ಕೀರನ್ ಪೊಲ್ಲಾರ್ಡ್, ಹಾರ್ದಿಕ್ ಪಾಂಡ್ಯ
ಏಕದಿನ ಸರಣಿಗಾಗಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದಾಗ ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯರನ್ನು ಬಂಧಿಸುವಂತೆ ಪೊಲೀಸರಿಗೆ ವೆಸ್ಟ್ ಇಂಡೀಸ್ ಆಲ್ ರೌಂಡರ್ ಕೀರನ್ ಪೊಲ್ಲಾರ್ಡ್ ಪೊಲೀಸರಿಗೆ ಕರೆ ಮಾಡಿ ಪಾಂಡ್ಯರನ್ನು ಬಂಧಿಸುವಂತೆ ಹೇಳಿದ್ದರು ಎಂದು ಪಾಂಡ್ಯ ತಮ್ಮ ಹಿಂದಿನ ನೆನಪೊಂದನ್ನು ಕೆದಕಿದ್ದಾರೆ.
ಗೌರವ್ ಕಪೂರ್ ಜತೆಗಿನ ಬ್ರೇಕ್ ಫಾಸ್ಟ್ ವಿತ್ ಚಾಂಪಿಯನ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಹಾರ್ದಿಕ್ ಪಾಂಡ್ಯ ಅವರು ಪೊಲ್ಲಾರ್ಡ್ ನನ್ನ ಸಹೋದರರಂತೆ ಎಂದು ಹೇಳಿಕೊಂಡಿದ್ದಾರೆ. ನಾನು ವೆಸ್ಟ್ ಇಂಡೀಸ್ ಗೆ ಹೋದಾಗಲೆಲ್ಲಾ ಪೊಲ್ಲಾರ್ಡ್ ಅವರ ಜತೆ ಹೆಚ್ಚಾಗಿ ತಿರುಗುತ್ತಿನಿ. ಭಾರತದಲ್ಲಿ ನಾನು ಸ್ವಚ್ಛಂದವಾಗಿ ತಿರುಗುವಂತೆ ವೆಸ್ಟ್ ಇಂಡೀಸ್ ನಲ್ಲಿ ತಿರುಗುತ್ತೇನೆ. ಏಕೆಂದರೆ ಪೊಲ್ಲಾರ್ಡ್ ಇರುವಾಗ ನನಗೇನು ಆಗುವುದಿಲ್ಲ ಅಂತ.
ಒಂದು ದಿನ ಪೊಲ್ಲಾರ್ಡ್ ನನ್ನನ್ನು ಶಾಂತವಾಗಿರುವಂತೆ ಹೇಳಿದ್ದರು. ಅದಕ್ಕೆ ನಾನು ನೀವು ನನ್ನ ಜತೆಗಿರುವಾಗ ನನಗೇನು ಆಗುವುದಿಲ್ಲ ಎಂದು ಹೇಳಿದ್ದೆ ನಾನು ನಿಮ್ಮ ಊರಿನಲ್ಲಿದ್ದಿನಿ ಅಂದೆ. ನಾನು ಹೊರಗೆ ಹೋಗಬೇಕು ಎಂದು ಕಾಲು ಹೊರಗಿಟ್ಟೆ. ಆಗ ಪೊಲ್ಲಾರ್ಡ್ ತನ್ನ ಆಪ್ತ ಸ್ನೇಹಿತ ಪೊಲೀಸರೊಬ್ಬರಿಗೆ ಕರೆ ಮಾಡಿ ನನ್ನನ್ನು ಬಂಧಿಸುವಂತೆ ಹೇಳಿದ್ದರು.
ನಾನು ಹೊರಗೆ ಹೋದಾಗ ಪೊಲೀಸ್ ಒಬ್ಬರು ಬಂದರು ಮೊದಲಿಗೆ ನಾನು ಅದು ತಮಾಷೆ ಎಂದು ಭಾವಿಸಿದೆ ಆದರೆ ಒಂದು ಹಂತದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ನಾನು ಶಾಂತವಾಗಿ ಇದ್ದೇ. ನಾನು ಯಾವುದೇ ತಪ್ಪು ಮಾಡಿರಲಿಲ್ಲ ಹೀಗಾಗಿ ನಾನು ನನ್ನ ತಂಡವನ್ನು ಸಂಪರ್ಕಿಸುವುದು ಉಚಿತ ಎಂದು ಭಾವಿಸಿದೆ.
ಅಷ್ಟರಲ್ಲಿ ಇದು ತಮಾಷೆಗಾಗಿ ಎಂದು ನನಗೆ ತಿಳಿಯಿತು. ಕಾರಣ ಪೊಲೀಸ್ ತಮ್ಮ ಮೊಬೈಲ್ ನಿಂದ ಯಾರಿಗೋ ಕರೆ ಮಾಡಲು ಮುಂದಾಗಿದ್ದರು. ಆದರೆ ಅವರು ತಮ್ಮ ಮೊಬೈಲ್ ಅನ್ನು ಉಲ್ಟಾ ಹಿಡಿದುಕೊಂಡಿದ್ದನ್ನು ನೋಡಿ ನನಗೆ ಇದು ತಮಾಷೆ ಎಂದು ಗೊತ್ತಾಯಿತು. ಹೀಗೆ ಅಂದು ಪೊಲ್ಲಾರ್ಡ್ ತಮ್ಮ ವಿಷಯವಾಗಿ ತಮಾಷೆ ಮಾಡಿದ್ದನ್ನು ನೆನಪಿಸಿಕೊಂಡ ಅವರು ನಿಜಕ್ಕೂ ಪೊಲ್ಲಾರ್ಡ್ ನನ್ನ ಸಹೋದರ ಎಂದು ಹೇಳಿಕೊಂಡಿದ್ದಾರೆ.