ಕ್ರಿಕೆಟ್

ಟೆಸ್ಟ್ ಕ್ರಿಕೆಟ್ ನಲ್ಲಿ ಶಮಿ ವಿಚಿತ್ರ ದಾಖಲೆ, 6 ಇನ್ನಿಂಗ್ಸ್ ಗಳಲ್ಲಿ 8 ಎಸೆತ, ಗಳಿಸಿದ್ದು ಎಷ್ಟು ರನ್ ಗೊತ್ತಾ?

Srinivasamurthy VN

ಜಮೈಕಾ: ವೆಸ್ಟ್ ಇಂಡೀಸ್ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ವೇಗಿ ಇಶಾಂತ್ ಶರ್ಮಾ ಅರ್ಧಶತಕ ಗಳಿಸಿ ತಮ್ಮ ಬ್ಯಾಟಿಂಗ್ ತಾಕತ್ತು ಪ್ರದರ್ಶಸಿದ ಬೆನ್ನಲ್ಲೇ ಇದೀಗ ಇದೇ ಟೆಸ್ಟ್ ನಲ್ಲಿ ಮತ್ತೋರ್ವ ಭಾರತೀಯ ಬೌಲರ್ ಮಹಮದ್ ಶಮಿ ಕಳಪೆ ಬ್ಯಾಟಿಂಗ್ ಮೂಲಕ ವಿಚಿತ್ರ ದಾಖಲೆ ನಿರ್ಮಾಣ ಮಾಡಿದ್ದಾರೆ.

ಹೌದು.. ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ ತಂಡ 2ನೇ ಟೆಸ್ಟ್ ಪಂದ್ಯದಲ್ಲೂ ಗೆಲುವಿನ ಸನಿಹದಲ್ಲಿದೆ. ಏತನ್ಮಧ್ಯೆ ಭಾರತದ ಪ್ರಮುಖ ವೇಗಿ ಮಹಮದ್ ಶಮಿ ಬ್ಯಾಟಿಂಗ್ ನಲ್ಲಿ ವಿಚಿತ್ರ ದಾಖಲೆ ನಿರ್ಮಾಣ ಮಾಡಿದ್ದಾರೆ. ವಿಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲೂ ಶಮಿ ಶೂನ್ಯ ಸಾಧನೆ ಮಾಡುವ ಮೂಲಕ ಟೆಸ್ಟ್ ಕ್ರಿಕೆಟ್ ಸತತ 6ನೇ ಇನ್ನಿಂಗ್ಸ್ ನಲ್ಲಿ ಶಮಿ ಶೂನ್ಯ ಸಾಧನೆ ಮಾಡಿದಂತಾಗಿದೆ.

ಈ ಹಿಂದೆ ಶಮಿ ಆಸ್ಟ್ಕೇಲಿಯಾ ಪ್ರವಾಸದಿಂದ ಈ ವರೆಗಿನ ವೆಸ್ಟ್ ಇಂಡೀಸ್ ಪ್ರವಾಸದ ಟೆಸ್ಟ್ ಸರಣಿಗಳಲ್ಲಿ ಸತತ ಆರು ಇನ್ನಿಂಗ್ಸ್ ಗಳಲ್ಲಿ ಶೂನ್ಯಕ್ಕೆ ಔಟ್ ಆಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಅಡಿಲೇಡ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟ್ ಆಗಿದ್ದ ಶಮಿ ಬಳಿಕ ಪರ್ತ್ ನಲ್ಲಿ ನಡೆದ ಟೆಸ್ಟ್ ನ ಎರಡೂ ಇನ್ನಿಂಗ್ಸ್ ಗಳಲ್ಲಿ ಶೂನ್ಯ ಸಂಪಾದಿಸಿದ್ದರು. ಬಳಿಕ ಮೆಲ್ಬೋರ್ನ್ ಪಂದ್ಯದಲ್ಲಿ ಶೂನ್ಯಕ್ಕೆ ಓಟ್ ಆಗಿದ್ದರು. ಇನ್ನು ಹಾಲಿ ವಿಂಡೀಸ್ ಪ್ರವಾಸದಲ್ಲಿ ನಾರ್ಥ್ ಸೌಂಡ್ ನಲ್ಲಿ, ಕಿಂಗ್ ಸ್ಟನ್ ನಲ್ಲೂ ಶೂನ್ಯಕ್ಕೆ ಔಟ್ ಆಗುವ ಮೂಲಕ ಸತತ ಆರು ಇನ್ನಿಂಗ್ಸ್ ನಲ್ಲಿ ಶೂನ್ಯಕ್ಕೆ ಔಟ್ ಆದ ಕಳಪೆ ದಾಖಲೆ ನಿರ್ಮಾಣ ಮಾಡಿದ್ದಾರೆ.

SCROLL FOR NEXT