ಡುಪ್ಲೇಸಿಸ್ 
ಕ್ರಿಕೆಟ್

ಎಬಿಡಿ ಬಳಿಕ ಆಫ್ರಿಕಾ ನಾಯಕ ಡುಪ್ಲೇಸಿಸ್ ಸಹ ತಂಡದಿಂದ ಔಟ್!

ಗಾಯದ ಸಮಸ್ಯೆಯಿಂದಾಗಿ ದಕ್ಷಿಣ ಆಫ್ರಿಕಾ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ತಂಡದಿಂದ ಹೊರಗುಳಿದಿದ್ದು ಇದೀಗ ತಂಡದ ನಾಯಕ...

ಸೆಂಚೂರಿಯನ್: ಗಾಯದ ಸಮಸ್ಯೆಯಿಂದಾಗಿ ದಕ್ಷಿಣ ಆಫ್ರಿಕಾ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ತಂಡದಿಂದ ಹೊರಗುಳಿದಿದ್ದು ಇದೀಗ ತಂಡದ ನಾಯಕ ಡುಪ್ಲೇಸಿಸ್ ಸಹ ಗಾಯಗೊಂಡು ಟೂರ್ನಿಯಿಂದ ಹೊರ ಹೋಗಿದ್ದಾರೆ. 
ಪ್ರವಾಸಿ ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದ ಡುಪ್ಲೇಸಿಸ್ ಅವರ ಬೆರಳಿಗೆ ಗಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಏಕದಿನ ಸರಣಿ ಮತ್ತು ಮುಂಬರುವ ಟಿ20 ಸರಣಿಯಿಂದಲೇ ಹೊರಬಿದಿದ್ದಾರೆ. 
ಕೈ ಬೆರಳಿನ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಡುಪ್ಲೇಸಿಸ್ ಅವರಿಗೆ 3 ರಿಂದ 6 ವಾರಗಳ ವಿಶ್ರಾಂತಿ ನೀಡಲಾಗಿದೆ ಹೀಗಾಗಿ ಸೀಮಿತ ಓವರ್ ತಂಡದ ಹಂಗಾಮಿ ನಾಯಕನ ಹೆಸರನ್ನು ಶನಿವಾರ ಪ್ರಕಟಿಸಲಾಗುವುದು ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ತಿಳಿಸಿದೆ. 
ಇನ್ನು ತಂಡದ ವಿಕೆಟ್ ಕೀಪರ್ ಕ್ವಿಂಟನ್ ಡಿಕಾಕ್ ಕೂಡ ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನು ಎಬಿಡಿ ಸಹ ಗಾಯಗೊಂಡಿರುವುದರಿಂದ ಹೆನ್ರಿಕ್ ಕ್ಲಾಸೆನ್ ರನ್ನು ಮೀಸಲು ವಿಕೆಟ್ ಕೀಪರ್ ಆಗಿ ಸೇರಿಸಿಕೊಳ್ಳಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತುಳು ಭಾಷೆಗೆ ಸಿಕ್ತು ಅಧಿಕೃತ ಸ್ಥಾನಮಾನ: ಕರ್ನಾಟಕದ 2ನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಣೆ, ಕರಾವಳಿಗೆ ಹೊಸ ಟೂರಿಸಂ ನೀತಿ!

ದೀದಿ ಬಣಕ್ಕೆ ಫುಟ್‌ಬಾಲ್, ಬಂಡಾಯಗಾರರಿಗೆ ಲಕೋಟೆ: ಟಿಎಂಸಿ ಚಿಹ್ನೆ ಫ್ರೀಜ್ ಬೆನ್ನಲ್ಲೇ ಚುನಾವಣಾ ಆಯೋಗದಿಂದ ಮಹತ್ವದ ಆದೇಶ!

ಬಾಲಿವುಡ್ ನಟಿ ಕತ್ರೀನಾ ಕೈಫ್ ಬಾಡಿ ಶೇಮಿಂಗ್: ಟ್ರೋಲ್ ಮಾಡುವವರ ವಿರುದ್ಧ ನಟಿ ರಮ್ಯಾ ಕಿಡಿ!

Mr Singh ಕುರಿತು AI-ಪೋಸ್ಟ್ ತಂದ ಆಪತ್ತು: ಅಮೆರಿಕದಲ್ಲಿ ಸಿಖ್ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ!

ಮಮತಾ ಬಣಕ್ಕೆ ಮತ್ತೊಂದು ಆಘಾತ; ನಾಮಪತ್ರ ವಾಪಸ್ ಪಡೆದ ನಂದಿಗ್ರಾಮ ಅಭ್ಯರ್ಥಿ!