ಕ್ರಿಕೆಟ್

ಅಡಿಲೇಡ್ ನಲ್ಲಿ ದಾಖಲೆ ಬರೆದ ಭಾರತ, 36 ವರ್ಷಗಳ ಹಳೆಯ ದಾಖಲೆ ಪತನ

Srinivasamurthy VN
ಅಡಿಲೇಡ್: ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ ಬೃಹತ್ ಮೊತ್ತವನ್ನು ಬೆನ್ನು ಹತ್ತಿ ಜಯಭೇರಿ ಭಾರಿಸಿದೆ. ಅಂತೆಯೇ ಈ ಕ್ರೀಡಾಂಗಣದಲ್ಲಿ ಗರಿಷ್ಠ ರನ್ ಗುರಿಯನ್ನು ಬೆನ್ನು ಹತ್ತಿ ಯಶಸ್ವಿಯಾಗೆ ಗೆದ್ದ ಎರಡನೇ ತಂಡ ಎಂಬ ಕೀರ್ತಿಗೂ ಭಾರತ ಭಾಜನವಾಗಿದೆ.
ಹೌದು.. ಇಂದು ಆಸಿಸ್ ನೀಡಿದ್ದ 299 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ ಕೇವಲ ನಾಲ್ಕು ವಿಕೆಟ್ ಕಳೆದುಕೊಂಡು ಅಂತಿಮ ಓವರ್ ನಲ್ಲಿ ಜಯಭೇರಿ ಭಾರಿಸಿತು. ಮಹೇಂದ್ರ ಸಿಂಗ್ ಧೋನಿ ತಮ್ಮ ಹಳೆಯ ಶೈಲಿಯಲ್ಲಿ ಸಿಕ್ಸರ್ ಸಿಡಿಸುವ ಮೂಲಕ ತಾವೊಬ್ಬ ಅತ್ಯುತ್ತಮ ಮ್ಯಾಚ್ ಫಿನಿಷರ್ ಎಂಬುದನ್ನು ಮತ್ತೆ ಸಾಬೀತು ಮಾಡಿದರು.
ಅಂತೆಯೇ ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ಭಾರತ ತಂಡ ದಾಖಲೆಯೊಂದನ್ನು ನಿರ್ಮಿಸಿದ್ದು, ಅಡಿಲೇಡ್ ನಲ್ಲಿ ತಂಡವೊಂದರ ಎರಡನೇ ಗರಿಷ್ಠ ರನ್ ಚೇಸ್ ಇದಾಗಿದೆ. ಈ ಹಿಂದೆ 1983ರಲ್ಲಿ ಇದೇ ಆಸ್ಟ್ರೇಲಿಯಾ ತಂಡದ ವಿರುದ್ಧ ನ್ಯೂಜಿಲೆಂಡ್ ತಂಡ 297 ರನ್ ಗಳ ಗುರಿಯನ್ನು ಯಶಸ್ವಿಯಾಗಿ ಗುರಿ ಮುಟ್ಟಿತ್ತು. ಇದು ಅಡಿಲೇಡ್ ಕ್ರೀಡಾಂಗಣದಲ್ಲಿ ದಾಖಲಾದ ಎರಡನೇ ಗರಿಷ್ಠ ರನ್ ಚೇಸ್ ಪಂದ್ಯವಾಗಿತ್ತು. ಇದೀಗ ಈ ದಾಖಲೆಯನ್ನು ಭಾರತ ಮುರಿದಿದೆ.
ಇದಾದ ಬಳಿಕ ಅಂದರೆ 1999ರಲ್ಲಿ ಇಂಗ್ಲೆಂಡ್ ವಿರುದ್ಧ ಇದೇ ಮೈದಾನದಲ್ಲಿ ಶ್ರೀಲಂಕಾ ತಂಡ 303 ರನ್ ಗಳ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿತ್ತು. ಇದು ಈ ವರೆಗಿನ ಗರಿಷ್ಠ ರನ್ ಚೇಸ್ ಎಂಬ ದಾಖಲೆಯಾಗಿದೆ.
SCROLL FOR NEXT