ಉಮೇಶ್ ಬೌನ್ಸರ್‌ಗೆ ಕುಸಿದು ಬಿದ್ದ ಎಲ್ಗರ್, ಪಂದ್ಯದಿಂದಲೇ ಔಟ್; ಭಯಾನಕ ವಿಡಿಯೋ!

ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಎಲ್ಗರ್ ಟೀಂ ಇಂಡಿಯಾದ ವೇಗಿ ಉಮೇಶ್ ಯಾದವ್ ಬೌನ್ಸರ್ ಗೆ ಕುಸಿದು ಬಿದ್ದಿದ್ದು ಗಾಯಗೊಂಡಿರುವ ಅವರು ಪಂದ್ಯದಿಂದಲೆ ಔಟ್ ಆಗಿದ್ದಾರೆ.
ಉಮೇಶ್-ಎಲ್ಗರ್
ಉಮೇಶ್-ಎಲ್ಗರ್

ರಾಂಚಿ: ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಎಲ್ಗರ್ ಟೀಂ ಇಂಡಿಯಾದ ವೇಗಿ ಉಮೇಶ್ ಯಾದವ್ ಬೌನ್ಸರ್ ಗೆ ಕುಸಿದು ಬಿದ್ದಿದ್ದು ಗಾಯಗೊಂಡಿರುವ ಅವರು ಪಂದ್ಯದಿಂದಲೆ ಔಟ್ ಆಗಿದ್ದಾರೆ. 

ರಾಂಚಿಯಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಉಮೇಶ್ ಯಾದವ್ ಅವರ ಬೌನ್ಸರ್ ಎಲ್ಗರ್ ಅವರ ಹೆಲ್ಮೆಟ್ ಗೆ ತಗುಲಿತ್ತು. ಈ ವೇಳೆ ಕುಸಿದು ಬಿದ್ದ ಅವರನ್ನು ಮೈದಾನದಿಂದ ಹೊರಗೆ ಕರೆದುಕೊಂಡು ಹೋಗಲಾಯಿತು. 

ಎಲ್ಗರ್ 29 ಎಸೆತಗಳಲ್ಲಿ 16 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದರು ಆದರೆ ಉಮೇಶ್ ಬೌನ್ಸರ್ ಗೆ ಗಾಯಗೊಂಡು ಅವರು ಪಂದ್ಯದಿಂದ ಹೊರಗುಳಿಯಲಿದ್ದಾರೆ. ಉಮೇಶ್ ಮಾರಕ ಬೌಲಿಂಗ್ ದಾಳಿಯ ವಿಡಿಯೋ ಸದ್ಯ ವೈರಲ್ ಆಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com