ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ಕೊಹ್ಲಿ ಹ್ಯಾಟ್ರಿಕ್ ಸಾಧನೆ: ಐಸಿಸಿ ವರ್ಷದ ಏಕದಿನ ಮತ್ತು ಟೆಸ್ಟ್ ತಂಡಕ್ಕೆ ಕೊಹ್ಲಿ ನಾಯಕ!

ವರ್ಷದ ಪುರುಷರ ಟೆಸ್ಟ್ ಮತ್ತು ಏಕದಿನ ತಂಡಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ನಾಯಕನನ್ನಾಗಿ ಆಯ್ಕೆ ಮಾಡಿದ್ದು...

ವಿರಾಟ್ ಕೊಹ್ಲಿ
Vishwanath S
Updated On : 22 Jan 2019, 12:56 pm
ವರ್ಷದ ಪುರುಷರ ಟೆಸ್ಟ್ ಮತ್ತು ಏಕದಿನ ತಂಡಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ನಾಯಕನನ್ನಾಗಿ ಆಯ್ಕೆ ಮಾಡಿದ್ದು ಕೊಹ್ಲಿ ನಾಯಕತ್ವದ ಯಾವ ಯಾವ ಆಟಗಾರರು ಆಡಲಿದ್ದಾರೆ ಎಂಬ ಪಟ್ಟಿ ಇಲ್ಲಿದೆ.
ಕ್ರಿಕೆಟ್ ವರ್ಷದ ವ್ಯಕ್ತಿ ಎಂಬ ಗೌರವಕ್ಕೆ ವಿರಾಟ್ ಕೊಹ್ಲಿ ಆಯ್ಕೆಯಾಗಿದ್ದು ಸತತ ಮೂರನೇ ಬಾರಿಗೆ ಈ ಪ್ರಶಸ್ತಿ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಐಸಿಸಿ ಟೆಸ್ಟ್ ಮತ್ತು ಏಕದಿನ ತಂಡಕ್ಕೆ ನಾಯಕನಾಗುವ ಮೂಲಕ ದಾಖಲೆ ಬರೆದಿದ್ದಾರೆ. 
ವಿರಾಟ್ ಕೊಹ್ಲಿ 13 ಟೆಸ್ಟ್ ಪಂದ್ಯಗಳಲ್ಲಿ 55.08ರ ಸರಾಸರಿಯಲ್ಲಿ 5 ಶತಕ ಸೇರಿದಂತೆ 1,322 ರನ್ ಸಿಡಿಸಿದ್ದರು. ಇನ್ನು 14 ಏಕದಿನ ಪಂದ್ಯಗಳ ಪೈಕಿ 133.55 ಸರಾಸರಿಯಲ್ಲಿ 6 ಶತಕ ಸೇರಿದಂತೆ 1,202 ರನ್ ಪೇರಿಸಿದ್ದು ಈ ಹಿನ್ನೆಲೆಯಲ್ಲಿ ಅವರನ್ನು ಐಸಿಸಿ ನಾಯಕನ್ನಾಗಿ ಆಯ್ಕೆ ಮಾಡಿದೆ. 

Advertisement

Advertisement

ಐಸಿಸಿ ವರ್ಷದ ಪುರುಷರ ಟೆಸ್ಟ್ ತಂಡ
ಟಾಮ್ ಲ್ಯಾಥಮ್ (ನ್ಯೂಜಿಲ್ಯಾಂಡ್)
ದಿಮುತ್ ಕರುಣರತ್ನೆ(ಶ್ರೀಲಂಕಾ)
ಕೇನ್ ವಿಲಿಯಮ್ ಸನ್(ನ್ಯೂಜಿಲ್ಯಾಂಡ್)
ವಿರಾಟ್ ಕೊಹ್ಲಿ (ಟೀಂ ಇಂಡಿಯಾ) (ನಾಯಕ)
ಹೆನ್ರಿ ನಿಕೋಲ್ಸ್ (ನ್ಯೂಜಿಲ್ಯಾಂಡ್)
ರಿಷಬ್ ಪಂತ್ (ಟೀಂ ಇಂಡಿಯಾ) (ವಿಕೆಟ್ ಕೀಪರ್)
ಜೋಸನ್ ಹೊಲ್ಡರ್(ವೆಸ್ಟ್ ಇಂಡೀಸ್)
ಕಿಗಾಸೋ ರಬಾಡ(ದಕ್ಷಿಣ ಆಫ್ರಿಕಾ)
ನಾಥನ್ ಲಿಯಾನ್(ಆಸ್ಟ್ರೇಲಿಯಾ)
ಜಸ್ ಪ್ರೀತ್ ಬುಮ್ರಾ (ಟೀಂ ಇಂಡಿಯಾ)
ಮೊಹಮ್ಮದ್ ಅಬ್ಬಾಸ್(ಪಾಕಿಸ್ತಾನ)
ಐಸಿಸಿ ವರ್ಷದ ಪುರುಷರ ಏಕದಿನ ತಂಡ
ರೋಹಿತ್ ಶರ್ಮಾ (ಟೀಂ ಇಂಡಿಯಾ)
ಜಾನಿ ಬೈರ್ಸ್ಟೋವ್(ಇಂಗ್ಲೆಂಡ್)
ವಿರಾಟ್ ಕೊಹ್ಲಿ (ಟೀಂ ಇಂಡಿಯಾ) (ನಾಯಕ)
ಜೋಸ್ ರೂಟ್(ಇಂಗ್ಲೆಂಡ್)
ರಾಸ್ ಟೇಲರ್(ನ್ಯೂಜಿಲ್ಯಾಂಡ್)
ಜೋಸ್ ಬಟ್ಲರ್(ಇಂಗ್ಲೆಂಡ್)(ವಿಕೆಟ್ ಕೀಪರ್)
ಬೆನ್ ಸ್ಟೋಕ್ಸ್(ಇಂಗ್ಲೆಂಡ್)
ಮುಸ್ತಾಫಿಝೂರ್ ರಹಮಾನ್(ಬಾಂಗ್ಲಾದೇಶ)
ರಶೀದ್ ಖಾನ್(ಆಫ್ಗಾನಿಸ್ತಾನ್)
ಕುಲದೀಪ್ ಯಾದವ್(ಟೀಂ ಇಂಡಿಯಾ)
ಜಸ್ ಪ್ರೀತ್ ಬುಮ್ರಾ (ಟೀಂ ಇಂಡಿಯಾ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement