ಢಾಕಾ ದಾಳಿ ಮತ್ತು ಇಂಗ್ಲೆಂಡ್ ತಂಡ (ಸಂಗ್ರಹ ಚಿತ್ರ) 
ಕ್ರಿಕೆಟ್

ಢಾಕಾ ದಾಳಿ; ಇ೦ಗ್ಲೆ೦ಡ್ ತ೦ಡದ ಬಾ೦ಗ್ಲಾ ಪ್ರವಾಸ ರದ್ದು!

ಢಾಕಾದ ರೆಸ್ಟೋರೆಂಟ್ ಮೇಲೆ ಉಗ್ರರು ನಡೆಸಿದ ದಾಳಿ ವೇಳೆ 20 ವಿದೇಶಿಯರು ಸಾವನ್ನಪ್ಪಿದ ಹಿನ್ನಲೆಯಲ್ಲಿ ಮುಂಬರುವ ಬಾಂಗ್ಲಾದೇಶ ಪ್ರವಾಸವನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ರದ್ದು ಪಡಿಸಲಿದೆ ಎಂದು ಹೇಳಲಾಗುತ್ತಿದೆ...

ಲಂಡನ್: ಢಾಕಾದ ರೆಸ್ಟೋರೆಂಟ್ ಮೇಲೆ ಉಗ್ರರು ನಡೆಸಿದ ದಾಳಿ ವೇಳೆ 20 ವಿದೇಶಿಯರು ಸಾವನ್ನಪ್ಪಿದ ಹಿನ್ನಲೆಯಲ್ಲಿ ಮುಂಬರುವ ಬಾಂಗ್ಲಾದೇಶ ಪ್ರವಾಸವನ್ನು ಇಂಗ್ಲೆಂಡ್ ಮತ್ತು ವೇಲ್ಸ್  ಕ್ರಿಕೆಟ್ ಮಂಡಳಿ ರದ್ದು ಪಡಿಸಲಿದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರ ಬೀಳದಿದ್ದರೂ, ಢಾಕಾ ದಾಳಿ ಬೆನ್ನಲ್ಲೇ ಸಭೆ ನಡೆಸಿದ ಅವಳಿ ಕ್ರಿಕೆಟ್ ಮಂಡಳಿ ಸದಸ್ಯರು ಇಂಗ್ಲೆಂಡ್ ತಂಡದ ಬಾಂಗ್ಲಾ ಪ್ರವಾಸವನ್ನು ರದ್ದು ಮಾಡುವ ಕುರಿತು  ನಿರ್ಣಯ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದೇ ಸೆಪ್ಟೆಂಬರ್ 30ರಿ೦ದ ಬಾ೦ಗ್ಲಾದೇಶ ಪ್ರವಾಸ ಕೈಗೊಳ್ಳಬೇಕಿದ್ದ ಇ೦ಗ್ಲೆ೦ಡ್ ಕ್ರಿಕೆಟ್ ತಂಡ, 2 ಟೆಸ್ಟ್ ಹಾಗೂ 3 ಏಕದಿನ ಪ೦ದ್ಯಗಳ  ಸರಣಿ ಆಡಬೇಕಿತ್ತು.

ಆದರೆ ನಿನ್ನೆ ನಡೆದ ಉಗ್ರ ದಾಳಿಯಿಂದಾಗಿ ಇದೀಗ ಇಡೀ ಪ್ರವಾಸವೇ ರದ್ದಾಗುವ ಭೀತಿ ಎದುರಾಗಿದೆ. ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್  ಮಂಡಳಿ, "ಪ್ರಸ್ತುತ ಬಾ೦ಗ್ಲಾದೇಶದಲ್ಲಿರುವ ವಾತಾವರಣ ಆಟಗಾರರಿಗೆ ಮತ್ತು ಪ್ರೇಕ್ಷಕರಿಗೆ ಸುರಕ್ಷಿತವಾಗಿಲ್ಲ. ಇದರಿ೦ದ ಮು೦ಬರುವ ಪ್ರವಾಸವನ್ನು ರದ್ದುಗೊಳಿಸುವ ಚಿ೦ತನೆಯಲ್ಲಿದ್ದೇವೆ.  ಮು೦ದಿನ ದಿನಗಳಲ್ಲಿ ಭದ್ರತೆ ಕುರಿತು ಪರಿಶೀಲನೆ ನಡೆಸಿದ ಬಳಿಕವಷ್ಟೆ ಪ್ರವಾಸದ ಬಗ್ಗೆ ಅ೦ತಿಮ ನಿಧಾ೯ರ ಕೈಗೊಳ್ಳಲಿದ್ದೇವೆ ಎ೦ದು ಇಸಿಬಿ ವಕ್ತಾರ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಉಕ್ರೇನ್ ವಿರುದ್ಧ ರಷ್ಯಾದ ದೀರ್ಘ ಸಂಘರ್ಷಕ್ಕೆ ಭಾರತವೇ ಕಾರಣ, ಇದು 'ಮೋದಿ ಯುದ್ಧ': White House ವ್ಯಾಪಾರ ಸಲಹೆಗಾರ ಪೀಟರ್ ನವರೊ

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

ಚಾಮುಂಡೇಶ್ವರಿ ದೇವಿ ಸುತ್ತ ನಡೆಯುತ್ತಿರುವ ರಾಜಕೀಯ ತೀವ್ರ ಬೇಸರ ತರಿಸಿದೆ: ಪ್ರಮೋದಾದೇವಿ ಒಡೆಯರ್

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

Minneapolis Shooter: 'Trump ಸಾವು.. ಭಾರತ ಸರ್ವನಾಶ': ಅಮೆರಿಕ ದಾಳಿಕೋರನ ಬಂದೂಕಿನ ಮೇಲೆ ಶಾಕಿಂಗ್ ಬರಹ!

SCROLL FOR NEXT