ಕ್ರಿಕೆಟ್

ಟಿ20 ವಿಶ್ವಕಪ್: ಪಾಕ್ ವಿರುದ್ಧ ಭಾರತದ ಸೋಲಿನ ಬಗ್ಗೆ ಇತರ ಆಟಗಾರರು ಹೇಳಿದ್ದೇನು?

Harshavardhan M

ಬೆಂಗಳೂರು: ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ಭಾರತ ಪಾಕಿಸ್ತಾನದ ಎದುರು ಅನುಭವಿಸಿದ ಮೊದಲ ಸೋಲು. ಈ ಬಗ್ಗೆ ಇತರೆ ಕ್ರಿಕೆಟಿಗರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಟೀಂ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್‌ ಚೇತೇಶ್ವರ್ ಪೂಜಾರ ಈ ಬಗ್ಗೆ ಕೂ ಮಾಡಿದ್ದು, 'ಭಾರತದ ಪಾಲಿಗೆ ನಿನ್ನೆಯ ಪಂದ್ಯ ಉತ್ತಮ ಆರಂಭವೇನಲ್ಲ, ಆದರೆ ಅತ್ಯುತ್ತಮ ತಂಡವನ್ನು ಹೊಂದಿದ ಪಾಕಿಸ್ತಾನಕ್ಕೆ ಗೆಲುವಿನ ಶ್ರೇಯ ದಕ್ಕಲೇಬೇಕು. ಟಾಸ್ / ಇಬ್ಬನಿ ಖಂಡಿತ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ.  

ಜೊತೆಗೆ ಶಾಹೀನ್ ಅವರ ಆರಂಭಿಕ ಆಟ ಪಂದ್ಯದ ಗತಿಯನ್ನು ಬದಲಿಸಿತು. ಭಾರತ ತಂಡದಲ್ಲಿ ಕೆಲವು ಬದಲಾವಣೆಯಾಗಲು ಮತ್ತು ಇನ್ನಷ್ಟು ಶಕ್ತಿ ಗಳಿಸಿಕೊಳ್ಳಲು ಇನ್ನು ಸಮಯವಿದೆ. ಮುಂದಿನ ಪಂದ್ಯಗಳಲ್ಲಿ ಭಾರತ ಪುಟಿದೇಳುವುದರಲ್ಲಿ ನನಗೆ ಸಂದೇಹವೇ ಇಲ್ಲ!' ಎಂದು ಹೇಳಿದ್ದಾರೆ. 

ಪಾಕ್ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್ , 'ಪಾಕಿಸ್ತಾನವು ಇಂದು ಸಂಘಟಿತ ಮತ್ತು ಸ್ಥಿರ ತಂಡವಾಗಿ ಕಾಣುತ್ತಿದೆ. ರಿಜ್ವಾನ್ ಬಗೆಗಿನ ನಿಲುವು ಮತ್ತು ನಾಯಕತ್ವಕ್ಕೆ ಬಾಬರ್ ಅವರಿಗೆ ಸಂಪೂರ್ಣ ಕ್ರೆಡಿಟ್ ಹೋಗಬೇಕು. ಶಾಹೀನ್ ಮತ್ತು ರೌಫ್ ಅದ್ಭುತ ಬೌಲಿಂಗ್ ನಿಂದ ಗಮನ ಸೆಳೆದರು. 

ಶಾಹೀನ್ ಅವರ ಆರಂಭಿಕ ದಾಳಿಗಳು ಭಾರತದ ಬ್ಯಾಟಿಂಗ್ ಅನ್ನು ಸಂಪೂರ್ಣವಾಗಿ ಕುಗ್ಗಿಸಿತು. ಕೊಹ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಆದರೆ ಬೌಲಿಂಗ್ ಕುರಿತ ಭಾರತದ ಯೋಜನೆ ಹಾಗು  ಒಬ್ಬ ಬೌಲರ್ ಕೊರತೆಯನ್ನು ಎದ್ದು ಕಾಣುತಿತ್ತು. ಬ್ಯಾಟಿಂಗ್ ನಲ್ಲಿ ಆರನೇ ಆಯ್ಕೆಯ ಕೊರತೆ ಭಾರತಕ್ಕೆ ನೋವುಂಟು ಮಾಡಿದೆ' ಎಂದು ಕೂ ಮಾಡಿದ್ದಾರೆ. 

SCROLL FOR NEXT