ಟೀಂ ಇಂಡಿಯಾ ಆಟಗಾರರ ಜೆರ್ಸಿ 
ಕ್ರಿಕೆಟ್

ಟೀಂ ಇಂಡಿಯಾ ಆಟಗಾರರ ಜೆರ್ಸಿ ಮೇಲೆ 3 ಸ್ಟಾರ್ ಗಳು ಇರುವುದೇಕೆ ಗೊತ್ತೆ?

ಭಾರತ ಕ್ರಿಕೆಟ್ ತಂಡದ ಆಟಗಾರರ ಟೀಶರ್ಟ್ ಮೇಲಿನ ಬಿಸಿಸಿಐ ಲೋಗೋ ಮೇಲೆ 3 ಸ್ಟಾರ್ ಗಳನ್ನು ಯಾರಾದರೂ ಗಮನಿಸಿದ್ದೀರಾ..

ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಟಗಾರರ ಟೀಶರ್ಟ್ ಮೇಲಿನ ಬಿಸಿಸಿಐ ಲೋಗೋ ಮೇಲೆ 3 ಸ್ಟಾರ್ ಗಳನ್ನು ಯಾರಾದರೂ ಗಮನಿಸಿದ್ದೀರಾ..

ಹೌದು..ಪ್ರಸ್ತುತ ಟೀಂ ಇಂಡಿಯಾದ ಆಟಗಾರರು ಧರಿಸುತ್ತಿರುವ ಟೀಶರ್ಟ್ ಮೇಲಿನ ಬಿಸಿಸಿಐ ಲೋಗೋ ಮೇಲೆ 3 ಸ್ಟಾರ್ ಗಳನ್ನು ಮುದ್ರಿಸಲಾಗಿದೆ. ಈ ಮೂರು ಸ್ಟಾರ್ ಗಳು ಭಾರತ ಕ್ರಿಕೆಟ್ ತಂಡದ ಹೆಮ್ಮೆ ಎಂದರೆ ನೀವು  ನಂಬಲೇಬೇಕು...ಈ ಮೂರು ಸ್ಟಾರ್ ಗಳನ್ನು ಭಾರತ ಕ್ರಿಕೆಟ್ ತಂಡದ ಹೆಮ್ಮೆಯ ಪ್ರತೀಕವಾಗಿದ್ದು, ಭಾರತ ಕ್ರಿಕೆಟ್ ತಂಡದ ಪರಿಶ್ರಮಕ್ಕೆ ಸಿಕ್ಕ ಗೌರವವಾಗಿದೆ. ಇಷ್ಟಕ್ಕೂ ಈ ಮೂರು ಸ್ಟಾರ್ ಗಳು ಏನನ್ನು ಸೂಚಿಸುತ್ತವೆ ಗೊತ್ತೆ...?

ಈ ಮೂರು ಸ್ಟಾರ್ ಗಳು ಭಾರತ ಕ್ರಿಕೆಟ್ ತಂಡ ಗೆದ್ದ ಮೂರು ವಿಶ್ವಕಪ್ ಗಳನ್ನೂ ಸೂಚಿಸುತ್ತದೆ. ಹೌದು ಭಾರತ ತಂಡ ಏಕದಿನ ಮಾದರಿಯಲ್ಲಿ 2 ಬಾರಿ ಹಾಗೂ ಟಿ20 ಮಾದರಿಯಲ್ಲಿ 1 ಬಾರಿ ವಿಶ್ವಕಪ್ ಗೆದ್ದಿದೆ. ಇದರ ಸೂಚಕವಾಗಿ  ಟೀಂ ಇಂಡಿಯಾ ಆಟಗಾರರ ಜೆರ್ಸಿಗಳ ಮೇಲೆ ಈ ಮೂರು ಸ್ಟಾರ್ ಗಳನ್ನು ಮುದ್ರಿಸಲಾಗುತ್ತದೆ.

ಈ ಬಗ್ಗೆ ಹಲವು ಆಟಗಾರರು ಈ ಹಿಂದೆ ಸಾಕಷ್ಟು ಸಂದರ್ಭಗಳಲ್ಲಿ ಪ್ರತಿಕ್ರಿಯೆ ನೀಡಿದ್ದು, ಈ ಸ್ಟಾರ್ ಗಳನ್ನು ನೋಡಿದಾಗಲೆಲ್ಲಾ ಹೆಮ್ಮೆಯಾಗುತ್ತದೆ ಎಂದು ಆಟಗಾರರು ಹೇಳಿಕೊಂಡಿದ್ದಾರೆ.

ಭಾರತ ತಂಡ ಮೊಟ್ಟ ಮೊದಲ ವಿಶ್ವಕಪ್ ಗೆದ್ದಿದ್ದು 1983ರಲ್ಲಿ.. ಮಾಜಿ ಕ್ರಿಕೆಟಿಗ ಕಪಿಲ್ ದೇವ್ ನೇತೃತ್ವದ ತಂಡ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ತನ್ನ ಚೊಚ್ಚಲ ವಿಶ್ವಕಪ್ ಪ್ರಶಸ್ತಿಗೆ ಮುತ್ತಿಟ್ಟಿತ್ತು. ಬಳಿಕ ಭಾರತ ತಂಡ  2011ರಲ್ಲಿ ಮಾಜಿ ನಾಯಕ ಎಂಎಸ್ ಧೋನಿ ನೇತೃತ್ವದಲ್ಲಿ 2ನೇ ಬಾರಿಗೆ ವಿಶ್ವಕಪ್ ಜಯಿಸಿತ್ತು. ಈ ವಿಶ್ವಕಪ್ ಸರಣಿ ನಡೆದಿದ್ದು ಭಾರತದಲ್ಲಿ ಎನ್ನುವುದು ವಿಶೇಷ. ಫೈನಲ್ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾ ತಂಡವನ್ನು  ಮಣಿಸಿ ಪ್ರಶಸ್ತಿಗೆ ಮುತ್ತಿಟ್ಟಿತ್ತು. ಇದು ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಕೊನೆಯ ವಿಶ್ವಕಪ್ ಕೂಡ ಆಗಿತ್ತು.

ಇದಕ್ಕೂ ಮೊದಲು ಟೀಂ ಇಂಡಿಯಾ ಇದೇ ಎಂಎಸ್ ಧೋನಿ ನೇತೃತ್ವದಲ್ಲಿ 2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ ಸರಣಿಯನ್ನು ಜಯಿಸಿತ್ತು. ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ  ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಕೇವಲ 5 ರನ್ ಗಳ ಅಂತರದಲ್ಲಿ ರೋಚಕವಾಗಿ ಮಣಿಸಿ ಚೊಚ್ಚಲ ಟಿ20 ವಿಶ್ವಕಪ್ ಗೆ ಮುತ್ತಿಟ್ಟಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!