ಮನೀಷ್, ರಹಾನೆ, ರಿಷಬ್ ಪಂತ್, ಕೃನಾಲ್ 
ಕ್ರಿಕೆಟ್

ಭಾರತದ ಈ ಐವರು ಆಟಗಾರರು ಟಿ20/ಏಕದಿನ ತಂಡಕ್ಕೆ ಆಯ್ಕೆಯಾಗದ್ದು ದುರಾದುಷ್ಟಕರ!

ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗೆ ಟೀಂ ಇಂಡಿಯಾದ ಈ ಐವರು ಆಟಗಾರರು ಆಯ್ಕೆಯಾಗದಿರುವುದು ದುರಾದುಷ್ಟಕರ...

ನವದೆಹಲಿ: ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗೆ ಟೀಂ ಇಂಡಿಯಾದ ಈ ಐವರು ಆಟಗಾರರು ಆಯ್ಕೆಯಾಗದಿರುವುದು ದುರಾದುಷ್ಟಕರ. 
ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಕನ್ನಡಿಗ ಮನೀಷ್ ಪಾಂಡೆ, ರಿಷಬ್ ಪಂತ್, ಕೃನಾಲ್ ಪಾಂಡ್ಯ, ಅಜಿಂಕ್ಯ ರಹಾನೆ ಮತ್ತು ಮಾಯಾಂಕ್ ಅಗರವಾಲ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. 
ಮನೀಷ್ ಪಾಂಡೆ ಪ್ರಸ್ತುತ ಸನ್ ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದಾರೆ. ಆಡಿರುವ ಎಂಟು ಪಂದ್ಯಗಳಲ್ಲಿ 88.60ರ ಸರಾಸರಿಯಲ್ಲಿ 171 ರನ್ ಗಳಿಸಿದ್ದಾರೆ. ಇನ್ನು ಡೆಲ್ಲಿ ಪರ ಆಡುತ್ತಿರುವ ಯುವ ಆಟಗಾರ ರಿಷಬ್ ಪಂತ್ ಆಡಿರುವ 10 ಪಂದ್ಯಗಳಲ್ಲಿ 173ರ ಸರಾಸರಿಯಲ್ಲಿ 393 ರನ್ ಗಳಿಸಿದ್ದಾರೆ. 
ಆಲ್ರೌಂಡರ್ ಕೃನಾಲ್ ಪಾಂಡೆ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದು 148ರ ಸರಾಸರಿಯಲ್ಲಿ 181 ರನ್ ಬಾರಿಸಿದ್ದು 9 ವಿಕೆಟ್ ಗಳನ್ನು ಪಡೆದಿದ್ದಾರೆ. ಇನ್ನು ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕನಾಗಿರುವ ಅಜಿಂಕ್ಯ ರಹಾನೆ ರಾಜಸ್ತಾನ ರಾಯಲ್ಸ್ ಪರ ಆಡುತ್ತಿದ್ದು 335 ರನ್ ಗಳಿಸಿದ್ದಾರೆ. ಇದೇ ವೇಳೆ ಕರ್ನಾಟಕ ತಂಡದ ರಣಜಿ ಆಟಗಾರ ಮಾಯಾಂಕ್ ಅಗರವಾಲ್ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುತ್ತಿದ್ದು 135ರ ಸರಾಸರಿಯಲ್ಲಿ 118 ರನ್ ಬಾರಿಸಿದ್ದಾರೆ. ಈ ಐವರು ಆಟಗಾರರು ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. 
ಮುಂದಿನ ತಿಂಗಳು ಟೀಂ ಇಂಡಿಯಾ ಐರ್ಲೇಂಡ್ ವಿರುದ್ಧ ಟಿ20 ಸರಣಿ ಮತ್ತು ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಆಡಲಿದ್ದು ನಿನ್ನೆ ಆಯ್ಕೆ ಸಮಿತಿ ಟೀಂ ಇಂಡಿಯಾದ ತಂಡವನ್ನು ಪ್ರಕಟಿಸಿತ್ತು. 
ಐರ್ಲೆಂಡ್‌ ವಿರುದ್ಧದ ಟಿ20 ಸರಣಿಗೆ ಭಾರತ ತಂಡ
1. ವಿರಾಟ್ ಕೊಹ್ಲಿ (ನಾಯಕ)
2. ಶಿಖರ್ ಧವನ್
3. ರೋಹಿತ್ ಶರ್ಮಾ
4. ಕೆಎಲ್ ರಾಹುಲ್
5. ಸುರೇಶ್ ರೈನಾ
6. ಮನೀಶ್ ಪಾಂಡೆ
7.  ಎಂ.ಎಸ್ ಧೋನಿ(ವಿಕೆಟ್ ಕೀಪರ್)
8. ದಿನೇಶ್ ಕಾರ್ತಿಕ್
9. ಯಜುವೇಂದ್ರ ಚಹಾಲ್
10. ಕುಲದೀಪ್ ಯಾದವ್
11. ಉಮೇಶ್ ಯಾದವ್
12. ಹಾರ್ದಿಕ್ ಪಾಂಡ್ಯ
13. ವಾಷಿಂಗ್ಟನ್ ಸುಂದರ್
14. ಜಸ್ ಪ್ರೀತ್ ಬೂಮ್ರ
15. ಸಿದ್ದಾರ್ಥ್ ಕೌಲ್
ಇಂಗ್ಲೆಂಡ್‌ ವಿರುದ್ಧದ ಎರಡು ಪಂದ್ಯಗಳಿಗೆ ಭಾರತ ತಂಡ
1. ವಿರಾಟ್ ಕೊಹ್ಲಿ (ನಾಯಕ), 
2. ಶಿಖರ್ ಧವನ್, 
3. ಕೆಎಲ್ ರಾಹುಲ್, 
4. ಶ್ರೇಯಸ್ ಅಯ್ಯರ್ 
5. ಅಂಬಟಿ ರಾಯುಡು 
6. ಮಹೇಂದ್ರ ಸಿಂಗ್ ಧೋನಿ (ವಿಕೆಟ್ ಕೀಪರ್) 
7. ದಿನೇಶ್ ಕಾರ್ತಿಕ್ 
8. ಯುಜ್ವೇಂದ್ರ ಚಹಲ್ 
9. ಕುಲ್‌ದೀಪ್ ಯಾದವ್ 
10. ವಾಷಿಂಗ್ಟನ್ ಸುಂದರ್ 
11. ಭುವನೇಶ್ವರ್ ಕುಮಾರ್ 
12. ಜಸ್ಪ್ರೀತ್ ಬುಮ್ರಾ 
13. ಹಾರ್ದಿಕ್ ಪಾಂಡ್ಯ 
14. ಸಿದ್ದಾರ್ಥ್ ಕೌಲ್ 
15. ಉಮೇಶ್ ಯಾದವ್ 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT