ಸಂಗ್ರಹ ಚಿತ್ರ 
ಕ್ರಿಕೆಟ್

4ನೇ ಏಕದಿನ ಪಂದ್ಯ: ಸೋಲಿನ ನಡುವೆಯೂ ಅಜರುದ್ದೀನ್, ಗೇಯ್ಲ್ ದಾಖಲೆ ಮುರಿದ ಕೊಹ್ಲಿ

ನ್ಯೂ ವಾಂಡರರ್ಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಸೋಲಿನ ನಡುವೆಯೂ ನಾಯಕ ವಿರಾಟ್ ಕೊಹ್ಲಿ ನೂತನ ದಾಖಲೆಯೊಂದನ್ನು ಬರೆದಿದ್ದಾರೆ.

ಜೋಹನ್ಸ್ ಬರ್ಗ್: ನ್ಯೂ ವಾಂಡರರ್ಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಸೋಲಿನ ನಡುವೆಯೂ ನಾಯಕ ವಿರಾಟ್ ಕೊಹ್ಲಿ ನೂತನ ದಾಖಲೆಯೊಂದನ್ನು ಬರೆದಿದ್ದಾರೆ.
ಆಫ್ರಿಕಾ ವಿರುದ್ಧ 75 ರನ್ ಸಡಿಸಿದ ಕೊಹ್ಲಿ ತಮ್ಮ ರನ್ ಗಳಿಕೆಯನ್ನು 9,423 ರನ್ ಗಳಿಕೆ ಏರಿಸಿಕೊಳ್ಳುವ ಮೂಲಕ ಭಾರತ ತಂಡದ ಮಾಜಿನಾಯಕ ಮೊಹಮದ್ ಅಜರುದ್ದೀನ್ ಹಾಗೂ ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್ ಅವರನ್ನು  ಹಿಂದಿಕ್ಕಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಈಗ 16 ನೇ ಸ್ಥಾನಕ್ಕೆ ಜಿಗಿದಿದ್ದು, 29 ವರ್ಷದ ಕೊಹ್ಲಿ 206 ಪಂದ್ಯಗಳಲ್ಲಿ 9,423 ರನ್ ಗಳಿಸಿ ಈ ಸಾಧನೆ ಮಾಡಿದ್ದಾರೆ. ಕ್ರಿಸ್ ಗೇಲ್ 9,420  ರನ್ ಗಳಿಸಿದ್ದು, ಅಜರುದ್ದೀನ್ 9,378 ರನ್ ಗಳಿಸಿದ್ದರು. 
ಅಂತೆಯೇ ಭಾರತದ ಪರ 5 ನೇ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದು, ಭಾರತದ ಪರ ಮೊದಲ ಸ್ಥಾನ ಪಡೆದಿರುವ ಸಚಿನ್ ಇದ್ದು 18,426 ರನ್ ಗಳಿಸಿದ್ದಾರೆ. ನಂತರದಲ್ಲಿ 11,363 ರನ್ ಗಳಿಸಿರುವ ಸೌರವ್ ಗಂಗೂಲಿ,  3ನೇ ಸ್ಥಾನದಲ್ಲಿ ದ್ರಾವಿಡ್  ಇದ್ದು 10,889 ರನ್ ಗಳಿಸಿದ್ದು, ಮಹೇಂದ್ರ ಸಿಂಗ್ ಧೋನಿ 9,954 ರನ್ ಗಳೊಂದಿಗೆ 4ನೇ ಸ್ಥಾನದಲ್ಲಿದ್ದಾರೆ. 
ಇನ್ನು ನಿನ್ನೆ ನಡೆದ ಪಂದ್ಯದಲ್ಲಿ 83 ಎಸೆತಗಳ ಮೂಲಕ 75 ರನ್ ಸಿಡಿಸಿದ ಕೊಹ್ಲಿ ತಮ್ಮ 46 ನೇ ಅರ್ಧ ಶತಕವನ್ನು ಪೂರ್ಣಗೊಳಿಸಿದ್ದರು. ಅಲ್ಲದೇ ಆಫ್ರಿಕಾ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಮೂರು ಶತಕಗಳನ್ನು  ಸಿಡಿಸಿದ್ದಾರೆ.  ವಿಶೇಷವಾಗಿ ಆಫ್ರಿಕಾ ನೆಲದಲ್ಲಿ ಎಬಿಡಿ ವಿಲಿಯರ್ಸ್ ನಂತರ ಏಕದಿನ ಪಂದ್ಯಗಳಲ್ಲಿ 350 ಪ್ಲಸ್ ರನ್ ಕಲೆ ಹಾಕಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ಹಿಂದೆ 2013 ರಲ್ಲಿ ಎಬಿಡಿ ಪಾಕ್ ವಿರುದ್ಧದ ಸರಣಿಯಲ್ಲಿ 367 ರನ್  ಸಿಡಿಸಿದ್ದರು. ಕೊಹ್ಲಿ ತಮ್ಮ ವೃತ್ತಿ ಜೀವನದಲ್ಲಿ 34 ಶತಕಗಳನ್ನು ಗಳಿಸಿದ್ದು, ಭಾರತ ಪರ ಸಚಿನ್(49) ಅತಿ ಹೆಚ್ಚು ಶತಕ ಗಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಕ್ಷಣಾ, ಭದ್ರತಾ ಒಪ್ಪಂದ ಬಲವರ್ಧನೆ: ಭಾರತ- ಜರ್ಮನಿ ಮಹತ್ವದ ಕ್ರಮಗಳ ಘೋಷಣೆ!

ಸ್ವಾತಂತ್ರ್ಯ ಬಳಿಕ ಇದೇ ಮೊದಲು: ಮಕರ ಸಂಕ್ರಾಂತಿಗೆ ಮತ್ತೊಂದು ಹೊಸ 'ದಾಖಲೆ'ಗೆ ಸಜ್ಜಾದ ಪ್ರಧಾನಿ ಮೋದಿ!

'ಅಜ್ಮೀರ್' ದರ್ಗಾ ಶಿವ ದೇಗುಲವಾಗಿತ್ತು: ಕೋರ್ಟ್ ಮೆಟ್ಟಿಲೇರಿದ ವಿವಾದ!

'ವಿಬಿ-ಜಿ-ರಾಮ್' ಕಾಯ್ದೆ ವಿರುದ್ಧ ಕಾನೂನು ಸಮರ: ವಿಶೇಷ ಅಧಿವೇಶನ ಕರೆದು ಚರ್ಚೆ- ಸಿಎಂ ಸಿದ್ದರಾಮಯ್ಯ

ಟ್ರಂಪ್ ಗೆ 'ಮರೆಯಲಾಗದ ಪಾಠ' ಕಲಿಸುತ್ತೇವೆ: ಇರಾನ್ ಸಂಸತ್ ಸ್ಪೀಕರ್ ಖಡಕ್ ವಾರ್ನಿಂಗ್!

SCROLL FOR NEXT