ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ಧೋನಿಗೆ ಧೋನಿಯೇ ಸಾಟಿ: ಮತ್ತೆ ಮಾಹಿ ಶರವಗೇದ ದಾಖಲೆ ಸ್ಟಂಪಿಂಗ್ ಗೆ ಪ್ರೇಕ್ಷಕರು ಫಿದಾ!

ಮಹೇಂದ್ರ ಸಿಂಗ್ ಧೋನಿ ಕೇವಲ ಬ್ಯಾಟಿಂಗ್ ಮಾತ್ರವೇ ಅಲ್ಲ, ತಮ್ಮ ಅದ್ಬುತ ವಿಕೆಟ್ ಕೀಪಿಂಗ್ ಕೌಶಲ್ಯದಿಂದಲೂ ಭಾರಿ ಖ್ಯಾತಿ ಗಳಿಸಿದ್ದಾರೆ.

ಧೋನಿ ಸ್ಟಂಪಿಂಗ್
Srinivasa Murthy VN
Updated On : 30 Oct 2018, 11:05 am
ಮುಂಬೈ: ಮಹೇಂದ್ರ ಸಿಂಗ್ ಧೋನಿ ಕೇವಲ ಬ್ಯಾಟಿಂಗ್ ಮಾತ್ರವೇ ಅಲ್ಲ, ತಮ್ಮ ಅದ್ಬುತ ವಿಕೆಟ್ ಕೀಪಿಂಗ್ ಕೌಶಲ್ಯದಿಂದಲೂ ಭಾರಿ ಖ್ಯಾತಿ ಗಳಿಸಿದ್ದಾರೆ. 
ಧೋನಿ ವಿಕೆಟ್ ಕೀಪಿಂಗ್ ಕೌಶಲ್ಯಕ್ಕೆ ಮತ್ತೊಂದು ಸಾಕ್ಷಿ ಎಂಬಂತೆ ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಪ್ರವಾಸಿ ವೆಸ್ಟ್​​ ಇಂಡೀಸ್​ ವಿರುದ್ಧ ಸೋಮವಾರ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಅದ್ಹುತ ರೀತಿಯಲ್ಲಿ ಧೋನಿ ವಿಂಡೀಸ್ ಬ್ಯಾಟ್ಸಮನ್ ಕೀಮೋ ಪೌಲ್ ರನ್ನು ಸ್ಟಂಪಿಂಗ್ ಮೂಲಕ ಪೆವಿಲಿಯನ್ ಗೆ ಅಟ್ಟಿದ್ದಾರೆ. 
ಕೀಮೋ ಪೌಲ್ ರನ್ನು ಧೋನಿ ಕೇವಲ 00.08 ಸೆಕೆಂಡ್ ನಲ್ಲಿ ಸ್ಟಂಪೌಟ್ ಮಾಡಿದ್ದು, ಆ ಮೂಲಕ ಮತ್ತೆ ಧೋನಿ ಸ್ಟಂಪಿಂಗ್ ನಲ್ಲಿ ತಾವೇ ಚಾಂಪಿಯನ್ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಆ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಸ್ಟಂಪೌಟ್ ಮಾಡಿದ ಆಟಗಾರ ಎಂಬ ಕೀರ್ತಿಗೂ ಮಾಹಿ ಭಾಜನರಾಗಿದ್ದಾರೆ. ಈ ಹಿಂದೆ ಇದೇ ಮಾಹಿ 00.0 ಸೆಕೆಂಡ್ ನಲ್ಲಿ ಸ್ಟಂಪೌಟ್ ಮಾಡಿ ದಾಖಲೆ ಬರೆದಿದ್ದರು. ಇದೀಗ ತಮ್ಮದೇ ದಾಖಲೆಯನ್ನು ಮತ್ತಷ್ಟು ಉತ್ತಮ ಪಡಿಸಿಕೊಂಡಿದ್ದಾರೆ.

Advertisement

Advertisement

ರವೀಂದ್ರ ಜಡೇಜಾ ಅವರು ಎಸೆದ 28ನೇ ಓವರ್ ​ನಲ್ಲಿ ಕೆರೆಬಿಯನ್​ ಆಟಗಾರ ಕೀಮೋ ಪೌಲ್​​ ರಕ್ಷಣಾತ್ಮಕ ಆಟವಾಡಲು ಮುಂದಾದಾಗ ಬ್ಯಾಟ್​ ನಿಂದ ತಪ್ಪಿಸಿಕೊಂಡ ಬಾಲ್​ ಧೋನಿ ಕೈಗೆ ತಲುಪಿದೆ. ಪೌಲ್​ ಹಿಂದೆ ತಿರುಗುವಷ್ಟರಲ್ಲಿಯೇ ಧೋನಿ ಸ್ಟಂಪ್​ ಮಾಡಿದ್ದನ್ನು ಕಂಡು ಸ್ವತಃ ಪೌಲ್​ ಅಂಪೈರ್​ ತೀರ್ಮಾನಕ್ಕಾಗಿ ಕಾಯದೆ ಪೆವಿಲಿಯನ್​​ ಕಡೆ ಮುಖ ಮಾಡಿದರು.​ ಈ ಅದ್ಬುತ ಸ್ಟಂಪಿಂಗ್ ಗೆ ಧೋನಿ ತೆಗೆದುಕೊಂಡಿದ್ದು ಕೇವಲ 00.08 ಸೆಕೆಂಡ್ ಗಳು ಮಾತ್ರ. ಆ ಮೂಲಕ ಧೋನಿ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಏನೆಂಬುದನ್ನು ಸಾಬೀತು ಮಾಡಿದ್ದಾರೆ.
ಏಕದಿನ ಇತಿಹಾಸದಲ್ಲಿ ಅತೀ ಹೆಚ್ಚು ಅಂದರೆ 115 ಸ್ಟಂಪ್​ ಮಾಡಿದ ಕೀರ್ತಿ ಮಿಸ್ಟರ್ ಕೂಲ್​ ಧೋನಿ ಅವರ ಪಾಲಾಗಿದ್ದು, ಬಳಿಕದ ಸ್ಥಾನದಲ್ಲಿ 99 ಸ್ಟಂಪಿಂಗ್ ನೊಂದಿಗೆ ಶ್ರೀಲಂಕಾದ ಕುಮಾರ ಸಂಗಕ್ಕಾರ ಇದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement