದು ವರ್ಷದ ಬಾಲಕಿಯಲ್ಲಿ ಬ್ಯಾಕ್ಟೀರಿಯಾದ ಮೆನಿಂಜೈಟಿಸ್ಗೆ ಹೋಲುವ ರೋಗಲಕ್ಷಣಗಳನ್ನು ತೋರಿಸಿದ ನಂತರ ಅದರ ಸಾಧ್ಯತೆಯನ್ನು ಶಂಕಿಸಿದ್ದಾರೆ. ಆದರೆ ಇಂತಹ ನಿದರ್ಶನಗಳು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆ. ಇದಕ್ಕೆ ಮುಖ್ಯವಾಗಿ ಹೆಚ್ಚು ಜನರು ಸೂಕ್ತ ರೋಗನಿರೋಧಕ ಲಸಿಕೆಗಳನ್ನು ಹಾಕಿಸಿಕೊಂಡಿರುವುದು ಕಾರಣವಾಗಿದೆ.

ಮೆದುಳು ತಿನ್ನುವ ಅಮೀಬಾ ಕಾಯಿಲೆಗೆ ಚಿಕಿತ್ಸೆ

ಅಮೀಬಿಕ್ ಮೆನಿಂಜೋ ಎನ್ಸೆಫಲೈಟಿಸ್ ರೋಗಕ್ಕೆ ಈವರೆಗೆ ಯಾವುದೇ ಪ್ರಮಾಣಿತ ಚಿಕಿತ್ಸಾ ವಿಧಾನಗಳು ಲಭ್ಯವಿಲ್ಲ ಮತ್ತು ವೈದ್ಯರು ಇದೀಗ ಸಿಡಿಸಿ ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದಾರೆ. ಸೋಂಕು ಎಷ್ಟರ ಮಟ್ಟಿಗೆ ಹರಡಿದೆ ಎಂದು ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುತ್ತದೆ. ಈ ಸೋಂಕಿಗೆ ಆಂಟಿ ಫಂಗಲ್, ಆಂಟಿ ಟ್ರೋಫೋಸೈಟ್ ಮತ್ತು ಆಂಫೋಟೆರಿಸಿನ್ ಬಿ, ಸಿರೈಡ್ಗಳನ್ನು ಔಷಧಿಗಳು ನಮ್ಮಲ್ಲಿ ಲಭ್ಯವಿದೆ. ಒಟ್ಟು 28 ದಿನಗಳ ಕಾಲ ಚಿಕಿತ್ಸೆ ನೀಡಲಾಗುತ್ತದೆ.

ಮೂಗು ಮತ್ತು ಮೆದುಳನ್ನು ಬೇರ್ಪಡಿಸುವ ಪದರದ ರಂಧ್ರಗಳ ಮೂಲಕ ಅಥವಾ ಕಿವಿಯ ತಮಟೆಯಲ್ಲಿರುವ ರಂಧ್ರಗಳ ಮೂಲಕ ಅಮೀಬಾ ಮೆದುಳಿಗೆ ಪ್ರವೇಶಿಸುವ ಸಾಧ್ಯತೆಯಿದೆ. ಆದ್ದರಿಂದ, ಕಿವಿಯಲ್ಲಿ ಸೋಂಕು ಇರುವ ಮಕ್ಕಳು ಕೊಳಗಳಲ್ಲಿ ಅಥವಾ ನಿಂತ ನೀರಿನಲ್ಲಿ ಈಜಾಡುವುದು ಅಥವಾ ಸ್ನಾನ ಮಾಡುವುದು ಬೇಡ. ವಾಟರ್ ಥೀಮ್ ಪಾರ್ಕ್ಗಳು ಮತ್ತು ಈಜುಕೊಳಗಳಲ್ಲಿ ಆಗಾಗ್ಗೆ ನೀರನ್ನು ಕ್ಲೋರಿನೇಟ್ ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲಾ ಜಲಮೂಲಗಳನ್ನು ಸ್ವಚ್ಛವಾಗಿಡುವುದು ಬಹಳ ಮುಖ್ಯ. ಮಕ್ಕಳು ಮತ್ತು ದೊಡ್ಡವರೂ ಸಹ ಎಲ್ಲೇ ಈಜುವುದಾದರೂ ಮುಂಜಾಗ್ರತಾ ಕ್ರಮವಾಗಿ ಕಣ್ಣು, ಮೂಗು, ಕಿವಿ ಮತ್ತು ಬಾಯಿಯನ್ನು ಮುಚ್ಚುವಂತಹ ಸೂಕ್ತ ಸುರಕ್ಷತಾ ಸಾಧನಗಳನ್ನು ಬಳಸಬೇಕು.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT