ಟೀಂ ಇಂಡಿಯಾ ನಿರಾಯಸವಾಗಿ ಗೆಲ್ಲುವ ಪಂದ್ಯಕ್ಕೆ ತಾತ್ಕಾಲಿಕ ತಡೆಯಾಗಿದ್ದೇಕೆ?
ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ ಕೇವಲ 114 ರನ್ ಗಳು ಬಾಕಿಯಿದ್ದು ಈ ಮಧ್ಯೆ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ.
ನೇಪಿಯರ್: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ ಕೇವಲ 114 ರನ್ ಗಳು ಬಾಕಿಯಿದ್ದು ಈ ಮಧ್ಯೆ ಪಂದ್ಯಕ್ಕೆ ತಾತ್ಕಾಲಿಕ ತಡೆಹಾಕಲಾಗಿದೆ.
ನ್ಯೂಜಿಲ್ಯಾಂಡ್ ವಿರುದ್ಧ ನೇಪಿಯರ್ ನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ್ದ ನ್ಯೂಜಿಲ್ಯಾಂಡ್ ತಂಡ 157 ರನ್ ಗಳಿಗೆ ಆಲೌಟ್ ಆಗಿತ್ತು. 158 ರನ್ ಗಳ ಗುರಿ ಬೆನ್ನಟ್ಟಿದ್ದ ಟೀಂ ಇಂಡಿಯಾಗೆ 40 ಓವರ್ ನಲ್ಲಿ 114 ರನ್ ಪೇರಿಸಬೇಕಿತ್ತು. ಆದರೆ ಸೂರ್ಯನ ಪ್ರಖರ ಕಿರಣಗಳ ಕಾರಣ ಪಂದ್ಯವನ್ನು ಪಂದ್ಯಕ್ಕೆ ತಾತ್ಕಾಲಿಕ ತಡೆಹಾಕಲಾಗಿದೆ.
ಸದ್ಯ ಟೀಂ ಇಂಡಿಯಾ ಪರ ಶಿಖರ್ ಧವನ್ ಅಜೇಯ 30 ಹಾಗೂ ವಿರಾಟ್ ಕೊಹ್ಲಿ 3 ರನ್ ಗಳಿಸಿದ್ದಾರೆ.