ಸಂಗ್ರಹ ಚಿತ್ರ 
ಕ್ರಿಕೆಟ್

ವಿಂಡೀಸ್ ವಿರುದ್ಧ ಭರ್ಜರಿ ಶತಕ; ಸಚಿನ್‌ , ವಾರ್ನರ್‌ ಅಪರೂಪದ ದಾಖಲೆ ಮುರಿದ ರೋ'ಹಿಟ್' ಶರ್ಮಾ!

ರೋಹಿತ್ ಶರ್ಮಾ ಇದೀಗ ತಮ್ಮ ಹೆಸರಿಗೆ ಅಪೂರ್ವ ದಾಖಲೆಯೊಂದನ್ನು ನಿರ್ಮಿಸಿಕೊಂಡಿದ್ದಾರೆ.

ನವದೆಹಲಿ: ಗುವಾಹತಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದ ರೋಹಿತ್ ಶರ್ಮಾ ಇದೀಗ ತಮ್ಮ ಹೆಸರಿಗೆ ಅಪೂರ್ವ ದಾಖಲೆಯೊಂದನ್ನು ನಿರ್ಮಿಸಿಕೊಂಡಿದ್ದಾರೆ.
ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಆಜೇಯ 152 ರನ್ ಸಿಡಿಸಿದ್ದರು. ಅವರ ಈ ಅಮೋಘ ಶತಕದಲ್ಲಿ 15 ಬೌಂಡರಿ ಹಾಗೂ ಭರ್ಜರಿ ಸಿಕ್ಸರ್ ಕೂಡ ಸೇರಿತ್ತು. ಇದೇ ಭರ್ಜರಿ ಶತಕದ ಮೂಲಕ ರೋಹಿತ್ ಶರ್ಮಾ  ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ವಿನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ವಿಂಡೀಸ್ ವಿರುದ್ಧದ ಪಂದ್ಯವೂ ಸೇರಿದಂತೆ ರೋಹಿತ್ ಶರ್ಮಾ ಈ ವರೆಗೂ 6  ಬಾರಿ 150ಕ್ಕೂ ಅಧಿಕ ರನ್ ಗಳನ್ನು ಪೇರಿಸಿದ್ದು, ಆ ಮೂಲಕ ರೋಹಿತ್ ಶರ್ಮಾ ಭಾರತ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಹಾಗೂ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಹೆಸರಲ್ಲಿದ್ದ ಜಂಟಿ ದಾಖಲೆಯನ್ನು ಮುರಿದಿದ್ದಾರೆ. ವಾರ್ನರ್ ಮತ್ತು ಸಚಿನ್ ತಲಾ 5 ಬಾರಿ 150ಕ್ಕೂ ಅಧಿಕ ರನ್ ಪೇರಿಸಿದ್ದರು. ಇದೀಗ ಈ ದಾಖಲೆಯನ್ನು ಹಿಂದಿಕ್ಕುವ ಮೂಲಕ ರೋಹಿತ್ ಶರ್ಮಾ 150ಕ್ಕೂ ಅಧಿಕ ರನ್ ಪೇರಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ.
ಇನ್ನು ಪಟ್ಟಿಯಲ್ಲಿ ವಿಂಡೀಸ್‌ ದೈತ್ಯ ಕ್ರಿಸ್‌ ಗೇಲ್‌, ಶ್ರೀಲಂಕಾದ ಸನತ್‌ ಜಯಸೂರ್ಯ ಹಾಗೂ ದಕ್ಷಿಣ ಆಫ್ರಿಕಾ ತಂಡದ ಹಶೀಮ್‌ ಆಮ್ಲಾ ತಲಾ ನಾಲ್ಕು ಬಾರಿ 150 ಅಧಿಕ ರನ್ ಕಲೆ ಹಾಕಿದ್ದಾರೆ. 
ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ತಮ್ಮ 20ನೇ ಶತಕ ಸಿಡಿಸಿದ ರೋಹಿತ್‌, ನಾಯಕ ವಿರಾಟ್‌ ಕೊಹ್ಲಿರೊಂದಿಗೆ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ರೋಹಿತ್‌ 152 ರನ್‌ ಗಳಿಸಿ ಅಜೇಯರಾಗುಳಿದರು. ಕೊಹ್ಲಿ 140 ರನ್ ಸಿಡಿಸಿ ಔಟಾಗಿದ್ದರು.
ಇನ್ನು ಭಾರತ ಮತ್ತು ವಿಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯವು ಬುಧವಾರ ವಿಶಾಖಪಟ್ಟಣದಲ್ಲಿ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್