ಅಡಿಲೇಡ್: ಟೀಂ ಇಂಡಿಯಾದ ಬೆಸ್ಟ್ ಮ್ಯಾಚ್ ಫಿನಿಷರ್ ಎಂಬ ಖ್ಯಾತಿ ಗಳಿಸಿರುವ ಮಾಜಿ ನಾಯಕ ಎಂಎಸ್ ಧೋನಿ ಟೀಕಾಕಾರರಿಗೆ ತಮ್ಮ ಬ್ಯಾಟ್ ನಿಂದಲೇ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ.
ಮೊದಲ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ಮೂಲಕ ಕ್ರೀಡಾ ವಲಯದಲ್ಲಿ ವ್ಯಾಪಕ ಆಕ್ರೋಶ ಎದುರಿಸಿದ್ದ ಧೋನಿ ಇದೀಗ ಅಡಿಲೇಡ್ ನಲ್ಲಿ ನಡೆದ 2ನೇ ಪಂದ್ಯದಲ್ಲಿ ಸ್ಫೋಟಕ ಆಟವಾಡುವ ಮೂಲಕ ತಿರುಗೇಟು ನೀಡಿದ್ದಾರೆ. ಅಡಿಲೇಡ್ ನಲ್ಲಿ ಇಂದು ನಡೆದ 2ನೇ ಏಕದಿನ ಪಂದ್ಯದಲ್ಲಿ ಧೋನಿ 54 ಎಸೆತಗಳಲ್ಲಿ ಅಜೇಯ 55 ರನ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು. ಅಂತಿಮ ಓವರ್ ಗಳಲ್ಲಿ ನಿಜಕ್ಕೂ ಧೋನಿ ಬ್ಯಾಟಿಂಗ್ ನಿಂದಾಗಿಯೇ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿತ್ತು. ಬಳಿಕ ಅಂತಿಮ ಓವರ್ ನಲ್ಲಿ ಭಾರತಕ್ಕೆ ಗೆಲ್ಲಲು 7 ರನ್ ಗಳ ಅವಶ್ಯಕತೆ ಇದ್ದಾಗ ಧೋನಿ ಅಂತಿಮ ಓವರ್ ನ ಮೊದಲ ಎಸೆತವನ್ನೇ ಸಿಕ್ಸರ್ ಗೆ ಅಟ್ಟಿದರು.
ಆ ಮೂಲಕ ಭಾರತ ತಂಡದ ಗೆಲುವನ್ನು ಸ್ಪಷ್ಟಪಡಿಸಿದ್ದರು. ನಂತರದ ಎಸೆತದಲ್ಲಿ 1 ರನ್ ಗಳಿಸಿ ತಂಡಕ್ಕೆ ಗೆಲುವು ತಂದಿತ್ತರು. ಇನ್ನು ಅಂತಿಮ ಓವರ್ ನಲ್ಲಿ ಧೋನಿ ಸಿಡಿಸಿದ ಸಿಕ್ಸರ್ ಅವರ ಹಳೆಯ ದಿನಗಳನ್ನು ನೆನಪಿಸಿತು.
ಈ ಮೂಲಕ ಮೊದಲ ಪಂದ್ಯದ ನಿಧಾನಗತಿಯ ಬ್ಯಾಟಿಂಗ್ ಗೆ ಎದುರಾಗಿದ್ದ ವ್ಯಾಪಕ ಟೀಕೆ ಎದುರಿಸಿದ್ದ ಧೋನಿ ಬ್ಯಾಟ್ ನಿಂದಲೇ ಉತ್ತರ ನೀಡಿದರು. ಆದರೆ ಕ್ರಿಕೆಟ್ ಪಂಡಿತರ ವಿಶ್ಲೇಷಣೆಯ ಅನ್ವಯ ಮೊದಲ ಪಂದ್ಯದಲ್ಲಿ ಭಾರತ ತಂಡ ಕೇವಲ 4 ರನ್ ಗಳಿಗೆ 3 ಪ್ರಮುಖ ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿತ್ತು, ಈ ಹೊತ್ತಿನಲ್ಲಿ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲುವ ಆಟಗಾರನ ಅವಶ್ಯಕತೆ ಇತ್ತು. ಈ ಜವಾಬ್ದಾರಿಯನ್ನು ಧೋನಿ ಹೊತ್ತಿದ್ದರು. ಆದರೆ ಅವರ ಈ ಆಟವೇ ಟೀಕಾಕಾರರಿಗೆ ಆಹಾರವಾಗಿತ್ತು, ಬಹುಶಃ ಅಂದು ಧೋನಿ ಸ್ಥಾನದಲ್ಲಿ ಭಾರತ ತಂಡದ ಸವ್ಯಸಾಚಿ ಆಟಗಾರ ರಾಹುಲ್ ದ್ರಾವಿಡ್ ಇದ್ದಿದ್ದರೆ ಇಂತಹ ಟೀಕೆಗಳು ವ್ಯಕ್ತವಾಗುತ್ತಿರಲಿಲ್ಲವೇನೋ.. ಆದರೆ ಧೋನಿ ಎಂಬ ಕಾರಣಕ್ಕೆ ಟೀಕೆಗಳ ಸುರಿಮಳೆಯಾಗಿದೆ. ಆದರೆ ಅಂದು ಧೋನಿ ತಂಡದ ಮಧ್ಯಮ ಕ್ರಮಾಂಕದ ಕುಸಿತ ತಡೆಯುವ ಜವಾಬ್ದಾರಿಯನ್ನು ಹೊತ್ತಿದ್ದರು. ಇದೇ ಕಾರಣಕ್ಕೆ ತಮ್ಮದಲ್ಲದ ರೀತಿಯ ಆಟದ ಮೊರೆ ಹೋಗಿ ಆಕ್ರೋಶ ಮತ್ತು ಟೀಕೆಗಳಿಗೆ ತುತ್ತಾಗಿದ್ದಾರೆ.
ಆದರೆ ಇದೀಗ ಧೋನಿ ತಮ್ಮದೇ ಶೈಲಿಯಲ್ಲಿ ಕಮ್ ಬ್ಯಾಕ್ ಮಾಡಿದ್ದು, ತಮ್ಮ ಬ್ಯಾಟ್ ನಿಂದಲೇ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ಒಟ್ಟಾರೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ತಂಡ 1-1 ರಲ್ಲಿ ಸಮಬಲ ಸಾಧಿಸಿದ್ದು, ಇದೇ ಶುಕ್ರವಾರ ಅಂದರೆ ಜನವರಿ 18 ರಂದು ಮೆಲ್ಬೋರ್ನ್ ನಲ್ಲಿ ನಡೆಯಲಿರುವ ಅಂತಿಮ ಏಕದಿನ ಪಂದ್ಯದಲ್ಲಿ ಗೆದ್ದವರಿಗೆ ಏಕದಿನ ಸರಣಿ ಕೈವಶವಾಗಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos