ಮಿಥಾಲಿ ರಾಜ್‌ 
ಕ್ರಿಕೆಟ್

ಮಹಿಳಾ ಕ್ರಿಕೆಟ್: ಮ್ಯಾಜಿಕ್ ಮಾಡಿದ ಪೂನಮ್‌ -ಮಿಥಾಲಿ ಜೋಡಿ,ದ. ಆಫ್ರಿಕಾ ವಿರುದ್ಧ ಭಾರತಕ್ಕೆ ಸರಣಿ ಗೆಲುವು

ಸಂಘಟಿತ ಹೋರಾಟ ನಡೆಸಿದ ಭಾರತ ಮಹಿಳೆಯರ ಕ್ರಿಕೆಟ್‌ ತಂಡ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಐದು ವಿಕೆಟ್‌ಗಳ ಜಯ ಸಾಧಿಸಿತು. ಇದರೊಂದಿಗೆ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಮಿಥಾಲಿ ರಾಜ್‌ ಬಳಗ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿತು.

ವಡೋದರ: ಸಂಘಟಿತ ಹೋರಾಟ ನಡೆಸಿದ ಭಾರತ ಮಹಿಳೆಯರ ಕ್ರಿಕೆಟ್‌ ತಂಡ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಐದು ವಿಕೆಟ್‌ಗಳ ಜಯ ಸಾಧಿಸಿತು. ಇದರೊಂದಿಗೆ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಮಿಥಾಲಿ ರಾಜ್‌ ಬಳಗ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿತು.

ದಕ್ಷಿಣ ಆಫ್ರಿಕಾ ನೀಡಿದ 248 ರನ್‌ ಗುರಿ ಹಿಂಬಾಲಿಸಿದ ಭಾರತ ಆಟ ನಿಧಾನಗತಿಯಿಂದ ಕೂಡಿತ್ತು. ಆರಂಭಿಕರಾದ ಜೆಮಿಮಾ ರೋಡ್ರಿಗಸ್‌ (18) ಹಾಗೂ ಪ್ರಿಯಾ ಪೂನಿಯಾ (20) ಅವರನ್ನು ಕ್ರಮವಾಗಿ ಅಯಾಬೊಂಗಾ ಖಾಖ ಹಾಗೂ ಶಬ್ನಿಮ್‌ ಇಸ್ಮಾಯಿಲ್‌ ಅವರು ಔಟ್‌ ಮಾಡಿದರು. ನಂತರ ಮೂರನೇ ವಿಕೆಟ್‌ಗೆ ಜತೆಯಾದ ನಾಯಕಿ ಮಿಥಾಲಿ ರಾಜ್‌ ಹಾಗೂ ಪೂನಮ್‌ ರಾವತ್‌ ಜೋಡಿ ಅಮೋಘ ಬ್ಯಾಟಿಂಗ್‌ ಮಾಡಿತು. ಈ ಜೋಡಿ ತಂಡದ ಮೊತ್ತವನ್ನು 195ರವರೆಗೂ ಹಿಗ್ಗಿಸಿದರು. 

ಅದ್ಭುತ ಬ್ಯಾಟಿಂಗ್‌ ಮಾಡಿದ ಪೂನಮ್‌ ರಾವತ್‌ 92 ಎಸೆತಗಳಲ್ಲಿ65 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಮತ್ತೊಂದು ತುದಿಯಲ್ಲಿ ಸೊಗಸಾದ ಬ್ಯಾಟಿಂಗ್‌ ಮಾಡಿದ ನಾಯಕಿ ಮಿಥಾಲಿ ರಾಜ್‌ ಅವರು 82 ಎಸೆತಗಳಲ್ಲಿ 66 ರನ್‌ ಗಳಿಸಿ ತಂಡವನ್ನು ಗೆಲುವಿನ ಸಮೀಪ ತಲುಪಿಸಿತು. ಕೊನೆಯ ಹಂತದಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಅವರು ಸ್ಫೋಟಕ 39 ಗಳಿಸಿ ಭಾರತಕ್ಕೆ ಗೆಲುವಿನ ದಡ ಸೇರಿಸಿದರು. ಒಟ್ಟಾರೆ, ಭಾರತ 48 ಓವರ್‌ಗಳಿಗೆ ಐದು ವಿಕೆಟ್‌ ಕಳೆದುಕೊಂಡು 248 ರನ್‌ ಗಳಿಸಿ ಜಯ ಸಾಧಿಸಿತು. ಆಫ್ರಿಕಾ ಪರ ಅಯಾಬೊಂಗಾ ಖಾಖ ಮೂರು ವಿಕೆಟ್‌ ಕಿತ್ತರು.

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ನಿಗದಿತ 50 ಓವರ್‌ಗಳಲ್ಲಿ 6 ನಷ್ಟಕ್ಕೆ 247 ರನ್‌ ದಾಖಲಿಸಿತು. ಆಫ್ರಿಕಾ ಪರ ಲಾರಾ ವೊಲ್ವಾರ್ಡ್ 98 ಎಸೆತಗಳಲ್ಲಿ 69 ರನ್‌ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಮಿಗ್ನೋನ್‌ ಪ್ರೀಜ್‌ 44 ರನ್‌ ಹಾಗೂ ಲಾರಾ ಗುಡಾಲ್‌ 38 ರನ್‌ ಗಳಿಸಿದರು.  ಭಾರತದ ಪರ ಶಿಖಾ ಪಾಂಡೆ, ಏಕ್ತ್‌ ಬಿಷ್ಟ್‌ ಹಾಗೂ ಪೂನಮ್‌ ಯಾದವ್‌ ತಲಾ ಎರಡು ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್‌

ದಕ್ಷಿಣ ಆಫ್ರಿಕಾ: 50 ಓವರ್‌ಗಳಲ್ಲಿ 246/ 6 (ಲಾರಾ ವೊಲ್ವಾರ್ಡ್ 69, ಮಿಗ್ನೋನ್‌ ಪ್ರೀಜ್‌ 44, ಲಾರಾ ಗುಡಾಲ್‌ 38; ಶಿಖಾ ಪಾಂಡೆ 38 ಕ್ಕೆ 2, 45 ಕ್ಕೆ 2, ಪೂನಮ್‌ ಯಾದವ್‌ 42 ಕ್ಕೆ 2)
ಭಾರತ: 48 ಓವರ್‌ಗಳಲ್ಲಿ 248/5 (ಮಿಥಾಲಿ ರಾಜ್‌ 66, ಪೂನಮ್‌ ರಾವತ್‌ 65, ಹರ್ಮನ್‌ಪ್ರೀತ್‌ ಕೌರ್‌  39; ಅಯಾಬೊಂಗಾ ಖಾಖ 63 ಕ್ಕೆ 3)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

BJP, RSS ನಡುವೆ ಭಿನ್ನಾಭಿಪ್ರಾಯ ಇರಬಹುದು, ಆದರೆ ಸಂಘರ್ಷ ಇಲ್ಲ: ಮೋಹನ್ ಭಾಗವತ್

"ಭಾರತೀಯರು ಬಗ್ಗದೇ ಹೋದರೆ...": ಹತಾಶಗೊಂಡ ಟ್ರಂಪ್ ಸಲಹೆಗಾರನಿಂದ ನೇರಾನೇರ ಬೆದರಿಕೆ!

SCO summit: ಟ್ರಂಪ್ ಗೆ ಸೆಡ್ಡು; ಚೀನಾ, ರಷ್ಯಾ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಭೆಗೆ ಪ್ರಧಾನಿ ಮೋದಿ ಸಜ್ಜು; ದಿಗ್ಗಜರ ಸಮಾಗಮದ ಮೇಲೆ ಜಗತ್ತಿನ ಕಣ್ಣು!

ಧರ್ಮಸ್ಥಳ ಪ್ರಕರಣ: ದೂರುದಾರನ ಮಂಪರು ಪರೀಕ್ಷೆಗೆ ಸೌಜನ್ಯ ತಾಯಿ ಒತ್ತಾಯ; ಹೊಸ ದೂರು ದಾಖಲು!

News headlines 28-08-2025 | ಚಾಮುಂಡಿ ದೇವರು ಹಿಂದೂಗಳ ಆಸ್ತಿ ಅಲ್ಲ- DK Shivakumar; ಪ್ರಮೋದಾ ದೇವಿ ಒಡೆಯರ್ ಪ್ರತಿಕ್ರಿಯೆ ಏನು..?; ಬೀದರ್‌: ಭಾರಿ ಮಳೆ, ಹಲವು ಸೇತುವೆ ಬಂದ್; ಕಾಂಗ್ರೆಸ್ ಶಾಸಕ ವಿರೇಂದ್ರ ಪಪ್ಪಿ ಮತ್ತೆ ED ಕಸ್ಟಡಿಗೆ

SCROLL FOR NEXT