ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರಿಕೆಟ್

ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತದ ಗೆಲುವಿಗೆ ಮೂರು ದೇಶಗಳ ಪ್ರಾರ್ಥನೆ!

ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು ಮಹತ್ವದ ಪಂದ್ಯವೊಂದು ನಡೆಯುತ್ತಿದ್ದು, ಭಾರತ ಮತ್ತು ಇಂಗ್ಲೆಂಡ್ ತಂಡಗಳು ಪರಸ್ಪರ ಮುಖಾಮುಖಿಯಾಗಿವೆ. ಆದರೆ ಇಲ್ಲಿ ಭಾರತ ತಂಡದ ಗೆಲುವು ಟೀಂ ಇಂಡಿಯಾಗಿಂತ ಇತರೆ ಮೂರು ತಂಡಗಳಿಗೆ ಅತ್ಯಂತ ಮಹತ್ವದ್ದಾಗಿದೆ.

ಸಂಗ್ರಹ ಚಿತ್ರ
Srinivasa Murthy VN
Updated On : 30 Jun 2019, 9:14 am
ಲಂಡನ್: ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂದು ಮಹತ್ವದ ಪಂದ್ಯವೊಂದು ನಡೆಯುತ್ತಿದ್ದು, ಭಾರತ ಮತ್ತು ಇಂಗ್ಲೆಂಡ್ ತಂಡಗಳು ಪರಸ್ಪರ ಮುಖಾಮುಖಿಯಾಗಿವೆ. ಆದರೆ ಇಲ್ಲಿ ಭಾರತ ತಂಡದ ಗೆಲುವು ಟೀಂ ಇಂಡಿಯಾಗಿಂತ ಇತರೆ ಮೂರು ತಂಡಗಳಿಗೆ ಅತ್ಯಂತ ಮಹತ್ವದ್ದಾಗಿದೆ.
ಹೌದು.. ಇಂದು ಭಾರತ ತಂಡ ಇಂಗ್ಲೆಂಡ್ ತಂಡವನ್ನು ಮಣಿಸಲಿ ಎಂದು ಬರೊಬ್ಬರಿ ಮೂರು ರಾಷ್ಟ್ರಗಳ ತಂಡಗಳು ಮತ್ತು ಅವರ ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ. ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ, ಭಾರತದ ನೆರೆಯ ದೇಶಗಳಾದ ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳು ಭಾರತದ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿವೆ.
ಹಾಲಿ ವಿಶ್ವಕಪ್ ಟೂರ್ನಿ ಇದೀಗ ನಿರ್ಣಾಯಕ ಹಂತ ತಲುಪಿದ್ದು, ಈಗಾಗಲೇ ಆಸ್ಟ್ರೇಲಿಯಾ ತಂಡ ಸೆಮೀಸ್ ನಲ್ಲಿ ತನ್ನ ಸ್ಥಾನ ಭದ್ರ ಪಡಿಸಿಕೊಂಡಿದ್ದು, ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ಸೆಮೀಸ್ ಪ್ರವೇಶ ಬಹುತೇಕ ಖಚಿತವಾಗಿದೆ. ಆದರೆ ಉಳಿದ ನಾಲ್ತನೇ ತಂಡಕ್ಕಾಗಿ ನಾಲ್ಕು ತಂಡಗಳ ನಡುವೆ ತೀವ್ರ ಪೈಪೋಟಿ ಎದುರಾಗಿದ್ದು, ಇಂಗ್ಲೆಂಡ್, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ನಾಲ್ಕನೇ ಸ್ಥಾನಕ್ಕಾಗಿ ಅದೃಷ್ಟ ಪರೀಕ್ಷೆಗೆ ನಿಂತಿವೆ.

Advertisement

Advertisement

ಇಂಗ್ಲೆಂಡ್ ಪಾಲಿಗೆ ಇಂದಿನ ಪಂದ್ಯ ಅತ್ಯಂತ ಮಹತ್ವದ್ದಾಗಿದ್ದು, ಇಂದಿನ ಪಂದ್ಯ ಗೆದ್ದರೆ ಮಾತ್ರ ಸೆಮೀಸ್ ನಲ್ಲಿ ಸ್ಥಾನ ಖಚಿತವಾಗಲಿದೆ. ಒಂದು ವೇಳೆ ಸೋತರೆ ಪಾಕಿಸ್ತಾನಕ್ಕೆ ಆ ಅವಕಾಶ ಲಭಿಸುವ ಸಾಧ್ಯತೆ ಇದೆ. ಪಾಕಿಸ್ತಾನ ಮಾತ್ರವಲ್ಲದೇ ಸೆಮೀಸ್ ರೇಸ್ ನಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಕೂಡ ಇವೆ. ಪಾಕಿಸ್ತಾನ ತಂಡ ತಾನಾಡಿರುವ 8 ಪಂದ್ಯಗಳ ಪೈಕಿ 4 ಪಂದ್ಯ ಗೆದ್ದು 8 ಅಂಕಗಳನ್ನು ಹೊಂದಿದೆ. ಅಂತೆಯೇ ಬಾಂಗ್ಲಾದೇಶ ತಂಡ  ಪಂದ್ಯಗಳನ್ನಾಡಿ 3ರಲ್ಲಿ ಗೆದ್ದು 8 ಅಂಕ ಪಡೆದಿದೆ. ಇನ್ನು ಶ್ರೀಲಂಕಾ ತಂಡ 7 ಪಂದ್ಯಗಳನ್ನಾಡಿ 2 ಪಂದ್ಯ ಗೆದ್ದು 6 ಅಂಕಗಳನ್ನು ಹೊಂದಿದೆ. ಈ ಪೈಕಿ ಶ್ರೀಲಂಕಾ ತಂಡದ ಸೆಮೀಸ್ ಆಸೆ ಕ್ಷೀಣ ಎನ್ನಬಹುದು. ಲಂಕಾ ಬಳಿ ಇನ್ನೂ ಒಂದು ಪಂದ್ಯವಿದ್ದು, ಆ ಪಂದ್ಯವನ್ನು ಗೆದ್ದರೆ ಲಂಕಾದ ಅಂಕಗಳಿಕೆ 8ಕ್ಕೆರುತ್ತದೆ. ಆದರೆ ಬಾಂಗ್ಲಾದೇಶ ಕೂಡ ಒಂದು ಪಂದ್ಯವನ್ನಾಡಲಿದ್ದು, ಆ ಪಂದ್ಯ ಗೆದ್ದರೆ ಬಾಂಗ್ಲಾ ಅಂಕ ಗಳಿಕೆ 9ಕ್ಕೆ ಏರಿಕೆಯಾಗಿ ಆ ತಂಡಕ್ಕೆ ಅವಕಾಶದ ಬಾಗಿಲು ತೆರೆಯುತ್ತದೆ.
ಒಟ್ಟಾರೆ ಇಂದಿನ ಪಂದ್ಯ ಭಾರತಕ್ಕೆ ಅಷ್ಟೇನೂ ಮಹತ್ವದಲ್ಲದೇ ಹೋದರೂ ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಅತ್ಯಂತ ಮುಖ್ಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement