ಲಂಡನ್: ಭಾರತ ಮತ್ತು ಬಾಂಗ್ಲಾದೇಶ ನಡುವಿನ 2ನೇ ಸೆಮಿ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಭಾರತ ತಂಡದ ಸ್ಫೋಟಕ ಬ್ಯಾಟ್ಸಮನ್ ಯುವರಾಜ್ ಸಿಂಗ್ ಅವರ ಅದ್ಬುತ ಶಕ್ತಿಯೊಂದರ ಅನಾವರಣವಾಗಿದೆ...!
ಸಹಜವಾಗಿಯೇ ಟೀಂ ಇಂಡಿಯಾ ಡ್ರೆಸಿಂಗ್ ರೂಂ ಸದಾಕಾಲ ಹಾಸ್ಯ ಮತ್ತು ಕೀಟಲೆಯಿಂದ ಕೂಡಿರುತ್ತದೆ. ಇದಕ್ಕೆ ಇಂಬು ನೀಡುವ ಹಲವು ಸನ್ನಿವೇಶಗಳು ಆಗಾಗ್ಗಾ ನಡೆಯುತ್ತಿರುತ್ತದೆ. ಇದಕ್ಕೊಂದ ಹೊಸ ಸೇರ್ಪಡೆ ಎಂಬಂತೆ ಚಂಡದ ಸ್ಫೋಟಕ ಬ್ಯಾಟ್ಸಮನ್ ಯುವರಾಜ್ ಸಿಂಗ್ ಅವರ ಚಮತ್ಕಾರವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ. ಯುವಿ ತಮ್ಮ ಚಮತ್ಕಾರಿ ಕೈಗಳಿಂದ ಹೊಟೆಲ್ ರೂಂ ನ ಬಾಗಿಲು ತೆಗೆಯುವ ದೃಶ್ಯ ಇದೀಗ ವೈರಲ್ ಆಗಿದೆ. ಈ ವಿಡಿಯೋವನ್ನು ಸ್ವತಃ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.
ಚಮತ್ಕಾರವಲ್ಲ...ಯುವಿ ಕೀಟಲೆ..
ಸುದ್ದಿ ನೋಡಿ ಆಚ್ಚರಿಗೊಂಡು ವಿಡಿಯೋ ನೋಡಿದರೆ ಯುವಿ ಪ್ರೇಕ್ಷಕರ ಕಾಲೆಳೆಯುವುದು ಕಾಣುತ್ತದೆ. ಸಾದಾಕಾಲ ತಮ್ಮ ಹಾಸ್ಯ ಪ್ರಜ್ಞೆ ಮತ್ತು ಕೀಟಲೆಗಳಿಂದ ಡ್ರೆಸಿಂಗ್ ರೂಂ ನಲ್ಲಿ ಸುದ್ದಿ ಮಾಡುವ ಯುವಿ ಈಗಲೂ ತಮ್ಮ ಕೀಟಲೆಯಿಂದಲೇ ಸುದ್ದಿಯಾಗಿದ್ದಾರೆ. ಹೊಟೆಲ್ ವಿದ್ಯುತ್ ಚಾಲಿತ ಬಾಗಿಲುಗಳು ವ್ಯಕ್ತಿಗಳು ಬರುತ್ತಿದ್ದಂತೆಯೇ ತೆರೆದುಕೊಂಡು ಮುಚ್ಚಿಕೊಳ್ಳುತ್ತವೆ. ಇದನ್ನೇ ತಮ್ಮ ಕೀಟಲೆಗೆ ಬಳಕೆ ಮಾಡಿಕೊಂಡಿರುವ ಯುವಿ ತಮ್ಮ ಅದ್ಬುತ ಶಕ್ತಿಯಿಂದ ಬಾಗಿಲುಗಳನ್ನು ತೆರೆಯುತ್ತಿರುವಂತೆ ಪೋಸ್ ನೀಡಿದ್ದಾರೆ. ಈ ವಿಡಿಯೋ ಇದೀಗ ಭಾರತೀಯ ಕ್ರಿಕೆಟ್ ಪ್ರೇಮಿಗಳ ಮನರಂಜನೆಗೆ ಕಾರಣವಾಗಿದೆ.