ಸಂಭ್ರಮದಲ್ಲಿ ಚೆನ್ನೈ ಆಟಗಾರರು
ಮುಂಬೈ: 2018ನೇ ಸಾಲಿನ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೂರನೇ ಬಾರಿಗೆ ಪ್ರಶಸ್ತಿಗೆ ಮುತ್ತಿಟ್ಟಿದೆ.
ಈ ಹಿಂದೆ ಇದೇ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಚೆನ್ನೈ ತಂಡ 2010 ಮತ್ತು 2011ರಲ್ಲಿ ಸತತ 2 ಬಾರಿ ಪ್ರಶಸ್ತಿ ಬಾಚಿತ್ತು. 2010ರಲ್ಲಿ ಮುಂಬೈ ತಂಡದ ವಿರುದ್ಧ ಮತ್ತು 2011ರಲ್ಲಿ ಬೆಂಗಳೂರು ತಂಡದ ವಿರುದ್ಧ ಜಯಿಸಿ ಪ್ರಶಸ್ತಿ ಗಳಿಸಿತ್ತು. ಇದೀಗ ಹೈದರಾಬಾದ್ ತಂಡವನ್ನು 8 ವಿಕೆಟ್ ಗಳಿಂದ ಮಣಿಸಿ ಮೂರನೇ ಬಾರಿಗೆ ಪ್ರಶಸ್ತಿ ಬಾಚಿದೆ.
ಇನ್ನು ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ ಪ್ರಶಸ್ತಿ ಗಳಿಸಿದ ತಂಡದ ಪಟ್ಟಿಯಲ್ಲಿ ಮುಂಬೈ ಅಗ್ರ ಸ್ಥಾನದಲ್ಲಿತ್ತು. 2013, 2015 ಮತ್ತು 2017ರಲ್ಲಿ ಮುಂಬೈ ತಂಡ ಪ್ರಶಸ್ತಿ ಗೆದ್ದುಕೊಂಡಿತ್ತು. ಇದೀಗ ಚೆನ್ನೈ ಕೂಡ 3 ಬಾರಿ ಪ್ರಶಸ್ತಿ ತನ್ನದಾಗಿಸಿಕೊಳ್ಳುವ ಮೂಲಕ ಪಟ್ಟಿಯಲ್ಲಿ ಮುಂಬೈನೊಂದಿಗೆ ಜಂಟಿ ಅಗ್ರ ಸ್ಥಾನಕ್ಕೇರಿದೆ.
ಉಳಿದಂತೆ ಅತೀ ಹೆಚ್ಚು ಐಪಿಎಲ್ ಪ್ರಶಸ್ತಿ ಪಡೆದಿರುವ ತಂಡಗಳ ಪಟ್ಟಿಯಲ್ಲಿ, ಕೋಲ್ಕತಾ ನೈಟ್ ರೈಡರ್ಸ್ ತಂಡ ಎರಡನೇ ಸ್ಥಾನದಲ್ಲಿದ್ದು, ಕೋಲ್ತತಾ 2012 ಮತ್ತು 2014ರಲ್ಲಿ ಪ್ರಶಸ್ತಿ ಪಡೆದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics