ಕ್ರಿಕ್ ಇನ್ಫೋ ಚಿತ್ರ 
ಕ್ರಿಕೆಟ್

ಇತ್ತ ಕಿವೀಸ್ ಗೆ ಬಾಂಗ್ಲಾ ಸೋಲಿನ ರುಚಿ, ಅತ್ತ ವೆಸ್ಟ್ ಇಂಡೀಸ್ ಗೆ ಶಾಕ್ ನೀಡಿದ ಆಫ್ಘಾನಿಸ್ತಾನ

ಚಾಂಪಿಯನ್ಸ್ ಟ್ರೋಫಿಯಲ್ಲಿ ಕಿವೀಸ್ ಆಘಾತ ನೀಡಿದ ಬಾಂಗ್ಲಾದೇಶ ಸುದ್ದಿಯ ಬೆನ್ನಲ್ಲೇ ಅತ್ತ ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ಕೂಡ ವೆಸ್ಟ್ ಇಂಡೀಸ್ ತಂಡವನ್ನು ಹೀನಾಯವಾಗಿ ಸೋಲಿಸಿ ಅಚ್ಚರಿಗೆ ಕಾರಣವಾಗಿದೆ.

ಸೆಂಟ್ ಲೂಸಿಯಾ: ಚಾಂಪಿಯನ್ಸ್ ಟ್ರೋಫಿಯಲ್ಲಿ ಕಿವೀಸ್ ಆಘಾತ ನೀಡಿದ ಬಾಂಗ್ಲಾದೇಶ ಸುದ್ದಿಯ ಬೆನ್ನಲ್ಲೇ ಅತ್ತ ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ಕೂಡ ವೆಸ್ಟ್ ಇಂಡೀಸ್ ತಂಡವನ್ನು ಹೀನಾಯವಾಗಿ ಸೋಲಿಸಿ ಅಚ್ಚರಿಗೆ ಕಾರಣವಾಗಿದೆ.

ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಆಫ್ಘಾನಿಸ್ತಾನ ತಂಡ ಮೂರು ಪಂದ್ಯ ಏಕದಿನ ಸರಣಿಯಾಡುತ್ತಿದ್ದು, ನಿನ್ನೆ ಸೆಂಟ್ ಲೂಸಿಯಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಹೋಲ್ಡರ್ ಪಡೆಯನ್ನು 63 ರನ್ ಗಳ ಅಂತರದಿಂದ  ಸೋಲಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನ ತಂಡ ನಿಗದಿತ 50 ಓವರ್ ಗಳಲ್ಲಿ 212 ರನ್ ಗಳನ್ನು ಕಲೆಹಾಕಿತು. ವಿಂಡೀಸ್ ನ ಪ್ರಬಲ ಬೌಲಿಂಗ್ ದಾಳಿಯ ನಡುವೆಯೂ ಆಪ್ಘನ್ ಆರಂಭಿಕ ಆಟಗಾರ  ಜಾವೆದ್ ಅಹ್ಮದಿ (81 ರನ್ )ಹಾಗೂ ಕೆಳ ಕ್ರಮಾಂಕದ ಆಟಗಾರ ಗುಲ್ಬಾದಿನ್ ನಯೀಬ್ (ಅಜೇಯ 41 ರನ್) ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದಾಗಿ ಆಫ್ಘಾನಿಸ್ತಾನ ತಂಡ 212 ರನ್ ಗಳನ್ನು ಕಲೆಹಾಕಿತು.

213 ರನ್ ಗಳ ಅಲ್ಪ ಗುರಿಯನ್ನು ಬೆನ್ನ ಹತ್ತಿದ ವೆಸ್ಟ್ ಇಂಡೀಸ್ ಪಡೆಗೆ ಆಫ್ಘಾನಿಸ್ತಾನದ ಸ್ಪಿನ್ನರ್ ರಷೀದ್ ಖಾನ್ ಅಕ್ಷರಶಃ ದುಃಸ್ವಪ್ನವಾಗಿ ಕಾಡಿದರು. ರಷೀದ್ ಖಾನ್ ಸ್ಪಿನ್ ಜಾದೂಗೆ ವಿಂಡೀಸ್ ದೈತ್ಯ ಬ್ಯಾಟ್ಸಮನ್ ಗಳು  ತರಗೆಲೆಗಳಂತೆ ಉದುರಿ ಪೆವಿಲಿಯನ್ ಸೇರಿಕೊಂಡರು. ರಷೀದ್ ಖಾನ್ ತಮ್ಮ 8.4 ಓವರ್ ಗಳಲ್ಲಿ ಕೇವಲ 18 ರನ್ ನೀಡಿ ಬರೊಬ್ಬರಿ 7 ವಿಕೆಟ್ ಕಬಳಿಸಿ, ವಿಂಡೀಸ್ ಪತನದಲ್ಲಿ ಪ್ರಮುಖ ಪಾತ್ರವಹಿಸಿದರು. ಮಧ್ಯಮ ಕ್ರಮಾಂಕದ  ಆಟಗಾರ ಹೋಪ್ 35 ರನ್ ಗಳಿಸಿ ಪ್ರತಿರೋಧ ಒಡ್ಡಿದರಾದರೂ ಮತ್ತದೇ ರಷೀದ್ ಬೌಲಿಂಗ್ ನಲ್ಲಿ ಅವರು ವಿಕೆಟ್ ಕೈ ಚೆಲ್ಲಿದರು.

ಅಂತಿಮವಾಗಿ ವಿಂಡೀಸ್ ತಂಡ 44.4 ಓವರ್ ಗಳಲ್ಲಿ ಕೇವಲ 149 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 63 ರನ್ ಗಳ ಅಂತರದಲ್ಲಿ ಆಫ್ಘಾನಿಸ್ತಾನಕ್ಕೆ ಶರಣಾಯಿತು.

7 ವಿಕೆಟ್ ಪಡೆದು ಮಿಂಚಿದ ರಷೀದ್ ಖಾನ್ ಪಂದ್ಯಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಆಫ್ಘಾನಿಸ್ತಾನ 1-0 ಅಂತರದ ಮುನ್ನಡೆ ಸಾಧಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್