ಕ್ರಿಕ್ ಇನ್ಫೋ ಚಿತ್ರ 
ಕ್ರಿಕೆಟ್

ಶಕೀಬ್ ಅಲ್ ಹಸನ್-ಮಹಮದುಲ್ಲಾ ದಾಖಲೆ ಜೊತೆಯಾಟ!

ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಬಿ ಗುಂಪಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಬಾಂಗ್ಲಾದೇಶದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಶಕೀಬ್ ಅಲ್ ಹಸನ್ ಮತ್ತು ಮಹಮದುಲ್ಲಾ ಜೋಡಿಯ ಜೊತೆಯಾಟ ಹೊಸದೊಂದು ದಾಖಲೆ ಬರೆದಿದೆ.

ಕಾರ್ಡಿಫ್: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಬಿ ಗುಂಪಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಬಾಂಗ್ಲಾದೇಶದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಶಕೀಬ್ ಅಲ್ ಹಸನ್ ಮತ್ತು ಮಹಮದುಲ್ಲಾ ಜೋಡಿಯ ಜೊತೆಯಾಟ  ಹೊಸದೊಂದು ದಾಖಲೆ ಬರೆದಿದೆ.

ಬಾಂಗ್ಲಾದೇಶ ಕ್ರಿಕೆಟ್ ಇತಿಹಾಸದಲ್ಲೇ ಈ ಜೋಡಿ ಗಳಿಸಿದ 224 ರನ್ ಜೊತೆಯಾಟ ಬಾಂಗ್ಲಾದೇಶ ಕ್ರಿಕೆಟ್ ನ ಅತೀ ದೊಡ್ಡ ಏಕದಿನ ಜೊತೆಯಾಟವಾಗಿ ದಾಖಲಾಗಿದೆ. 5ನೇ ವಿಕೆಟ್ ಗೆ ಜೊತೆಯಾದ ಶಕೀಬ್ ಹಾಗೂ  ಮಹಮದುಲ್ಲಾ ಜೋಡಿ ಕೇವಲ 209 ಎಸೆತಗಳನ್ನು ಎದುರಿಸಿ ಬರೊಬ್ಬರಿ 224 ರನ್ ಸಿಡಿಸಿತ್ತು. ಈ ಪೈಕಿ ಶಕೀಬ್ 111 ರನ್ ಗಳಿಸಿದ್ದರೆ, ಮಹಮದುಲ್ಲಾ 98 ರನ್ ಗಳಿಸಿದ್ದರು.

ಇದಕ್ಕೂ ಮೊದಲು 2015ರಲ್ಲಿ ಢಾಕಾದಲ್ಲಿ ಮುಷ್ಫಿಕರ್ ರೆಹಮಾನ್ ಮತ್ತು ತಮೀಮ್ ಇಕ್ಬಾಲ್ ಅವರ ಜೋಡಿ 178 ರನ್ ಗಳಿಸಿತ್ತು. ಪಾಕಿಸ್ತಾನದ ವಿರುದ್ಧ ನಡೆದ ಈ ಪಂದ್ಯದಲ್ಲಿ ಈ ಜೋಡಿ ದಾಖಲಿಸಿದ್ದ ರನ್ ಗಳಿಕೆ ಬಾಂಗ್ಲಾದೇಶದ  ಪರ ಅತೀ ದೊಡ್ಡ ಜೊತೆಯಾಟವಾಗಿ ದಾಖಲಾಗಿತ್ತು. ಅಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ 79 ರನ್ ಗಳ ಅಂತರದಿಂದ ಪಾಕಿಸ್ತಾನವನ್ನು ಸೋಲಿಸಿತ್ತು.  ಇದೀಗ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಶಕೀಬ್ ಮತ್ತು  ಮಹಮದುಲ್ಲಾ ಜೋಡಿ ಈ ದಾಖಲೆಯನ್ನು ಅಳಿಸಿ ಹಾಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Bihar election 2025: ಎನ್ ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

BJP ಶಾಸಕ ಮುನಿರತ್ನ ಧರಿಸಿದ್ದ RSS ಟೋಪಿ ಕಿತ್ತೆಸೆದ Congress ಮುಖಂಡ: Video Viral!

Tomahawk Missiles: ಅಮೆರಿಕ ಉಕ್ರೇನ್ ಗೆ 'ಟೊಮಾಹಾಕ್ ಕ್ಷಿಪಣಿ' ನೀಡುವ ಸಾಧ್ಯತೆ, ರಷ್ಯಾದ ಬಿಗ್ ವಾರ್ನಿಂಗ್ ಏನು?

ವಿಶ್ವದಾಖಲೆ ಬರೆದ ಸ್ಮೃತಿ ಮಂದಾನ: ಕ್ಯಾಲೆಂಡರ್ ವರ್ಷದಲ್ಲಿ ODI ಕ್ರಿಕೆಟ್ ನಲ್ಲಿ 1,000 ರನ್ ಪೂರೈಸಿದ ಜಗತ್ತಿನ ಮೊದಲ ಬ್ಯಾಟರ್!

ಯಾವುದೇ ಸಂಪರ್ಕ ಕಡಿತಗೊಳ್ಳದೇ ಎಲ್ಲಾ ಇ-ಮೇಲ್ ಗಳನ್ನು Gmail ನಿಂದ Zoho Mail ಗೆ ವರ್ಗಾವಣೆ ಮಾಡುವುದು ಹೇಗೆ? ಸಿಗುವ ಸೌಲಭ್ಯಗಳೇನು? ಇಲ್ಲಿದೆ ಮಾಹಿತಿ

SCROLL FOR NEXT