ಕ್ರಿಕೆಟ್

2ನೇ ಏಕದಿನ: ಆಕ್ಲೆಂಡ್ ನಲ್ಲಿ ದಾಖಲೆ ಬರೆದ ರಾಸ್ ಟೇಲರ್-ಜೇಮಿಸನ್ ಜೋಡಿ

Srinivasamurthy VN

ಆಕ್ಲೆಂಡ್: ಭಾರತದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ನ ರಾಸ್ ಟೇಲರ್ ಮತ್ತು ಜೇಮೀಸನ್ ಜೋಡಿ ದಾಖಲೆ ನಿರ್ಮಾಣ ಮಾಡಿದೆ.

ಹೌದು.. ಆಕ್ಲೆಂಡ್ ನಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಕೆಳ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ 9ನೇ ವಿಕೆಟ್ ಜೊತೆಯಾಟದಲ್ಲಿ ದಾಖಲೆಯ 76ರನ್ ಗಳಿಸಿದೆ. ಆ ಮೂಲಕ ಆಕ್ಲೆಂಡ್ ಮೈದಾನದಲ್ಲಿ 9 ವಿಕೆಟ್ ನಲ್ಲಿ ಗರಿಷ್ಠ ರನ್ ಪೇರಿಸಿದ ಜೋಡಿ ಎಂಬ ಕೀರ್ತಿಗೆ ಭಾಜನವಾಗಿದೆ. ಈ ಹಿಂದೆ 1993ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ಪರ ಜಿ ಲಾರ್ಸೆನ್ ಮತ್ತು ಸಿ ಪ್ರಿಂಗಲ್ ಜೋಡಿ ಆಕ್ಲೆಂಡ್ ಮೈದಾನದಲ್ಲಿ 9ನೇ ವಿಕೆಟ್ ಜೊತೆಯಾಟದಲ್ಲಿ 54 ರನ್ ಗಳಿಸಿತ್ತು. ಇದು ಈ ವರೆಗಿನ ದಾಖಲೆಯಾಗಿತ್ತು. ಇದಾದ ಬಳಿಕ 2000ರಲ್ಲಿ ಮತ್ತದೇ ಆಸ್ಟ್ರೇಲಿಯಾ ವಿರುದ್ಧ ಮೆಕ್ ಮಿಲನ್ ಮತ್ತು ಡೇನಿಯಲ್ ವೆಟ್ಟೋರಿ 9 ವಿಕೆಟ್ ಜೊತೆಯಾಟದಲ್ಲಿ 35ರನ್ ಕಲೆಹಾಕಿತ್ತು.

ಇನ್ನು ನ್ಯೂಜಿಲೆಂಡ್ ಪರ ಭಾರತದ ವಿರುದ್ಧ 9ನೇ ವಿಕೆಟ್ ಜೊತೆಯಾಟದಲ್ಲಿ ಬಂದ 3ನೇ ದಾಖಲೆ ಇದಾಗಿದೆ. ಇದಕ್ಕೂ ಮೊದಲು 2016ರಲ್ಲಿ ಮೊಹಾಲಿಯಲ್ಲಿ ಎಂ ಹೆನ್ರಿ ಮತ್ತು ನೀಶಮ್ ಜೋಡಿ 84ರನ್ ಕಲೆಹಾಕಿತ್ತು. ಇದು ಮೊದಲ ಸ್ಥಾನದಲ್ಲಿದ್ದು, 2009ರಲ್ಲಿ ಮಿಲ್ಸ್ ಮತ್ತು ಸೌಥಿ ಜೋಡಿ 83 ರನ್ ಕಲೆಹಾಕಿದ್ದರು. ಇದು 2ನೇ ಸ್ಥಾನದಲ್ಲಿದೆ.

SCROLL FOR NEXT