ಸಂಗ್ರಹ ಚಿತ್ರ 
ಅಂಕಣಗಳು

ಕೆಲಸವಿಲ್ಲ ಎಂದು ಗೊಣಗುವುದಕ್ಕಿಂತ ಕೆಲಸ ಸೃಷ್ಟಿಸಿಕೊಳ್ಳುವುದು ಮೇಲು! (ಹಣಕ್ಲಾಸು)

ಜಗತ್ತಿನಲ್ಲಿ ಕೆಲಸ ಮಾಡಲು ಯೋಗ್ಯವಾಗಿರುವ ನೂರು ಜನರಿದ್ದರೆ ಅವರಲ್ಲಿ ಕೇವಲ ನಲವತ್ತು ಜನರಿಗೆ ಮಾತ್ರ ಕೆಲಸ ಇರುತ್ತದೆ. ಉಳಿದ ಅರವತ್ತು ಜನರಿಗೆ ಕೆಲಸವಿರುವುದಿಲ್ಲ.

ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಎನ್ನುವುದು ಇವತ್ತಿನ ದಿನದ ಹೊಸ ಅವಿಷ್ಕಾರವೇನಲ್ಲ. ಅದು ಕಳೆದ ಎರಡು ದಶಕದಿಂದ ತಯಾರಾಗುತ್ತಿರುವ ಖಾದ್ಯ. ಇಂದಿಗೆ ಅದನ್ನು ಎಲ್ಲರಿಗೂ ಬಡಿಸಲು ತಯಾರಾಗಿದೆ. ಹೀಗಾಗಿ ಅದರ ಅಬ್ಬರ ಸಾಕಷ್ಟಿದೆ. ಇದರ ಬಳಕೆ ಕೂಡ ಸಣ್ಣ ಮಟ್ಟದಲ್ಲಿ ಕಳೆದ ಒಂದು ದಶಕದಿಂದ ಆಗುತ್ತಿದೆ. ಇಂದಿಗೆ ಇದನ್ನು ದೊಡ್ಡ ಮಟ್ಟದಲ್ಲಿ, ಬದಲಾವಣೆ ತರುವ ಮಟ್ಟದಲ್ಲಿ ಬಳಸಲು ಯೋಗ್ಯವಾಗಿದೆ.

ಹೀಗಾಗಿ ಇದರ ಸದ್ದು ಬಹಳವಿದೆ. ಇದು ಬಹು ಜನರ ಕೆಲಸವನ್ನು ಕದಿಯುತ್ತದೆ. ಜಗತ್ತಿನಲ್ಲಿ ಕೆಲಸ ಮಾಡಲು ಯೋಗ್ಯವಾಗಿರುವ ನೂರು ಜನರಿದ್ದರೆ ಅವರಲ್ಲಿ ಕೇವಲ ನಲವತ್ತು ಜನರಿಗೆ ಮಾತ್ರ ಕೆಲಸ ಇರುತ್ತದೆ. ಉಳಿದ ಅರವತ್ತು ಜನರಿಗೆ ಕೆಲಸವಿರುವುದಿಲ್ಲ.

ಕೆಲಸವಿಲ್ಲ ಎಂದ ತಕ್ಷಣ ಆ ಸಮಯವನ್ನು ಹೇಗೆ ವ್ಯಯಿಸಬೇಕು ಎನ್ನುವ ಪರಿಜ್ಞಾನ ಕೂಡ ನಮ್ಮಲ್ಲಿ ಬಹು ಜನರಿಗೆ ಇಲ್ಲ ಎನ್ನುವುದು ಖೇದಕರ ಸಂಗತಿ. ಬದುಕಿಗೊಂದು ಉದ್ದೇಶವನ್ನು ಇಟ್ಟು ಕೊಳ್ಳದೆ ಹೋದರೆ ಸಮಯ ಕಳೆಯುವುದು ಬಹಳ ಕಷ್ಟವಾಗುತ್ತದೆ. ಕೆಲಸ ಮಾಡದೆ ಬದುಕಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ನಮಗೆ ಸರಕಾರ ಒದಗಿಸಬಹುದು.

ತಂತ್ರಜ್ಞಾನದ ಸಹಾಯದಿಂದ ಅದಕ್ಕೆ ಬೇಕಾದ ಎಲ್ಲವನ್ನೂ ಮನುಷ್ಯನ ಸಹಾಯವಿಲ್ಲದೆ ಗಳಿಸಿಕೊಳ್ಳುವ ನೂರು ದಾರಿಗಳೂ ಸೃಷ್ಟಿಯಾಗಬಹುದು. ಇಂದಿನ ಜಗತ್ತಿನಲ್ಲಿ ಬೇರೆ ರೂಪದಲ್ಲಿ ವಾಸ ಮಾಡುತ್ತಿರುವ ಯೂನಿವರ್ಸಲ್ ಬೇಸಿಕ್ ಇನ್ಕಮ್ ಎನ್ನುವ ಯೋಜನೆ ಜಾರಿಗೆ ಬರಬಹುದು. ಆದರೆ ಬದುಕಿಗೊಂದು ಉದ್ದೇಶ ಬೇಕು. ಮನುಷ್ಯ ಸಮಾಜಕ್ಕೆ ಏನಾದರೂ ದೇಣಿಗೆ ನೀಡುತ್ತಿರಬೇಕು. ಬದುಕು ಪ್ರೊಡಕ್ಟಿವ್ ಆಗಿರಬೇಕು. ಇಂತಹ ಬೇಕುಗಳು ಬದುಕಿಗೊಂದು ಅರ್ಥವನ್ನು ಕಲ್ಪಿಸಿಕೊಡುತ್ತವೆ. ಸಾರ್ಥಕತೆ, ತೃಪ್ತಿ ನೀಡುತ್ತವೆ.

ಇವತ್ತಿನ ಜಗತ್ತು ನಿಂತಿರುವುದು ಹಣದ ಮೇಲೆ. ನೀವು ಹಣವನ್ನು ಒಪ್ಪುವುದು ಅಥವಾ ಬಿಡುವುದು ಬೇರೆ ಮಾತು. ಆದರೆ ಹಣವಿಲ್ಲದೆ ಇಲ್ಲಿ ಯಾವುದೂ ಚಲಿಸುವುದಿಲ್ಲ ಎನ್ನುವ ಪರಮಸತ್ಯವನ್ನು ಮಾತ್ರ ಒಪ್ಪದೇ ಇರಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ನೋಡಿದಾಗ ಇಂದಿನ ವಿತ್ತ ಜಗತ್ತಿನಲ್ಲಿ ಇರುವ ಸಿರಿವಂತರಲ್ಲಿ ೭೦ ಪ್ರತಿಶತ ಜನ ವ್ಯಾಪಾರಸ್ಥರು ಎನ್ನುವ ಅಂಶ , ಉದ್ದಿಮೆ ಏಕೆ ಕಟ್ಟಬೇಕು ಎನ್ನುವುದನ್ನು ಉದ್ಯಮಶೀಲತೆಗೆ ಇರುವ ತಾಕತ್ತನ್ನು ನಮಗೆ ತಿಳಿಸುತ್ತದೆ.

ಇದೇ ಸಮಯದಲ್ಲಿ 27 ಪ್ರತಿಶತ ಸಿರಿವಂತರು ಹೂಡಿಕೆದಾರರು ಎನ್ನುವ ಅಂಶವೂ, ಇನ್ನುಳಿದ 3 ಪ್ರತಿಶತ ಸಿರಿವಂತರಲ್ಲಿ ಆಟಗಾರರು, ಸಿನಿ ತಾರೆಗಳು, ಬೇರೆಲ್ಲಾ ಎಂಟರ್ಟೈನ್ ಇಂಡಸ್ಟ್ರಿ ಜನರು ಇದ್ದಾರೆ. ಇದರಿಂದ ಒಂದು ವಿಷಯ ನಮಗೆಲ್ಲಾ ತಿಳಿಯಿತು. ವೇತನಕ್ಕೆ ದುಡಿದು ಯಾರೊಬ್ಬರೂ ಸಿರಿವಂತರಾದ ನಿದರ್ಶನಗಳಿಲ್ಲ. ಅತ್ಯುತ್ತಮ ಬದುಕನ್ನು ವೇತನದ ಮೂಲಕ ಬದುಕಬಹುದು. ಆದರೆ ಜಾಗತಿಕ ಮಟ್ಟದ ಸಿರಿವಂತರ ಸಾಲಿನಲ್ಲಿ ನಮ್ಮ ಹೆಸರು ಬರೆದು ಕೊಳ್ಳಲು ಮಾತ್ರ ಸಾಧ್ಯವಿಲ್ಲ. ಇದನ್ನು ಸಾಧಿಸಬೇಕಾದರೆ ಉದ್ಯಮ ಕಟ್ಟದೆ ಬೇರೆ ದಾರಿಯಿಲ್ಲ.

ಕೇವಲ ಸಿರಿವಂತರಾಗಬೇಕು ಎನ್ನುವ ಕಾರಣಕ್ಕೆ ಉದ್ಯಮ ಕಟ್ಟಬೇಕಾಗಿಲ್ಲ. ಮುಂಬರುವ ದಿನಗಳಲ್ಲಿ ಉದ್ಯಮ ಕಟ್ಟದೆ ಬೇರೆ ದಾರಿಯಿಲ್ಲ ಎನ್ನುವ ಸನ್ನಿವೇಶಗಳು ಉತ್ಪತ್ತಿಯಾಗಲಿವೆ. 2025 ರ ಈ ಸಮಯದಲ್ಲೇ ಇದನ್ನು ನಾವು ನೋಡಬಹುದು. ಮುಂಬರುವ ಐದಾರು ವರ್ಷದಲ್ಲಿ ಇದರ ತೀವ್ರತೆ ಇನ್ನಷ್ಟು ಹೆಚ್ಚಾಗಲಿದೆ. ಹೀಗಾಗಿ ಉದ್ಯಮ ಎನ್ನುವುದು ಆಯ್ಕೆಯಾಗಿ ಉಳಿಯುವುದಿಲ್ಲ. ಅದು ಅನಿವಾರ್ಯವಾಗುತ್ತದೆ.

ಇವತ್ತಿನ ಕಾಲಘಟ್ಟದಲ್ಲಿ ಕೆಲಸವಿಲ್ಲ ಎನ್ನುವ ಕೂಗು ಹೆಚ್ಚಾಗುತ್ತಿದೆ. ಆದರೆ ಅದೇ ಸಮಯದಲ್ಲಿ ಕೆಲಸ ಮಾಡುವವರಿಲ್ಲ ಎನ್ನುವ ಕೂಗು ಕೂಡ ಅದಕ್ಕಿಂತ ಜೋರಾಗಿದೆ. ಸ್ವಲ್ಪ ಸಂಶೋಧನೆ ಮಾಡುವುದರಿಂದ ಬಹಳಷ್ಟು ಸಣ್ಣ ಉದ್ದಿಮೆಗಳನ್ನು ನಾವು ಮನೆಯಲ್ಲಿ ಕುಳಿತು ಆರಂಭಿಸಬಹುದು.

ಯೂರೋಪಿನಲ್ಲಿ ನನ್ನ ಜೊತೆಯಲ್ಲಿ ಹತ್ತಾರು ವರ್ಷ ಕಳೆದಿದ್ದ ಗೆಳೆಯನೊಬ್ಬ ಮರಳಿ ಭಾರತಕ್ಕೆ ಬರಬೇಕು ಎನ್ನುವ ಆಸೆಯನ್ನು ಹೊತ್ತು ಕರೆ ಮಾಡಿದ್ದ. ಭಾರತಕ್ಕೆ ಹೋಗಿ ನೀನು ಈ ರೀತಿ ನೆಲೆ ನಿಲ್ಲುತ್ತೀಯ ಎನ್ನುವ ನಂಬಿಕೆ ನನಗಿರಲಿಲ್ಲ. ಈಗ ನಿನ್ನನ್ನು ನೋಡಿ ನನಗೂ ಧೈರ್ಯ ಬಂದಿದೆ. ನಾನೂ ವಾಪಸ್ಸು ಬರಬೇಕು ಎಂದಿದ್ದೇನೆ ಎಂದನಾತ.

ಧಾರಾಳವಾಗಿ ಬಾರೋ ಈ ನೆಲದಲ್ಲಿ ಎಲ್ಲರಿಗೂ ಬದುಕಿದೆ, ಆದರೆ ಅದನ್ನು ಹುಡುಕಿಕೊಳ್ಳುವ ಕ್ಷಮತೆ ಮಾತ್ರ ನಮಗಿರಬೇಕು ಎಂದೆ, ಅದಕ್ಕವನು ಗುಡ್ ಪಾಯಿಂಟ್, ನಾನು ವಾಪಸ್ಸು ಬಂದು ಅಲ್ಲಿ ಯಾವುದಾದರೂ ಒಂದು ಉದ್ದಿಮೆ ಕಟ್ಟಬೇಕು ಎಂದುಕೊಂಡಿದ್ದೇನೆ, ನಿನ್ನ ಅಭಿಪ್ರಾಯವೇನು? ಏನಾದರೂ ಬ್ಯುಸಿನೆಸ್ ಐಡಿಯಾಗಳಿವೆಯೇ? ಎನ್ನುವ ಆತನ ಪ್ರಶ್ನೆಗೆ ಉತ್ತರವಾಗಿ ಸಿಕ್ಕ ಬ್ಯುಸಿನೆಸ್ ಐಡಿಯಾಗಳು ಹೀಗಿವೆ:

  1. ಡ್ರಾಪ್ ಶಿಪ್ಪಿಂಗ್ ಬಿಸಿನೆಸ್ ಸ್ಟೋರ್

  2. ವರ್ಚುಯಲ್ ಅಸಿಸ್ಟೆಂಟ್

  3. ಪರ್ಸನಲ್ ಟ್ರೈನರ್, ಕೋಚ್ ಯೋಗ, ಜಿಮ್, ಡಾನ್ಸ್ , ಕರಾಟೆ ಇತ್ಯಾದಿ.

  4. ಕರಕುಶಲ ವಸ್ತು ತಯಾರಿಕೆ, ಗುಡಿ ಕೈಗಾರಿಕೆ

  5. ಸಾಕು ಪ್ರಾಣಿ ಆರೈಕೆ ಮಾಡವ ಸಂಸ್ಥೆ

  6. ಅನುವಾದಕ ಕೆಲಸ, ಸಂಸ್ಥೆ

  7. ಚೈಲ್ಡ್ ಕೇರ್ ಬಿಸಿನೆಸ್ ಗಳು

  8. ಆನ್ಲೈನ್ ಮತ್ತು ಆಫ್ ಲೈನ್ ಕೋಚಿಂಗ್ ಕ್ಲಾಸೆಸ್

  9. ಮಾರ್ಕೆಟ್ ರಿಸೆರ್ಚ್ ಸಂಸ್ಥೆ

  10. ಫ್ರೀ ಲೆನ್ಸ್ ಅಕೌಂಟೆಂಟ್, ಸಲಹೆಗಾರ ಸಂಸ್ಥೆ

  11. ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಗಳು

  12. ಕಂಟೆಂಟ್ ಕ್ರಿಯೇಟರ್, ಬರಹಗಾರ, ಮಾತುಗಾರ, ಸ್ಟಾಂಡ್ ಅಪ್ ಕಾಮಿಡಿ ಇತ್ಯಾದಿ

  13. ಟ್ರಾವೆಲ್ ಪ್ಲಾನರ್

  14. ಸೋಶಿಯಲ್ ಎಂಟರ್ಪ್ರೈಸೆಸ್

  15. ಸೋಶಿಯಲ್ ಮೀಡಿಯಾ ಮ್ಯಾನೇಜ್ಮೆಂಟ್ ಸಂಸ್ಥೆ

  16. ಪ್ಯಾಕರ್ಸ್ ಅಂಡ್ ಮೋವರ್ಸ್ ಬಿಸಿನೆಸ್

  17. ಕ್ಲೀನಿಂಗ್ ಸೆರ್ವಿಸೆಸ್ಸ್

  18. ಪೇಸ್ಟ್ ಕಂಟ್ರೋಲ್ ಬಿಸಿನೆಸ್

  19. ಕೇಟರಿಂಗ್ / ಫುಡ್ ಟ್ರಕ್

  20. ಕಾರ್ ವಾಶ್ ಸರ್ವಿಸಸ್

  21. ಬೀಗ ತಯಾರಿಸುವುದು, ಪ್ಲಮ್ಬಿಂಗ್, ಎಲೆಕ್ಕ್ಟ್ರೀಷಿಯನ್, ಪೇಂಟಿಂಗ್ ಸಂಸ್ಥೆ

  22. ರಿಯಲ್ ಎಸ್ಟೇಟ್ ಬ್ರೋಕರ್

  23. ಸ್ಟಾಕ್ ಮಾರ್ಕೆಟ್ ಆಡ್ವೈಸರಿ

  24. ಹಿರಿಯ ನಾಗರಿಕರ ಪಾಲನೆ ಸಂಸ್ಥೆ

  25. ನೋಟರಿ ಪಬ್ಲಿಕ್

  26. ಇ -ಕಾಮರ್ಸ್ ಬಿಸಿನೆಸ್

  27. ಬೇಕಿಂಗ್ ಬಿಸಿನೆಸ್

  28. ಜ್ಯುವೆಲರಿ ಡಿಸೈನಿಂಗ್, ಲ್ಯಾಂಡ್ ಸ್ಕೇಪ್ ಡಿಸೈನಿಂಗ್, ಇಂಟೀರಿಯರ್ ಡಿಸೈನಿಂಗ್

  29. ಟಿವಿ, ಮೊಬೈಲ್, ಕಂಪ್ಯೂಟರ್, ಲ್ಯಾಪ್ಟಾಪ್ ರಿಪೇರಿ ಅಂಗಡಿಗಳು

  30. ಭಾಷೆ ಕಲಿಸುವ ಉದ್ಯೋಗ, ಉದ್ಯಮ

  31. ಕೆರಿಯರ್ ಕೌನ್ಸಿಲಿಂಗ್, ಎಜುಕೇಶನ್ ಕೌನ್ಸೆಲ್ಲಿಂಗ್

ಹೋಗುವ ಮುನ್ನ:

ಹಣವಿಲ್ಲದೆ ಅಥವಾ ಅತ್ಯಂತ ಕಡಿಮೆ ಬಂಡವಾಳದಲ್ಲಿ ಶುರು ಮಾಡಬಹುದಾದ ಮೂವತ್ತು ಬಿಸಿನೆಸ್ ಐಡಿಯಾಗಳನ್ನು ಮೇಲೆ ನಮೂದಿಸಿದ್ದೇನೆ. ಇದೆ ರೀತಿ ಇನ್ನೂ ನೂರು ಬಿಸಿನೆಸ್ ಐಡಿಯಾಗಳು ಹುಡುಕಿದರೆ ಸಿಗುತ್ತವೆ. ಇವುಗಳನ್ನು ಶುರು ಮಾಡಿದ ತಕ್ಷಣ ಶ್ರೀಮಂತರಾಗುತ್ತೇವೆ ಎಂದಲ್ಲ. ವ್ಯಾಪಾರ ಜಗತ್ತಿಗೆ ಕಡಿಮೆ ಹಣದಲ್ಲಿ ಕಾಲಿಡಬಹುದು. ಶ್ರದ್ದೆ ಮತ್ತು ನಿರಂತರತೆ ಕಾಯ್ದು ಕೊಂಡಲ್ಲಿ ಮೇಲಿನ ಯಾವುದೇ ಉದ್ದಿಮೆಯನ್ನು ಕೂಡ ದೊಡ್ಡ ಮಟ್ಟಕ್ಕೆ ಕಟ್ಟುವುದು ಕಷ್ಟವಲ್ಲ.

ಮಹಾನಗರಗಳಲ್ಲಿ ಕ್ಲೀನಿಂಗ್ ಸರ್ವಿಸ್ ಅಥವಾ ಗಂಟೆಯ ಲೆಕ್ಕಾಚಾರದಲ್ಲಿ ಕಸ ಮುಸುರೆ ಮಾಡಿಕೊಡುವ ಅಂದರೆ ಮೆಯ್ಡ್ ಸರ್ವಿಸ್ ವ್ಯಾಪಾರ ಶುರು ಮಾಡಿದರೆ ಅದು ಸ್ವೀಗ್ಗಿ, ಝಮೊಟೊ ಗಿಂತ ದೊಡ್ಡ ಉದ್ದಿಮೆಯಾಗಿ ಬೆಳೆಯುತ್ತದೆ. ತಡವನಿನ್ನೇಕೆ ನಿಮ್ಮ ವ್ಯಕ್ತಿತ್ವಕ್ಕೆ ಒಗ್ಗುವ ವ್ಯಾಪಾರ, ಉದ್ದಿಮೆ ಯಾವುದು ಎನ್ನುವುದನ್ನು ಬರೆದಿಟ್ಟುಕೊಳ್ಳಿ .

ಅದರ ಸಾಧಕ ಬಾಧಕಗಳನ್ನು ಮೇಲೆ ಹೇಳಿದಂತೆ ಸ್ಟೆಪ್ ಬೈ ಸ್ಟೆಪ್ ಟಿಕ್ ಮಾಡಿಕೊಂಡು ಬನ್ನಿ. ಎಲ್ಲವೂ ಸರಿಯಾಗಿದೆ ಎಂದರೆ ಮುನ್ನುಗ್ಗಿ. ನಿಮಗೆಲ್ಲಾ ಗೊತ್ತಿರಲಿ, ನಾವು ಸಂಪೂರ್ಣ ಸಿದ್ದರಾಗಿ, ಪರ್ಫೆಕ್ಟ್ ಆದ ಮೇಲೆ ಶುರು ಮಾಡುತ್ತೇವೆ ಎಂದರೆ ಆ ದಿನ ಬರುವುದೇ ಇಲ್ಲ. ಹತ್ತಿಪತ್ತು ಪ್ರತಿಶತ ಹಾದಿ ಕಾಣದಿದ್ದರೂ ಹೆಜ್ಜೆ ಹಾಕಲು ಶುರು ಮಾಡಬೇಕು. ಬದುಕಿನ ಮಜಾ ಏನು ಗೊತ್ತಾ? ನಡೆಯುತ್ತಾ ಹೋದಂತೆ ದಾರಿ ತೆರೆದುಕೊಳ್ಳುತ್ತಾ ಹೋಗುತ್ತದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅನ್ನಭಾಗ್ಯ: 5 ಕೆಜಿ ಅಕ್ಕಿ ಬದಲು ಇಂದಿರಾ ಕಿಟ್ ವಿತರಣೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ದೇಶದಲ್ಲೇ ಮೊದಲು: ಉದ್ಯೋಗಸ್ಥ ಮಹಿಳೆಯರಿಗೆ ಗುಡ್ ನ್ಯೂಸ್; ವೇತನ ಸಹಿತ 'ಋತುಚಕ್ರ ರಜೆ'ಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ!

Exclusive: ಬಿಹಾರದಲ್ಲಿ ಕಾಂಗ್ರೆಸ್​ಗೆ 57 ಸ್ಥಾನ ಸಾಧ್ಯತೆ, ಹೊಸ ಮಿತ್ರಪಕ್ಷಕ್ಕೆ ಎರಡು ಸ್ಥಾನ

ನ. 25 ರಂದು ಪ್ರಧಾನಿ ಮೋದಿಯಿಂದ ರಾಮ ಮಂದಿರದ ಮೇಲೆ 21 ಅಡಿ ಎತ್ತರದ ಧರ್ಮ ಧ್ವಜಾರೋಹಣ

'ಮೂರ್ನಾಲ್ಕು ದಿನದಲ್ಲಿ ಡಿಸ್ಚಾರ್ಜ್ ಆಗ್ತಾರೆ': ದೇವೇಗೌಡರ ಆರೋಗ್ಯದ ಕುರಿತು ಎಚ್.ಡಿ ಕುಮಾರಸ್ವಾಮಿ ಹೇಳಿಕೆ

SCROLL FOR NEXT