ಮೊಹಾಲಿ: ಟಿ20 ಪಂದ್ಯಾವಳಿಯಲ್ಲಿ ಸೋಲಿನಿಂದ ಕಂಗೆಟ್ಟಿರುವ ಭಾರತ ಮಹಿಳಾ ತಂಡಕ್ಕೆ ಇಂದಿನ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯ ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ.
ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳಿಗೆ ಬಿ ಗುಂಪಿನಲ್ಲಿ ಉಪಾಂತ್ಯ ಹಾದಿ ಖಚಿತಪಡಿಸಿಕೊಳ್ಳಲು ಗೆಲುವು ಅನಿವಾರ್ಯವಾಗಿದ್ದು, ಮಿಥಾಲಿ ಪಡೆಗೆ ಇದು ಕೊನೇ ಅವಕಾಶವಾಗಿದೆ. +1.130 ರನ್ರೇಟ್ ಹೊಂದಿರುವ ಭಾರತ ಗೆದ್ದರಷ್ಟೇ ಮುಂದಿನ ಹಂತಕ್ಕೇರಲು ಅವಕಾಶವಿದ್ದು, ಆಗ ವಿಂಡೀಸ್ ಟೂರ್ನಿಯಿಂದ ಹೊರಬೀಳಲಿದೆ.
ವೆಸ್ಟ್ ಇಂಡೀಸ್ ವಿರುದ್ಧ ಗೆದ್ದರೂ ಭಾರತಕ್ಕೆ ಮತ್ತೊಂದು ತೊಡಗಿದ್ದು, ಹ್ಯಾಟ್ರಿಕ್ ಜಯ ಸಾಧಿಸಿರುವ ಇಂಗ್ಲೆಂಡ್ ತಂಡ 2 ಗೆಲುವುಗಳನ್ನು ಕಂಡಿರುವ ಪಾಕಿಸ್ತಾನ ತಂಡವನ್ನು ಸೋಲಿಸಿದರಷ್ಟೇ ಭಾರತಕ್ಕೆ ಅವಕಾಶ. ಒಂದು ವೇಳೆ, ಪಾಕ್ ಗೆದ್ದರೆ ಸೆಮೀಸ್ಗೇರಲಿದ್ದು, ಭಾರತಕ್ಕೆ ಗೆದ್ದರೂ ಲಾಭವಿರುವುದಿಲ್ಲ.