ಕ್ರಿಕೆಟ್

ಟಿ20 ವಿಶ್ವಕಪ್: ಪಾಕ್ ವಿರುದ್ಧದ ಸೋಲಿನ ಬೆನ್ನಲ್ಲೇ ಭಾರತಕ್ಕೆ ಮರ್ಮಾಘಾತ, ಹಾರ್ದಿಕ್ ಪಾಂಡ್ಯಗೆ ಗಾಯ, ಆಸ್ಪತ್ರೆಗೆ ರವಾನೆ

Srinivasamurthy VN

ದುಬೈ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿನ ಪಾಕಿಸ್ತಾನದ ವಿರುದ್ಧದ ಸೋಲಿನ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಆಘಾತ ಎದುರಾಗಿದ್ದು, ಪಾಕಿಸ್ತಾನ ವಿರುದ್ಧದ ಬ್ಯಾಟಿಂಗ್ ವೇಳೆ ಹಾರ್ದಿಕ್ ಪಾಂಡ್ಯ ಗಾಯಗೊಂಡಿದ್ದು ಅವರನ್ನು ಸ್ಕಾನಿಂಗ್ ಗಾಗಿ ಆಸ್ಪತ್ರೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಭಾರತ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ 11 ರನ್ ಗಳಿಸಿದ್ದ ಹಾರ್ದಿಕ್ ಪಾಂಡ್ಯ ಹ್ಯಾರಿಸ್ ರಾವಫ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದ್ದರು. ಈ ವೇಳೆಗಾಗಲೇ ಅವರ ಬಲಗೈ ಭುಜಕ್ಕೆ ಪೆಟ್ಟಾಗಿತ್ತು. ಪೆಟ್ಟಿನ ನೋವಿನಿಂದಲೇ ಹಾರ್ದಿಕ್ ಪಾಂಡ್ಯ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದ್ದರು. ಬಳಿಕ ಫೀಲ್ಡಿಂಗ್ ವೇಳೆಯೂ ಅವರು ಮೈದಾನಕ್ಕಿಳಿಯಲಿಲ್ಲ. ಅವರ ಬದಲಿಗೆ ಹೆಚ್ಚುವರಿ ಆಟಗಾರನಾಗಿ ಇಶಾನ್ ಕಿಶನ್ ಫೀಲ್ಡಿಂಗ್ ಮಾಡಿದ್ದರು. 

ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಬಿಸಿಸಿಐ ಮಾಧ್ಯಮ ತಂಡ, 'ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮಾಡುವಾಗ ಬಲ ಭುಜದ ಗಾಯಕ್ಕೆ ತುತ್ತಾದರು. ಅವರನ್ನು ಮುನ್ನೆಚ್ಚರಿಕೆಯಾಗಿ ಸ್ಕ್ಯಾನ್ ಮಾಡಲು ಕರೆದೊಯ್ಯಲಾಗಿದೆ ಎಂದು ಮಾಹಿತಿ ನೀಡಿದೆ.

ಮುಂದಿನ ಪಂದ್ಯಗಳಿಗೆ ಪಾಂಡ್ಯ ಡೌಟ್?
ಭಾರತವು ಮುಂದಿನ ಪಂದ್ಯವನ್ನು ಅಕ್ಟೋಬರ್ 31 ರಂದು ನ್ಯೂಜಿಲೆಂಡ್ ವಿರುದ್ಧ ಆಡಬೇಕಿದೆ. ಆದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಂಡಕ್ಕೆ ಮರಳುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ನಾಕೌಟ್ ಹಂತದವರೆಗೂ ಬೌಲಿಂಗ್ ಮಾಡಲಾರೆ ಎಂದಿದ್ದ ಪಾಂಡ್ಯ
ಇನ್ನು ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮೊದಲೇ ಹಾರ್ದಿಕ್ ಪಾಂಡ್ಯ ನಾಕೌಟ್ ಹಂತದವರೆಗೂ ಬೌಲಿಂಗ್ ಮಾಡಲಾರೆ ಎಂದಿದ್ದರು. ತಮಗೆ ಬೆನ್ನು ನೋವಿನ ಸಮಸ್ಯೆ ಇಲ್ಲ. ಆದರೂ ನಾಕೌಟ್ ಹಂತದವರೆಗೂ ಬೌಲಿಂಗ್ ಮಾಡಲಾರೆ ಎಂದು ಹೇಳಿದ್ದರು.

SCROLL FOR NEXT