ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಿನಿ ಐಪಿಎಲ್ ನಡೆಸಲು ಗಂಭೀರ ಚಿಂತನೆ ನಡೆಸಿದ್ದು, ಬಿಸಿಸಿಐ ಪ್ರಸ್ತಾವನೆಗೆ ಐಸಿಸಿ ಅನುಮೋದನೆ ನೀಡಿದರೆ ಇದೇ ಸೆಪ್ಟೆಂಬರ್ ತಿಂಗಳಲ್ಲಿ ವಿದೇಶದಲ್ಲಿ ಚುಟುಕು ಕ್ರಿಕೆಟ್ ನಡೆಯುವ ಸಾಧ್ಯತೆ ಇದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಯಾವುದೇ ಪ್ರಮುಖ ತಂಡಗಳು ಟೆಸ್ಟ್ ಪಂದ್ಯಗಳನ್ನು ಆಡುವುದಿಲ್ಲ ಹೀಗಾಗಿ ಆ ಸಮಯವನ್ನು ಮಿನಿ ಐಪಿಎಲ್ ಆಡಿಸಬಹುದು ಎಂಬುದು ಬಿಸಿಸಿಐ ಚಿಂತನೆಯಾಗಿದೆ. ಇನ್ನು ಮಿನಿ ಐಪಿಎಲ್ ಭಾರತದಲ್ಲಿ ನಡೆಯುವುದಿಲ್ಲ. ಬದಲಾಗಿ ಅಮೆರಿಕ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿರುವ ವಿದೇಶದಲ್ಲಿ ಆಡಿಸಲಿದೆ.
ವಾಸ್ತವವಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಯುತ್ತಿದ್ದ ಟಿ20 ಚಾಂಪಿಯನ್ಸ್ ಲೀಗ್ ನಷ್ಟಕ್ಕೆ ಸಿಲುಕಿದ್ದರಿಂದ ಅದನ್ನು ರದ್ದುಗೊಳಿಸಲಾಗಿತ್ತು. ಕಳೆದ ವರ್ಷವೇ ಮಿನಿ ಐಪಿಎಲ್ ಆಡಿಸಲು ಯೋಚಿಸಿದ್ದ ಬಿಸಿಸಿಐ ಕಾನೂನಿನ ಸಮಸ್ಯೆ ಜತೆಗೆ ಹಲವು ತೊಡಕಿನಿಂದಾಗಿ ಟೂರ್ನಿ ಯೋಜನೆಯನ್ನು ಕೈಬಿಟ್ಟಿತ್ತು.