ಬಳ್ಳಾರಿ ಟಸ್ಕರ್ಸ್ ಚಾಂಪಿಯನ್ (ಕ್ರಿಕ್ ಇನ್ಫೋ ಚಿತ್ರ) 
ಕ್ರಿಕೆಟ್

ಬಳ್ಳಾರಿ ಟಸ್ಕರ್ಸ್ ಗೆ ಕೆಪಿಎಲ್-2016ರ ಕಿರೀಟ

2016ನೇ ಸಾಲಿನ ಕೆಪಿಎಲ್ ಕಿರೀಟ ಬಳ್ಳಾರಿ ಟಸ್ಕರ್ಸ್ ಪಾಲಾಗಿದ್ದು, ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವನ್ನು 35 ರನ್ ಗಳ ಅಂತರದಲ್ಲಿ ಮಣಿಸಿದ ಬಳ್ಳಾರಿ ತಂಡ ಪ್ರಶಸ್ತಿಗೆ ಮುತ್ತಿಟ್ಟಿತು.

ಹುಬ್ಬಳ್ಳಿ: 2016ನೇ ಸಾಲಿನ ಕೆಪಿಎಲ್ ಕಿರೀಟ ಬಳ್ಳಾರಿ ಟಸ್ಕರ್ಸ್ ಪಾಲಾಗಿದ್ದು, ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವನ್ನು 35 ರನ್ ಗಳ ಅಂತರದಲ್ಲಿ ಮಣಿಸಿದ  ಬಳ್ಳಾರಿ ತಂಡ ಪ್ರಶಸ್ತಿಗೆ ಮುತ್ತಿಟ್ಟಿತು.

ಹುಬ್ಬಳ್ಳಿಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಳ್ಳಾರಿ ಟಸ್ಕರ್ಸ್ ತಂಡ ರೋಹನ್‌ ಕದಮ್‌ (61 ರನ್),  ಬಿ.ಅಖಿಲ್‌ (50 ರನ್) ಹಾಗೂ ಸುನೀಲ್ ರಾಜು (36 ರನ್)  ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು. ಆ ಮೂಲಕ ಹುಬ್ಳಳ್ಳಿ ತಂಡಕ್ಕೆ ಗೆಲ್ಲಲು 190 ರನ್ ಗಳ ಕಠಿಣ ಗುರಿ  ನೀಡಿತು.

ಈ ಮೊತ್ತವನ್ನು ಬೆನ್ನುಹತ್ತಿದ ಹುಬ್ಳಳ್ಳಿ ನೀರಸ ಬ್ಯಾಟಿಂಗ್ ಪ್ರದರ್ಶನ ನೀಡಿತು. ಹುಬ್ಳಳ್ಳಿ ಪರ ನೇಗಿ (36 ರನ್), ತಾಹಾ (36 ರನ್) ಕೊಂಚ ಪ್ರತಿರೋಧ ಒಡ್ಡಿದರಾದರೂ, ಬಳ್ಳಾರಿ ತಂಡ ಸ್ಟ್ವೀವ್  ಅವರ (21ಕ್ಕೆ 3 ವಿಕೆಟ್) ಅವರ ಮಾರಕ ಬೌಲಿಂಗ್ ದಾಳಿಗೆ ತುತ್ತಾಗಿ ಸೋಲು ಒಪ್ಪಿಕೊಂಡಿತು. ಅಂತಿಮವಾಗಿ ಹುಬಳ್ಳಿ ತಂಡ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್  ಕಳೆದುಕೊಂಡು 154 ರನ್  ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ಬಳ್ಳಾರಿ ವಿರುದ್ಧ 35 ರನ್ ಗಳ ಅಂತರದ ಸೋಲು ಕಂಡಿತು.

ಬಳ್ಳಾರಿ ಪರ ಉತ್ತಮ ಆಲ್ ರೌಂಡ್ ಪ್ರದರ್ಶನ ನೀಡಿದ ಅಖಿಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT