ಮೆಲ್ಬೋರ್ನ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ನಿರ್ಣಾಯಕ ಘಟ್ಟ ತಲುಪಿದ್ದು, ನಾಲ್ಕನೇ ದಿನ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡ 8 ವಿಕೆಟ್ ನಷ್ಟಕ್ಕೆ 258 ರನ್ ಪೇರಿಸಿ ಸೋಲಿನ ಸುಳಿಗೆ ಸಿಲುಕಿದೆ.
ಮೆಲ್ಬರ್ನ್ ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯ ಅಂತೂ ನಿರ್ಣಾಯಕ ಘಟ್ಟಕ್ಕೆ ತಲುಪಿದೆ. ನಾಳೆ ಒಂದು ದಿನ ಬಾಕಿ ಇದ್ದು ಟೀಂ ಇಂಡಿಯಾಗೆ ಗೆಲ್ಲಲು ಇನ್ನು 2 ವಿಕೆಟ್ ಕೀಳಬೇಕಿದೆ. ಅದೇ ಆಸ್ಟ್ರೇಲಿಯಾ ಗೆಲುವಿಗೆ 141 ರನ್ ಗಳ ಅವಶ್ಯಕತೆ ಇದೆ. ಆದರೆ ಭಾರತ ಈ ಪಂದ್ಯವನ್ನು ಗೆಲ್ಲುವ ಅವಕಾಶಗಳು ಹೆಚ್ಚಿವೆ.
ನಾಲ್ಕನೇ ದಿನದ ಚಹದ ವಿರಾಮ ವೇಳೆಗೆ 138 ರನ್ ಗಳಿಗೆ ಆಸ್ಟ್ರೇಲಿಯಾ ತಂಡ ತನ್ನ ಪ್ರಮುಖ ಐದು ವಿಕೆಟ್ ಕಳೆದುಕೊಂಡಿದ್ದು, ಪಂದ್ಯ ಗೆಲ್ಲಲು ಇನ್ನೂ 261 ರನ್ ಗಳನ್ನು ಗಳಿಸಬೇಕಿದೆ. ಆದರೆ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಆಸ್ಟ್ರೇಲಿಯಾ ತಂಡ ಸೋಲಿನತ್ತ ಮುಖ ಮಾಡಿದ್ದು, ನಾಳಿನ ಇಡೀ ದಿನದ ಆಟದಲ್ಲಿ ತನ್ನ ವಿಕೆಟ್ ಗಳನ್ನು ಕಾಪಾಡಿಕೊಳ್ಳಬೇಕಿದೆ. ಇದೇ ಕಾರಣಕ್ಕೆ ಆಸ್ಟ್ರೇಲಿಯಾ ತಂಡಕ್ಕೆ ಸೋಲಿನ ಭೀತಿ ಶುರುವಾಗಿದೆ.
ಮೊದಲ ಇನ್ನಿಂಗ್ಸ್ ನಂತೆಯೇ 2ನೇ ಇನ್ನಿಂಗ್ಸ್ ನಲ್ಲೂ ಭಾರತೀಯ ವೇಗಿ ಜಸ್ ಪ್ರೀತ್ ಬುಮ್ರಾ ಕಾಂಗರೂಗಳ ಮೇಲೆ ಸವಾರಿ ಮಾಡಿದ್ದು, ಕೇವಲ 53 ರನ್ ನೀಡಿ ಪ್ರಮುಖ 2 ವಿಕೆಟ್ ಪಡೆದಿದ್ದಾರೆ. ಅಂತೆಯೇ ಬುಮ್ರಾಗೆ ಉತ್ತಮ ಸಾಥ್ ನೀಡಿದ ರವೀಂದ್ರ ಜಡೇಜಾ ಅವರೂ ಕೂಡ 82 ರನ್ ನೀಡಿ 3 ವಿಕೆಟ್ ಗಳಿಸಿದ್ದಾರೆ. ಇನ್ನು ಶಮಿ 71 ರನ್ ನೀಡಿ 2 ವಿಕೆಟ್ ಕಬಳಿಸಿ ಕಾಂಗರೂಗಳ ಮೇಲೆ ಒತ್ತಡ ಹೇರಿದ್ದಾರೆ.
ಚಹಾ ವಿರಾಮದ ವೇಳೆ 138 ರನ್ ಗಳಿಸಿರುವ ಆಸಿಸ್ ಪಡೆ ಗೆಲುವಿಗಾಗಿ ಇನ್ನೂ 261 ರನ್ ಗಳ ಗಳಿಸಬೇಕಿದೆ. ಇತ್ತೀಚಿನ ವರದಿ ಬಂದಾಗ 61 ರನ್ ಗಳಿಸಿರುವ ಪ್ಯಾಟ್ ಕಮ್ಮಿನ್ಸ್ ಹಾಗೂ ನಾಥನ್ ಲಿಯಾನ್ 6 ರನ್ ಗಳಿಸಿರುವ ಕ್ರೀಸ್ ಕಾಯ್ದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics