ಕ್ರಿಕೆಟ್

ಇಂಗ್ಲೆಂಡ್ ವಿರುದ್ಧ ಗೆಲ್ಲಲು ಭಾರತ ಸಾಕಷ್ಟು ಪ್ರಯತ್ನಿಸಲಿಲ್ಲ- ಹರ್ಷ ಭೋಗ್ಲೆ

Nagaraja AB
ನವದೆಹಲಿ: ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಇಂಗ್ಲೆಂಡ್ ವಿರುದ್ಧದ ಪಂದ್ಯ ಗೆಲ್ಲಲು ಕೊನೆಯಲ್ಲಿ ಭಾರತ ಸಾಕಷ್ಟು ಪ್ರಯತ್ನ ನಡೆಸಲಿಲ್ಲ ಎಂದು ಭಾರತದ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಹೇಳಿದ್ದಾರೆ. 
ರಿಷಭ್ ಪಂತ್ ಹಾಗೂ ಹಾರ್ಧಿಕ್ ಪಾಂಡ್ಯ ಆಡುವವರೆಗೂ  ಭಾರತ ಗೆಲ್ಲಲು ಪ್ರಯತ್ನಿಸುತ್ತಿದೆ ಅನಿಸಿತು ತದನಂತರ ಇದ್ದಕ್ಕಿದ್ದಂತೆ ಎಲ್ಲರೂ ಒಬ್ಬರನೊಬ್ಬರು ನೋಡಿಕೊಳ್ಳುತ್ತಿದ್ದಾರೆ. ಪಂದ್ಯ ಗೆಲ್ಲಲು ಕೊನೆಯಲ್ಲಿ ಟೀಂ ಇಂಡಿಯಾ ಸಾಕಷ್ಟು ಪ್ರಯತ್ನ ನಡೆಸಲಿಲ್ಲ ಎಂದಿರುವ ಭೋಗ್ಲೆ ಹೇಳಿಕೆಯನ್ನು  ವಿಶ್ವಕಪ್ ಕ್ರಿಕೆಟ್ ಅಧಿಕೃತ ವೆಬ್ ಸೈಟ್ ನಲ್ಲಿ  ಪೋಸ್ಟ್ ಮಾಡಲಾಗಿದೆ. 
ಭಾರತ  11 ಓವರ್ ಗಳಲ್ಲಿ 112 ರನ್ ಗಳಿಸಬೇಕಾದಾಗ ಭಾರತೀಯರ ಕೈಯಲ್ಲಿ  ಏಳು ವಿಕೆಟ್ ಗಳಿದ್ದವು. ಆದಾಗ್ಯೂ, 40 ನೇ ಓವರ್ ನಲ್ಲಿ ರಿಷಬ್ ಪಂತ್  32 ರನ್ ಗಳಿಗೆ ಔಟಾದರೆ, ತದನಂತರ ಹಾರ್ದಿಕ್ ಪಾಂಡ್ಯ  45 ರನ್ ಗಳಿಸಿ ಫೆವಿಲಿಯನ್ ಸೇರಿದರು. ನಂತರ ಬಂದ ಎಂ.ಎಸ್. ಧೋನಿ ,ಕೇದಾರ್ ಆಕ್ರಮಣಕಾರಿ ಆಟವಾಡಲಿಲ್ಲ ಪರಿಣಾಮದಿಂದಾಗಿ ಭಾರತ ಟೂರ್ನಿಯಲ್ಲಿ ಮೊದಲ ಸೋಲನ್ನುಭವಿಸಬೇಕಾಯಿತು ಎಂದಿದ್ದಾರೆ.
ಪಂದ್ಯ ಸೋತರೂ ರೋಹಿತ್ ಶರ್ಮಾ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರ ಕ್ರಮವಾಗಿ 102, 66 ರನ್ ಗಳ ಬಗ್ಗೆ ಭೋಗ್ಲೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಧಾನಗತಿಯಲ್ಲಿ ಆಟ ಆರಂಭಿಸಿದ್ದರೂ ನಂತರ ಇವರಿಬ್ಬರೂ ಬಹಳ ಚೆನ್ನಾಗಿ ಆಟ ಆಡಿದರು ಎಂದು ಭೋಗ್ಲೆ ಹೇಳಿದ್ದಾರೆ. ಜುಲೈ 2 ರಂದು ಬಾಂಗ್ಲಾದೇಶವನ್ನು ಭಾರತ ಸೆಣಸಲಿದೆ. 
SCROLL FOR NEXT