ಕೋಲ್ಕತಾ: ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭಾರತದ ರವೀಂದ್ರ ಜಡೇಜಾ ಅವರ ಅದ್ಭುತ ಫೀಲ್ಡಿಂಗ್ ಸ್ವತಃ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ದಂಗು ಬಡಿಸಿತ್ತು.
ಹಾರ್ದಿಕ್ ಪಾಂಡ್ಯಾ ಎಸೆದ ಪಂದ್ಯದ 38ನೇ ಓವರ್ ನ ಐದನೇ ಎಸೆತವನ್ನು ಇಂಗ್ಲೆಂಡ್ ನ ಬೇರ್ ಸ್ಟೋವ್ ಬಲವಾಗಿ ಭಾರಿಸಿದರು. ಈ ಎಸೆತದಲ್ಲಿ ಇಂಗ್ಲೆಂಡ್ ಗೆ ಬೌಂಡರಿ ಖಚಿತ ಎಂದೇ ಭಾವಿಸಲಾಗಿತ್ತು. ಆದರೆ ಪಾಯಿಂಟ್ ನಲ್ಲಿ ನಿಂತಿದ್ದ ಜಡೇಜಾ ಎಡಕ್ಕೆ ಜಿಗಿದು ಆ ಎಸೆತವನ್ನು ಅದ್ಬುತವಾಗಿ ಹಿಡಿತಕ್ಕೆ ಪಡೆದಿದ್ದರು. ಈ ದೃಶ್ಯವನ್ನು ಕಂಡ ಧೋನಿ ಮತ್ತು ಕೊಹ್ಲಿ ಕ್ಷಣಕಾಲ ದಂಗಾಗಿ ಬಳಿಕ ಜಡೇಜಾ ಅದ್ಭುತ ಫೀಲ್ಡಿಂಗ್ ಗೆ ಚಪ್ಪಾಳೆ ಮೂಲಕ ಅಭಿನಂದನೆ ಸಲ್ಲಿಸಿದರು. ಪ್ರೇಕ್ಷಕರ ಗ್ಯಾಲರಿಯಿಂದಲೂ ಜಡ್ಡು ಫೀಲ್ಡಿಂಗ್ ಗೆ ಚಪ್ಪಾಳೆಯ ಸುರಿಮಳೆ ಬಿದ್ದಿತು.
ಕೇದಾರ್ ಜಾಧವ್ ಅದ್ಬುತ ಹೋರಾಟದ ಹೊರತಾಗಿಯೂ ಈ ಪಂದ್ಯದಲ್ಲಿ ಭಾರತ 5 ರನ್ ಗಳ ಅಂತರದಿಂದ ರೋಚಕ ಸೋಲು ಕಂಡಿತು.
ಈ ಅದ್ಬುತ ವಿಡಿಯೋವನ್ನು ಬಿಸಿಸಿಐ ಶೇರ್ ಮಾಡಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ.