ಕ್ರಿಕೆಟ್

3ನೇ ಟೆಸ್ಟ್: ದ.ಆಫ್ರಿಕಾ ವಿರುದ್ಧ ಭಾರತಕ್ಕೆ ಇನ್ನಿಂಗ್ಸ್ ಮತ್ತು 202 ರನ್ ಗಳ ಭರ್ಜರಿ ಜಯ

Srinivasamurthy VN

ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಇನ್ನಿಂಗ್ಸ್ ಮತ್ತು 202 ರನ್ ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿದೆ.

ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ನೀಡಿದ್ದ 497 ರನ್ ಗಳ ಬೃಹತ್ ರನ್ ಗಳ ಗಳನ್ನು ದಾಟಲು ಎರಡೂ ಇನ್ನಿಂಗ್ಸ್ ನಲ್ಲಿ ಪರದಾಡಿದ ಫಾಫ್ ಡುಪ್ಲೆಸಿಸ್ ಪಡೆ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 133 ರನ್ ಗಳಿಗೆ ಆಲೌಟ್ ಆಗುವ ಮೂಲಕ ಭಾರತದ ವಿರುದ್ಧ ಇನ್ನಿಂಗ್ಸ್ ಮತ್ತು 202 ರನ್ ಗಳ ಅಂತರದಲ್ಲಿ ಮಂಡಿಯೂರಿದೆ. ಆ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 3-0 ಅಂತರದಲ್ಲಿ ಹೀನಾಯವಾಗಿ ಸೋತಿದೆ.

ಎರಡನೇ ಇನ್ನಿಂಗ್ಸ್ ನಲ್ಲಿ ಭಾರತೀಯ ಬೌಲರ್ ಗಳ ಸಾಂಘಿಕ ದಾಳಿಗೆ ದಕ್ಷಿಣ ಆಫ್ರಿಕ ತತ್ತರಿಸಿ ಹೋಗಿದ್ದು, ಬ್ರ್ಯೂನ್ ಗಳಿಸಿದ 30 ರನ್ ಗಳ ಆಫ್ರಿಕಾ ಪರ ಬ್ಯಾಟ್ಸ್ ಮನ್ ಗಳಿಸಿದ ಗರಿಷ್ಠ ಸ್ಕೋರ್ ಆಗಿದೆ. ಆಫ್ರಿಕಾದ ಮೂವರು ಶೂನ್ಯ ಸುತ್ತಿದ್ದರೆ, ನಾಲ್ಕು ಮಂದಿ ಒಂದಂಕಿ ಮೊತ್ತಕ್ಕೆ ಔಟಾಗಿರುವುದು ಭಾರತದ ಪ್ರಭಾವಿ ಬೌಲಿಂಗ್ ದಾಳಿಗೆ ಸಾಕ್ಷಿಯಾಗಿತ್ತು.

ಇನ್ನು ಎರಡನೇ ಇನ್ನಿಂಗ್ಸ್ ನಲ್ಲಿ ಭಾರತದ ಪರ ಮಹಮದ್ ಶಮಿ 3 ವಿಕೆಟ್ ಪಡೆದರೆ, ಉಮೇಶ್ ಯಾದವ್ ಮತ್ತು ನದೀಪ್ ತಲಾ 2 ವಿಕೆಟ್ ಪಡೆದರು. ಅಶ್ವಿನ್ ಮತ್ತು ಜಡೇಜಾ ತಲಾ 1 ವಿಕೆಟ್ ಪಡೆದರು.

SCROLL FOR NEXT