ನವದೆಹಲಿ: ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಮೂರನೇ ಟೆಸ್ಟ್ ಪಂದ್ಯಕ್ಕೆ ಮಯಾಂಕ್ ಅಗರ್ವಾಲ್ ಆಯ್ಕೆಯಾಗಿದ್ದು, ಪ್ರಾರಂಭಿಕ ಆಟಗಾರನಾಗಿ ಕ್ರೀಸ್ ಗೆ ಇಳಿಯಲಿದ್ದಾರೆ.
27 ವರ್ಷದ ಮಯಾಂಕ್ ಅಗರ್ವಾಲ್ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯದಲ್ಲಿ ಆಡುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಗೆ ಪದಾರ್ಪಣೆ ಮಾಡುವುದಕ್ಕೂ ಮುನ್ನವೇ ಮಯಾಂಕ್ ಅಗರ್ವಾಲ್, 2017 ರ ನವೆಂಬರ್ ತಿಂಗಳಲ್ಲಿ ತ್ರಿಶತಕ ದಾಖಲಿಸಿದ್ದರು.
46 ಎಫ್ ಸಿ ಮ್ಯಾಚ್ ಗಳಲ್ಲಿ ಮಯಾಂಕ್ ಅಗರ್ವಾಲ್ 3599 ರನ್ ಗಳನ್ನು ದಾಖಲಿಸಿದ್ದು, ಶೇ.49.98 ರಷ್ಟು ಸರಾಸರಿ ಹೊಂದಿದ್ದು, 75 ಲಿಸ್ಟ್ A ಪಂದ್ಯಗಳಲ್ಲಿ 3605 ರನ್ ಗಳನ್ನು ದಾಕ್ಗಲಿಸಿದ್ದಾರೆ. ಬೆಂಗಳೂರಿನ ಬಿಷಪ್ ಕಾಟನ್ ಬಾಯ್ಸ್ ಸ್ಕೂಲ್ ನಲ್ಲಿ ಅಂಡರ್ 13 ತಂಡದಿಂದ ತನ್ನ ಕ್ರಿಕೆಟ್ ಆಸಕ್ತಿಯನ್ನು ಮುಂದುವರೆಸಿದ ಮಯಾಂಕ್ ಅಗರ್ವಾಲ್ ಗೆ ವಿರೇಂದ್ರ ಸೆಹ್ವಾಗ್ ಮಾದರಿಯ ಆಟಗಾರ.
ಐಪಿಎಲ್ ನ ಸೀಸನ್ ಗಳಲ್ಲಿ ಆರ್ ಸಿಬಿ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್, ರೈಸಿಂಗ್ ಪುಣೆ ಪರವಾಗಿ ಆಡಿರುವ ಮಯಾಂಕ್ ಅಗರ್ವಾಲ್ ಪ್ರಸ್ತುತ ಕಿಂಗ್ಸ್ XI ಪಂಜಾಬ್ ನ್ನು ಪ್ರತಿನಿಧಿಸುತ್ತಿದ್ದಾರೆ.