ಟೀಂ ಇಂಡಿಯಾ ಅಭ್ಯಾಸ 
ಕ್ರಿಕೆಟ್

ಭಾರತದ ಬತ್ತಳಿಕೆಗೆ ಮತ್ತೊಂದು 'ಮಿಸ್ಟ್ರಿ ಸ್ಪಿನ್' ಅಸ್ತ್ರ!

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಏಕದಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಟೀಂ ಇಂಡಿಯಾದ ಬತ್ತಳಿಕೆಗೆ ಮತ್ತೊಂದು "ಸ್ಪಿನ್ ಅಸ್ತ್ರ" ಸೇರುವ ಕುರಿತು ಚರ್ಚೆಗಳು ಆರಂಭವಾಗಿದೆ.

ಇಂದೋರ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಏಕದಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಟೀಂ ಇಂಡಿಯಾದ ಬತ್ತಳಿಕೆಗೆ ಮತ್ತೊಂದು "ಸ್ಪಿನ್ ಅಸ್ತ್ರ" ಸೇರುವ ಕುರಿತು ಚರ್ಚೆಗಳು ಆರಂಭವಾಗಿದೆ.
ಇಂತಹುದೊಂದು ಚರ್ಚೆಗೆ ಕಾರಣವಾಗಿದ್ದು, ಬಿಸಿಸಿಐ ಟ್ವೀಟ್ ಮಾಡಿರುವ ಒಂದು ವಿಡಿಯೋ..ಭಾರತದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಈಗಾಗಲೇ 2 ಪಂದ್ಯಗಳನ್ನು  ಜಯಿಸಿದೆ. ಈ ಎರಡೂ ಪಂದ್ಯಗಳಲ್ಲಿ ಭಾರತದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದು ಸ್ಪಿನ್ನರ್ ಗಳೇ... ಪ್ರಸ್ತುತ ತಂಡದಲ್ಲಿ ಹ್ಯಾಟ್ರಿಕ್ ಹೀರೋ ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಅಕ್ಸರ್ ಪಟೇಲ್ ಸ್ಪಿನ್ ಬೌಲಿಂಗ್  ನಲ್ಲಿ ತಮ್ಮ ಪ್ರದರ್ಶನ ತೋರಿದ್ದಾರೆ.
Look who has joined India’s Spin Attack - @msdhoni pic.twitter.com/JFMatmP0WP
ಈ ಪಟ್ಟಿಗೆ ನಾಲ್ಕನೇ ಸೇರ್ಪಡೆಯಾಗಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಸೇರಿದ್ದಾರೆ.. ಹೌದು..ಅಚ್ಚರಿಯಾದರೂ ಇದು ನಿಜ.. ಮಹೇಂದ್ರ ಸಿಂಗ್ ಟೀಂ ಇಂಡಿಯಾದ ನಾಲ್ಕನೇ ಸ್ಪಿನ್ನರ್ ಆಗಿ ಕಾಣಿಸಿಕೊಳ್ಳಬಹುದು  ಎಂಬ ಚರ್ಚೆ ಆರಂಭವಾಗಿದೆ. ಇದಕ್ಕೆ ಕಾರಣವಾಗಿದ್ದು ಬಿಸಿಸಿಐ ಟ್ವೀಟ್ ಮಾಡಿರುವ ಟೀಂ ಇಂಡಿಯಾ ಆಟಗಾರರ ತರಬೇತಿ ವಿಡಿಯೋ..ತರಬೇತಿ ವೇಳೆ ಪಾಲ್ಗೊಂಡಿದ್ದ ಮಹೇಂದ್ರ ಸಿಂಗ್ ಧೋನಿ ಬ್ಯಾಟ್ಸಮನ್ ಗಳಿಗೆ ಸ್ಪಿನ್  ಬೌಲ್ ಎಸೆಯುವ ಮೂಲಕ ಅಚ್ಚರಿಗೆ ಕಾರಣರಾದರು.

ಧೋನಿ ಬೌಲಿಂಗ್ ಮಾಡುವುದು ಅಚ್ಚರಿಯಿಲ್ಲ..ಏಕೆಂದರೆ ಈ ಹಿಂದೆ ಸಾಕಷ್ಟು ಪಂದ್ಯಗಳಲ್ಲಿ ಧೋನಿ ಮಧ್ಯಮವೇಗಿಯಾಗಿ ಬೌಲಿಂಗ್ ಮಾಡಿದ್ದಾರೆ. ಆದರೆ ಈ ಬಾರಿ ಧೋನಿ ಸ್ಪಿನ್ ಮಾಡುವ ಮೂಲಕ ನೋಡುಗರ ಅಚ್ಚರಿಗೆ  ಕಾರಣರಾಗಿದ್ದಾರೆ. ಬಿಸಿಸಿಐ ಟ್ವೀಟ್ ಮಾಡಿರುವ ವಿಡಿಯೋದಲ್ಲಿ ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಅಕ್ಸರ್ ಪಟೇಲ್ ರೊಂದಿಗೆ ಧೋನಿ ಕೂಡ ಸ್ಪಿನ್ ಬೌಲಿಂಗ್ ಮಾಡುವ ಮೂಲಕ ಇದೀಗ ಸುದ್ದಿಗೆ ಗ್ರಾಸವಾಗಿದ್ದಾರೆ.  ಇದೀಗ ಈ ವಿಡಿಯೋ ಟ್ವಿಟರ್ ನಲ್ಲಿ ವೈರಲ್ ಆಗಿದ್ದು, ಧೋನಿ ಕುರಿತು ಅಭಿಮಾನಿಗಳು ವ್ಯಾಪಕ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಆಡು ಮುಟ್ಟದ ಸೊಪ್ಪಿಲ್ಲ..ಧೋನಿ ಕೈ ಇಡದ ವಿಭಾಗಗಳಿಲ್ಲ ಎಂದು ಟ್ವೀಟ್ ಮಾಡಿ ಧೋನಿಗೆ  ಶುಭ ಹಾರೈಸಿದ್ದಾರೆ.

ಧೋನಿ ವಿಡಿಯೋಗೆ ಸಿಕ್ಕ ಟ್ವೀಟ್ ಪ್ರಶಂಸೆಗಳು ಇಲ್ಲಿವೆ..

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ