ಟಾಮ್ ಲಾಥನ್ 
ಕ್ರಿಕೆಟ್

ಇದು ಜಗತ್ತಿನ ಅದ್ಭುತ ಕ್ಯಾಚ್ ಗಳಲ್ಲಿ ಒಂದು!

ಕ್ರಿಕೆಟ್ ಇತಿಹಾಸದಲ್ಲಿ ಅದ್ಭುತ ಕ್ಯಾಚ್ ಗಳ ಪಟ್ಟಿ ದೊಡ್ಡದಿದೆ. ಗಾಳಿಯಲ್ಲಿ ಹಾರಿ, ಸಿಕ್ಸರ್ ಬೌಂಡರಿಯಲ್ಲಿ ಒಬ್ಬ ಚೆಂಡನ್ನು ತಡೆದಿಡಿದು ಮತ್ತೊಬ್ಬ ಆಟಗಾರ ಕ್ಯಾಚ್ ಹಿಡಿಯುವುದು...

ಕ್ರಿಕೆಟ್ ಇತಿಹಾಸದಲ್ಲಿ ಅದ್ಭುತ ಕ್ಯಾಚ್ ಗಳ ಪಟ್ಟಿ ದೊಡ್ಡದಿದೆ. ಗಾಳಿಯಲ್ಲಿ ಹಾರಿ, ಸಿಕ್ಸರ್ ಬೌಡಂರಿಯಲ್ಲಿ ಒಬ್ಬ ಚೆಂಡನ್ನು ತಡೆದಿಡಿದು ಮತ್ತೊಬ್ಬ ಆಟಗಾರ ಕ್ಯಾಚ್ ಹಿಡಿಯುವುದು. ಆದರೆ ಅಂತಹ ಕ್ಯಾಚ್ ಗಳನ್ನು ಮೀರಿಸಬಲ್ಲ ಕ್ಯಾಚ್ ಅನ್ನು ನ್ಯೂಜಿಲೆಂಡ್ ಆಟಗಾರ ಟಾಮ್ ಲಾಥನ್ ಹಿಡಿದಿದ್ದಾರೆ. 
ಹಮಿಲ್ಟನ್ ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯದಲ್ಲಿ ನ್ಯೂಜಲೆಂಡ್ ಆಟಗಾರ ಟಾಮ್ ಲಾಥನ್ ಅದ್ಭುತ ಕ್ಯಾಚ್ ಹಿಡಿದಿದ್ದಾರೆ. ಆಫ್ರಿಕಾದ ಆಟಗಾರ ಡುಪ್ಲೇಸಿಸ್ ಲೆಗ್ ಸೈಡ್ ನಲ್ಲಿ ಸ್ಪಿಪ್ ಮಾಡುತ್ತಾರೆ. ಡುಪ್ಲೇಸಿಸ್ ಸ್ಪಿಪ್ ಮಾಡುವುದನ್ನು ಎರಡು ಸೆಕೆಂಡ್ ಗಳಿಗಿಂತ ಮುಂಚೆ ಗ್ರಹಿಸಿದ ಟಾಮ್ ಲಾಥನ್ ಮೂರು ಹೆಚ್ಚು ಬಲಕ್ಕೆ ಚಲಿಸುತ್ತಾರೆ. ಅದರಂತೆ ಡ್ಲುಪ್ಲೇಸಿಸ್ ಸಿಡಿಸಿದ ಚೆಂಡು ನೇರವಾಗಿ ಟಾಮ್ ಲಾಥನ್ ಕೈಸೇರುತ್ತದೆ. ಇಂತಹದೊಂದು ಕ್ಯಾಚ್ ಅನ್ನು ಇಲ್ಲಿಯವರೆಗೂ ಯಾರು ಹಿಡಿದಿರಲಿಲ್ಲ. 
ಕ್ರಿಕೆಟ್ ನಲ್ಲಿ ಸಾಮಾನ್ಯವಾಗಿ ಇಂತಹ ಗ್ರಹಿಕೆಯನ್ನು ವಿಕೆಟ್ ಕೀಪರ್ ಗಳು ಮಾಡುತ್ತಾರೆ. ಬ್ಯಾಟ್ಸ್ ಮನ್ ಗಳ ಚಲನವಲನದ ಮೇಲೆ ಕಣ್ಣಿಟ್ಟು ಸ್ಟೆಂಪ್ ಔಟ್ ಅಥವಾ ಕ್ಯಾಚ್ ಗಳನ್ನು ಹಿಡಿಯುತ್ತಾರೆ ಆದರೆ ಕ್ಷೇತ್ರ ರಕ್ಷಣೆ ಮಾಡುವ ಆಟಗಾರ ಇಂತಹ ಸಾಹಸ ಮಾಡಿರುವುದು ನಿಜಕ್ಕೂ ಅದ್ಭುತ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತುಳು ಭಾಷೆಗೆ ಸಿಕ್ತು ಅಧಿಕೃತ ಸ್ಥಾನಮಾನ: ಕರ್ನಾಟಕದ 2ನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಣೆ, ಕರಾವಳಿಗೆ ಹೊಸ ಟೂರಿಸಂ ನೀತಿ!

ದೀದಿ ಬಣಕ್ಕೆ ಫುಟ್‌ಬಾಲ್, ಬಂಡಾಯಗಾರರಿಗೆ ಲಕೋಟೆ: ಟಿಎಂಸಿ ಚಿಹ್ನೆ ಫ್ರೀಜ್ ಬೆನ್ನಲ್ಲೇ ಚುನಾವಣಾ ಆಯೋಗದಿಂದ ಮಹತ್ವದ ಆದೇಶ!

ಬಾಲಿವುಡ್ ನಟಿ ಕತ್ರೀನಾ ಕೈಫ್ ಬಾಡಿ ಶೇಮಿಂಗ್: ಟ್ರೋಲ್ ಮಾಡುವವರ ವಿರುದ್ಧ ನಟಿ ರಮ್ಯಾ ಕಿಡಿ!

Mr Singh ಕುರಿತು AI-ಪೋಸ್ಟ್ ತಂದ ಆಪತ್ತು: ಅಮೆರಿಕದಲ್ಲಿ ಸಿಖ್ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ!

ಮಮತಾ ಬಣಕ್ಕೆ ಮತ್ತೊಂದು ಆಘಾತ; ನಾಮಪತ್ರ ವಾಪಸ್ ಪಡೆದ ನಂದಿಗ್ರಾಮ ಅಭ್ಯರ್ಥಿ!