ಸಂಗ್ರಹ ಚಿತ್ರ 
ಕ್ರಿಕೆಟ್

ಗ್ರೇಗ್ ಚಾಪೆಲ್ ಸಂಚು ಬಯಲು ಮಾಡಿದ್ದ ವಿರೇಂದ್ರ ಸೆಹ್ವಾಗ್!

ಭಾರತೀಯ ಕ್ರಿಕೆಟ್ ಅನ್ನು ಹಾಳುಮಾಡಲು ಅಂದಿನ ಕೋಚ್ ಗ್ರೇಗ್ ಚಾಪೆಲ್ ನಡೆಸುತ್ತಿದ್ದ ಸಂಚನ್ನು ನಾನೇ ಮೊದಲು ಬಹಿರಂಗ ಮಾಡಿದ್ದೆ ಎಂದು ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ನವದೆಹಲಿ: ಭಾರತೀಯ ಕ್ರಿಕೆಟ್ ಅನ್ನು ಹಾಳುಮಾಡಲು ಅಂದಿನ ಕೋಚ್ ಗ್ರೇಗ್ ಚಾಪೆಲ್ ನಡೆಸುತ್ತಿದ್ದ ಸಂಚನ್ನು ನಾನೇ ಮೊದಲು ಬಹಿರಂಗ ಮಾಡಿದ್ದೆ ಎಂದು ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ಭಾರತ ತಂಡದ ಮಾಜಿ ಕೋಚ್ ಗ್ರೆಗ್ ಚಾಪೆಲ್ ಹಾಗೂ ಸೌರವ್ ಗಂಗೂಲಿ ಕಿತ್ತಾಟದ ಪ್ರಕರಣದ ಕುತೂಹಲಕಾರಿ ಸತ್ಯವನ್ನು ವೀರೇಂದ್ರ ಸೆಹ್ವಾಗ್ ಬಹಿರಂಗಗೊಳಿಸಿದ್ದಾರೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಸೆಹ್ವಾಗ್, ಸೌರವ್ ಗಂಗೂಲಿಯನ್ನು ತಂಡದಿಂದ ಹೊರಹಾಕಲು ಚಾಪೆಲ್ ನಡೆಸುತ್ತಿದ್ದ ಸಂಚಿನ ಬಗ್ಗೆ ಗಂಗೂಲಿಗೆ ಮಾಹಿತಿ ನೀಡಿದ್ದು ನಾನೇ ಎಂದು ಹೇಳಿಕೊಂಡಿದ್ದಾರೆ.
'ಜಿಂಬಾಬ್ವೆ ಪ್ರವಾಸದ ವೇಳೆ ನಾನು ಹೊಟ್ಟೆ ನೋವಿನ ಕಾರಣ ನೀಡಿ ಪದೇ ಪದೇ ಮೈದಾನ ತೊರೆದು ಪೆವಿಲಿಯನ್ ಗೆ ತೆರಳಿದೆ. ಆ ವೇಳೆ ಶೌಚಾಲಯದ ಬಳಿ ಚಾಪೆಲ್ ಬಿಸಿಸಿಐಗೆ ರಹಸ್ಯ ಈ-ಮೇಲ್ ಕಳುಹಿಸುತ್ತಿದ್ದನ್ನು ನೋಡಿದೆ. ಆದರೆ ಅದೇನು ಎಂದು ಸ್ಪಷ್ಟವಾಗಿ ಗೊತ್ತಾಗಲಿಲ್ಲ. ಮೈದಾನಕ್ಕೆ ವಾಪಸಾದ ಕೂಡಲೇ ಗಂಗೂಲಿಗೆ ಆ ಬಗ್ಗೆ ತಿಳಿಸಿ, ಚಾಪೆಲ್ ಅನುಮಾನ ಬರುವ ರೀತಿಯಲ್ಲಿ ಏನೋ ಮಾಡುತ್ತಿದ್ದಾರೆ ಎಂದು ಹೇಳಿದೆ' ಎಂದಿದ್ದಾರೆ.
ಆ ಪ್ರವಾಸದಲ್ಲೇ ಸೌರವ್ ಗಂಗೂಲಿಯನ್ನು ತಂಡದಿಂದ ಹೊರಹಾಕುವಲ್ಲಿ ಚಾಪೆಲ್ ಯಶಸ್ವಿಯಾಗಿದ್ದರು. ಗಂಗೂಲಿ ಮಾತ್ರವಲ್ಲ, ಸಚಿನ್ ತೆಂಡೂಲ್ಕರ್, ಹರ್ಭಜನ್ ಸಿಂಗ್, ಜಹೀರ್ ಖಾನ್ ಸಹ ಚಾಪೆಲ್ ಹೇಗೆ ಭಾರತೀಯ ಕ್ರಿಕೆಟ್ ಅನ್ನು ಹಾಳು ಮಾಡಿದರು ಎಂದು ಹಲವು ವೇದಿಕೆಗಳಲ್ಲಿ ವಿವರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವೇನ್ ಮುಚ್ಚೋದು ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ- ಇರಾನ್ ಗೆ ಟ್ರಂಪ್ ಶಾಕ್!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ; Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ, Turkey ಬೇಸ್ತು!

IPL 2026: ಬಟ್ಲರ್ 14,000 ರನ್ ದಾಖಲೆ; ಮಿಂಚಿದ ಶುಭ್ಮನ್ ಗಿಲ್, ಪ್ರಸಿದ್ಧ್ ಕೃಷ್ಣ; LSG ವಿರುದ್ಧ GT ಗೆಲುವು!

US-Iran ಶಾಂತಿ ಮಾತುಕತೆ ವಿಫಲ ಬೆನ್ನಲ್ಲೇ Pakistanಗೆ ಜಾಕ್‌ಪಾಟ್‌: ಕತಾರ್, ಸೌದಿಯಿಂದ 5 ಬಿಲಿಯನ್ ಡಾಲರ್ ಆರ್ಥಿಕ ನೆರವು!

ಶಾಂತಿ ಮಾತುಕತೆ ವಿಫಲ: ಅಮೆರಿಕ ಟೆಹ್ರಾನ್‌ನ ವಿಶ್ವಾಸ ಗಳಿಸಲು ಸಾಧ್ಯವಾಗಲಿಲ್ಲ; ಇರಾನ್ ಸ್ಪೀಕರ್

SCROLL FOR NEXT