ಕ್ರಿಕೆಟ್

ಭಾರತ ಕ್ರಿಕೆಟ್ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ ತೂಗುಯ್ಯಾಲೆಯಲ್ಲಿ: ಕೇಂದ್ರದ ಅಂಗಳದಲ್ಲಿ ಚೆಂಡು

Harshavardhan M

ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ಹೊಸ ತಳಿ ಓಮಿಕ್ರಾನ್ ಭೀತಿ ಸೃಷ್ಟಿ ಮಾಡಿದೆ. ಹಾಂಗ್ ಕಾಂಗ್, ದಕ್ಷಿಣ ಆಫ್ರಿಕಾ ಮತ್ತು ಬೋಟ್ಸ್ವಾನಾದಲ್ಲಿ 50 ಸೋಂಕಿತ ಪ್ರಕರಣಗಳು ಕಂಡುಬಂದಿವೆ.

ಇಲ್ಲಿಯವರೆಗೆ ಭಾರತದಲ್ಲಿ ಈ ಹೊಸ ರೂಪಾಂತರಿಯ ಒಂದೂ ಪ್ರಕರಣ ಕಂಡುಬಂದಿಲ್ಲ. ಇದೆಲ್ಲದರ ನಡುವೆ ಮುಂದಿನ ತಿಂಗಳು ಭಾರತ ಕ್ರಿಕೆಟ್ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ ಆರಂಭವಾಗುತ್ತಿದೆ. ಬಿಸಿಸಿಐ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಬೇಕೋ ಬೇಡವೋ ಎಂಬುದರ ಸಲಹೆಗಾಗಿ ಕೇಂದ್ರಸರ್ಕಾರವನ್ನು ಎದುರುನೋಡುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಡಿಸೆಂಬರ್ 17 ರಿಂದ ಜನವರಿ 26 ರವರೆಗೆ ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್, ಪ್ರಾಲ್, ಕೇಪ್ ಟೌನ್ ಮತ್ತು ಸೆಂಚುರಿಯನ್ ನಲ್ಲಿ ಒಟ್ಟು 10 ಪಂದ್ಯಗಳು ನಡೆಯಲಿವೆ. 

3 ಟೆಸ್ಟ್ ಪಂದ್ಯಗಳು, 3 ಒಂದು ದಿನದ ಪಂದ್ಯಗಳು ಮತ್ತು 4 ಟಿ-20 ಪಂದ್ಯಗಳು ನಡೆಯಲಿವೆ, ಆದರೆ ಹೊಸ ರೂಪಾಂತರಿ ಪತ್ತೆಯಾಗಿರುವುದರಿಂದ ಭಾರತೀಯ ಕ್ರಿಕೆಟ್ ತಂಡದಲ್ಲಿ ಆತಂಕ ಮನೆ ಮಾಡಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 10 ಪಂದ್ಯಗಳ ಪೈಕಿ 5 ಕೇಪ್ ಟೌನ್ ನಲ್ಲಿ 3 ಪಾರ್ಲ್‌ನಲ್ಲಿ ಮತ್ತು 1-1 ಪಂದ್ಯವನ್ನು ಜೋಹಾನ್ಸ್‌ಬರ್ಗ್ ಮತ್ತು ಸೆಂಚುರಿಯನ್‌ನಲ್ಲಿ ಆಡಬೇಕಾಗಿದೆ. 

ಜೋಹಾನ್ಸ್‌ಬರ್ಗ್ ಮತ್ತು ಸೆಂಚುರಿಯನ್ ನಗರಗಳು ಗೊಟೆಂಗ್ ಪ್ರಾಂತ್ಯದ ಅಡಿಯಲ್ಲಿ ಬರುತ್ತವೆ. ಪ್ರಸ್ತುತ ಹೊಸ ರೂಪಾಂತರಿ ಓಮಿಕ್ರಾನ್ ನಿಂದಾಗಿ ಈ ಪ್ರದೇಶಗಳು ಹೆಚ್ಚು ಪ್ರಭಾವಿತವಾಗಿವೆ.

SCROLL FOR NEXT