ವಿಶ್ವದಲ್ಲೇ ಅತೀ ಹೆಚ್ಚು ಸಿಕ್ಸರ್ ಬಾರಿಸಿರುವ ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಅವರಿಗೆ ಎಡಗೈ ಬ್ಯಾಟ್ಸ್ ಮನ್ ರೈಟ್ ಹ್ಯಾಂಡ್ನಲ್ಲಿ ನಿಂತು ಸಿಕ್ಸರ್ ಸಿಡಿಸಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.
ಬಾಂಗ್ಲಾದೇಶ ಪ್ರೀಮಿಯರ್ ಲೀಗ್(ಬಿಪಿಎಲ್) ಪಂದ್ಯಾವಳಿಯ ಸಿಲ್ ಹೆಟ್ ಸಿಕ್ಸರ್ಸ್ ಹಾಗೂ ರಾಗ್ ಪುರ್ ರೈಡರ್ಸ್ ನಡುವಿನ ಪಂದ್ಯದಲ್ಲಿ ಸಿಲ್ ಹೆಟ್ ತಂಡದ ನಾಯಕ ಡೇವಿಡ್ ವಾರ್ನರ್ ಅಜೇಯ 61 ರನ್ ಸಿಡಿಸಿ ಭರ್ಜರಿ ಬ್ಯಾಟಿಂಗ್ ಮಾಡಿದರು.
ಎಡಗೈ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಅವರು ಸಿಕ್ಸರ್ ಸಿಡಿಸುವಲ್ಲಿ ವಿಫಲವಾಗಿದ್ದರು. ಬಳಿಕ ಬಲಗಡೆ ನಿಂತ ವಾರ್ನರ್ ನಂತರದ ಎಸೆತದಲ್ಲೇ ಸಿಕ್ಸರ್ ಬಾರಿಸಿದ್ದರು. ಈ ವಿಡಿಯೋ ಇದೀಗ ವೈರಲ್ ಆಗಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಸಿಲ್ ಹೆಟ್ ನಿಗದಿತ ಓವರ್ ನಲ್ಲಿ 187 ರನ್ ಸಿಡಿಸಿದ್ದು 188 ರನ್ ಗಳ ಗುರಿ ಬೆನ್ನಟ್ಟಿದ ರಾಂಗ್ ಪುರ್ ರೈಡರ್ಸ್ ತಂಡ ನಿಗದಿತ ಓವರ್ ನಲ್ಲಿ 6 ವಿಕೆಟ್ ಕಳೆದುಕೊಂಡು 160 ರನ್ ಪೇರಿಸಿದ್ದು 27 ರನ್ ಗಳಿಂದ ಸೋಲು ಕಂಡಿದೆ.